ರಾಜ್ಯ ಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್, ವಿಕ್ಟರಿ ಜಿಮ್ ನ ಹುಸೇನ್ ಭಾಷ 3 ನೇ. ಸ್ಥಾನ.
ಹೊಸಪೇಟೆ ಮಾರ್ಚ್.21

ಇದೇ ಮಾರ್ಚ್ 14 ಮತ್ತು 15 ರಂದು ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದಂತಹ ರಾಜ್ಯಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆ ವಿಕ್ಟರಿ ಜಿಮ್ ನ ಕ್ರೀಡಾಪಟು ಹುಸೇನ್ ಭಾಷ 59 ಕೆಜಿ ಸೀನಿಯರ್ ವಿಭಾಗದಲ್ಲಿ ಭಾಗವಹಿಸಿ ಸ್ಕ್ವಾಟ್ ಬೆಂಚ್ ಪ್ರೆಸ್ ಹಾಗೂ ಡೆಡ್ ಲಿಫ್ಟ್ ಸೇರಿದಂತೆ 407.5 ಕೆಜಿ ಭಾರ ಎತ್ತುವುದರ ಮೂಲಕ ತೃತೀಯ ಸ್ಥಾನ ಪಡೆದಿರುತ್ತಾರೆ.ಇವರಿಗೆ ಅಂತರರಾಷ್ಟ್ರೀಯ ಕ್ರೀಡಾಪಟು ಆದಂತಹ ವಿಕ್ಟರಿ ಜಿಮ್ ನ ವಲಿಬಾಷ ಮತ್ತು ರಾಷ್ಟ್ರೀಯ ಕ್ರೀಡಾಪಟು ವಿಜಯವಾಣಿ ಹಾಗೂ ವಿಕ್ಟರಿ ಜಿಮ್ ನ ಎಲ್ಲಾ ಕ್ರೀಡಾಪಟುಗಳು ನಗರದ ಎಲ್ಲಾ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾ ಪ್ರೋಸ್ತಾಹಕರು ಶುಭ ಹಾರೈಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಾಲತೇಶ್.ಶೆಟ್ಟರ್.ಹೊಸಪೇಟೆ