ಹುನಗುಂದ ಮತಕ್ಷೇತ್ರದ ಒಟ್ಟು ೨,೩೬,೧೬೪ ಮತದಾರರಿದ್ದು, ೧,೧೩,೮೯೮ ಸ್ತ್ರೀಯರು ಮತ್ತು ೧,೧೨,೨೫೩ ಪುರುಷರು ಎರಡನೆಯ ಹಂತದ ಲೋಕಸಭೆ ಚುನಾವಣೆ ನಾಮಪತ್ರ ಏ.೧೨ ರಿಂದ ಆರಂಭ, ಏ.೨೯ ಕೊನೆಯ ದಿನ.

ಹುನಗುಂದ ಮಾರ್ಚ್.20

ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು. ಬಾಗಲಕೋಟಿ ಜಿಲ್ಲೆಯ ಲೋಕಸಭೆ ಚುನಾವಣೆ ಮೇ.೭ ರಂದು ಮತದಾನ, ಜೂ.೪ ರಂದು ಫಲಿತಾಂಶ ಹೊರ ಬರಲಿದೆ. ಮಾ.೧೬ ರಿಂದ ಜೂ.೬ ರವರಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಎಂದು ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೊಟೂರ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಏ.೧೨ ರಿಂದ ಎರಡನೆಯ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆ ಆರಂಭ,ಏ.೧೯ ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನ, ಏ.೨೦ ನಾಮಪತ್ರ ಪರಿಶೀಲನೆ,ಮತ್ತು ಏ.೨೨ರಂದು ನಾಮಪತ್ರ ಹಿಂಪಡೆಯುವ ದಿನವಾಗಿದೆ.ಮೇ ೭ ರಂದು ಮತದಾನ ನಡೆಯಲಿದೆ.ಹುನಗುಂದ ಕ್ಷೇತ್ರದಲ್ಲಿ ೨೦೨೪ರ ದಾಖಲೆಯಂತೆ ಹುನಗುಂದ ತಾಲೂಕಿನ ೬೯ ಗ್ರಾಮಗಳು,ಇಳಕಲ್ಲ ತಾಲೂಕಿನ ೭೩ ಗ್ರಾಮಗಳು ಸೇರಿ ಅವಳಿ ತಾಲೂಕಿನ ಒಟ್ಟು ೧೪೨ ಗ್ರಾಮಗಳ ಪೈಕಿ ಒಟ್ಟು ೨,೨೬,೧೬೪ ಮತದಾರರಲ್ಲಿ ೧,೧೩,೮೯೮ ಮಹಿಳೆಯರು, ೧,೧೨,೨೫೩ ಪುರುಷರು ಮತ್ತು ೧೩ ತೃತೀಯ ಲಿಂಗಿಗಳು ಮತದಾರರಿದ್ದಾರೆ.ಇದರಲ್ಲಿ ೫೪೭೫ ಹೊಸ ಮತದಾರರಿದ್ದಾರೆ.೧೫೧೦ ಜನ ೮೫ ವಯಸ್ಸಿನ ಮತದಾರರಿದ್ದಾರೆ. ಮತ್ತು ೩೩೩೧ ಜನ ಶೇ. ೪೦% ವಿಕಲ ಚೇತನ ಮತದಾರರು ಕೂಡಾ ಸೇರಿದ್ದಾರೆ.೮೫ ವಯಸ್ಸಿನ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಮನೆಯಲ್ಲಿ ಮತದಾನ ಮಾಡಲು ಬಯಸಿದರೆ ಅವರು ಚುನಾವಣೆಯ ಪೂರ್ವದಲ್ಲಿಯೇ ೧೨ ಡಿ ಅರ್ಜಿ ಪಾರ್ಮ್ ತುಂಬಿ ಕೊಟ್ಟರೇ ಅಂತವರು ಮನೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿ ಕೊಡಲಾಗುವುದು.ಇನ್ನು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ ಬಯಸುವರು ಮತ್ತು ಮತದಾನ ಪಟ್ಟಿಯಿಂದ ಹೊರಗುಳಿದವರು ತಮ್ಮ ಹೆಸರನ್ನು ಸೇರಿಸಲು ಏ.೧೯ರವರಗೆ ಅವಕಾಶವನ್ನು ನೀಡಲಾಗಿದೆ. ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಮತಕ್ಷೇತ್ರದ ೨೨೫ ಜನ ನೌಕರರಿಗೆ ಇಡಿಸಿ ನೀಡಲಾಗಿದೆ. ಹುನಗುಂದ ಮತಕ್ಷೇತ್ರದಲ್ಲಿ ಒಟ್ಟು ೨೫೫ ಮತಗಟ್ಟೆಗಳಿದ್ದು, ಅದರಲ್ಲಿ ೪೩ ಸೂಕ್ಷ್ಮ,೧ ಅತಿ ಸೂಕ್ಷ್ಮ ಮತಗಟ್ಟೆಗಳಿವೆ ಎಂದರು.ತಹಶೀಲ್ದಾರ ನಿಂಗಪ್ಪ ಬಿರಾದಾರ ಮಾತನಾಡಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡು ೭ ಗಂಟೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಸೇರಿದಂತೆ ನಿಯಮಕ್ಕೆ ಸಂಬಂಧಿಸಿದಂತೆ ಎಲ್ಲ ಬಗೆಯ ಪೋಸ್ಟರ್ಸ್ ಬ್ಯಾನರ‍್ಸ ಕರಪತ್ರ ಮತ್ತು ಫ್ಲೆಕ್ಸ್ ಬೋರ್ಡಗಳನ್ನು ತೆರವು ಗೊಳಿಸಲಾಗಿದೆ.ರಾಜಕೀಯ ಪಕ್ಷಗಳಿಗೆ ಸಂಬಕಧಿಸಿದಂತೆ ಚುನಾವಣೆ ಮುಗಿಯುವವರೆಗೆ ಯಾವುದೆ ಬೋರ್ಡ ಬ್ಯಾನರಗಳನ್ನು ಕಟ್ಟಲು ಅವಕಾಶ ಇರುವುದಿಲ್ಲ. ಈಗಾಗಲೇ ಹುನಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಂದವಾಡಗಿ,ಗುಡೂರ ಎಸ್.ಸಿ, ಗೂಗಲಮರಿ ಮತ್ತು ಧನ್ನೂರ ಸೇರಿ ೪ ಕಡೆಗಳಲ್ಲಿ ಚಕ್ ಪೋಸ್ಟಗಳನ್ನು ತೆರೆಯಲಾಗಿದ್ದು. ಹೊರ ಜಿಲ್ಲೆ ಮತ್ತು ತಾಲೂಕಗಳಿಂದ ಬರುವ ವಾಹನ ತಪಾಸಣೆಯನ್ನು ಮಾಡಲಾಗುವುದು. ಜೊತೆಗೆ ಮದುವೆ ಮತ್ತು ಸಮಾಜ ಮತ್ತು ಇತರೆ ಶುಭ ಸಮಾರಂಭಗಳನ್ನು ನಡೆಸಲು ಸರಳ ರೀತಿಯಲ್ಲಿ ಅನುಮತಿ ನೀಡಲಾಗುವುದು. ಆದರೆ ಈ ಅನುಮತಿ ಪಡೆಯುವದು ಕಡ್ಡಾಯವಾಗಿದೆ ಎಂದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button