ಸಿಂಚನ ದೊಡಮನಿಗೆ ಕಿಡ್ನಿ ವೈಫಲ್ಯ ಸಹಾಯದ ಹಸ್ತಕ್ಕಾಗಿ ಮೊರೆ.

ಹೂವಿನ ಹಿಪ್ಪರಗಿ ಮಾರ್ಚ್.21

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಮಂಜುನಾಥ್ ದೊಡಮನಿ ಹಾಗೂ ಲಕ್ಷ್ಮಿ ದೊಡಮನಿ ಅವರ ಮಗಳಾದ ಸಿಂಚನ 11 ವರ್ಷ ವಯಸ್ಸು ಐದು ವರ್ಷದ ಹಿಂದೆ ಕಿಡ್ನಿ ವೈಫಲ್ಯ ಆಗಿತ್ತು. ಟೆಂಪರರಿ ಡಯಾಲಿಸಿಸ್ ಮಾಡಿ ಕಿಡ್ನಿ ರಿಕವರಿ ಆಗಿತ್ತು. ನಾವು ಸಾಲ ಮಾಡಿ ಚಿಕಿತ್ಸೆ ಕೊಡ್ಸಿದ್ದೇವೆ 2019 ರಿಂದ 2023 ಡಿಸೆಂಬರ್ ತನಕ ಮಾತ್ರೆಗಳ ಮೇಲೆ ಚಿಕಿತ್ಸೆ ನಡೆದಿತ್ತು. ಈಗ ಜನವರಿಯಿಂದ ಡಯಾಲಿಸಿಸ್ ಮಾಡ್ಸಬೇಕು ಒಂದು ಸಲ ಡಯಾಲಿಸಿಸ್ ಮಾಡಿಸಿದರೆ ಐದು ಸಾವಿರ ರೂಪಾಯಿ ಖರ್ಚು ಬರ್ತಾ ಇದೆ ವಾರದಲ್ಲಿ ಎರಡು ಸಲ ಡಯಾಲಿಸಿಸ್ ಮಾಡ್ಸಬೇಕಂತ ಡಾಕ್ಟರ್ ಹೇಳಿದ್ದಾರೆ. ನಮಗೆ ವಾರದಲ್ಲಿ ಒಂದು ಸಾರಿ ಡಯಾಲಿಸಿಸ್ ಮಾಡಿಸುವ ಶಕ್ತಿ ನಮಗೆ ಇಲ್ಲ. ಮೊದಲು ಯಾರ ಬಳಿಯೂ ಸಹಾಯ ಕೇಳದೇ ನಿಭಾಯಿಸಿದ್ದೇವೆ. ಈಗ ಇರುವ ಒಬ್ಬ ಮಗಳು ಬದುಕು ಉಳಿಸಲು ಸಹಾಯಕ್ಕಾಗಿ ಮೊರೆ ಹೋಗಿದ್ದು, ಆದ್ದರಿಂದ ತಾವು ಸಾರ್ವಜನಿಕರು ಸಂಘ-ಸಂಸ್ಥೆ ಅವರು ಈ ಪುಟ್ಟ ಬಾಲಕಿಯ ಜೀವ ಬದುಕಲಿಕ್ಕೆ ಹಣದ ಸಹಾಯ ಮಾಡಿ ಮತ್ತು ಮಾಡಿಸಿ ನಾವು ಬಡವರು ಕೂಲಿ ಜೀವನ ಸಾಗಿಸುತ್ತಿದ್ದೇವೆ .

ಈ 11 ವರ್ಷದ ಪುಟ್ಟ ಬಾಲಕಿಯ ಜೀವ ಬದುಕಲಿಕ್ಕೆ ಸಾರ್ವಜನಿಕರು ಸಂಘ ಸಂಸ್ಥೆಯರೂ ಮತ್ತು ವ್ಯಾಪಾರಸ್ಥರು, ಗಣ್ಯರು, ರಾಜಕಾರಣಿಗಳು ಸಹಾಯ ಮಾಡಿದರೆ ಈ ಒಂದು ಬಡಜೀವ ಬದುಕಲಿಕ್ಕೆ ತಾವು ಅನುವು ಮಾಡಿ ಕೊಟ್ಟಂತಾಗುತ್ತದೆ. ಆದರೆ ಈಗ ಹೆಚ್ಚಿನ ಚಿಕಿತ್ಸೆ ನೀಡಲು ಆರ್ಥಿಕ ಸಹಾಯದ ಅಗತ್ಯವಿದೆ. ನಮಗೆ ಹೊಲ ಇಲ್ಲ ಕೂಲಿ ಕೆಲಸ ಮಾಡಿ ಬದುಕುತ್ತಿವೆ ತಾವು ನಮ್ಮ ನಿಮ್ಮ ಕುಮಾರಿ ಸಿಂಚನ ಮಗಳಿಗೆ ನೀವೆ ಅವಳಿಗೆ ದೇವರ ರೂಪದಲ್ಲಿ ಬಂದು ಸಹಾಯ ಮಾಡಿ ಅಂತಾ ಕೈ ಮುಗಿದು ಬೇಡಿಕೊಳ್ಳುತ್ತೇವೆ. ಆರ್ಥಿಕ ಸಹಾಯಕ್ಕಾಗಿ ಸಾರ್ವಜನಿಕರ ಮೊರೆ ಹೋಗಿದ್ದು, ಜನರ ಸಹಕಾರ ಸಂಸಾರಕ್ಕೆ ಅಗತ್ಯವಿದೆ. ಸಿಂಚನ ಮಂಜುನಾಥ ದೊಡ್ಡಮನಿ ಫೋನ್ ಪೇ ನಂಬರ್ 6362497064 ಅಕೌಂಟ್ ನಂಬರ್ 40740303027.IFC cod SBIN0040857.ಆರ್ಥಿಕ ಸಹಕಾರ ನೀಡಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ Tel: 6362497064 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.

ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button