ಧೂಳಖೇಡ ಚೆಕ್ ಪೋಸ್ಟ್ ನಲ್ಲಿ 4.5 ₹ ಲಕ್ಷ ನಗದು ವಶ.
ಇಂಡಿ ಮಾರ್ಚ್.21

ಲೋಕಸಭಾ ಚುನಾವಣಾ ಹಿನ್ನಲೆ ಮಹಾರಾಷ್ಟ್ರ ರಾಜ್ಯದ ಮುಖಾಂತರ ಕರ್ನಾಟಕ ರಾಜ್ಯಕ್ಕೆ ಒಳಗೆ ಬರುವ ಪ್ರತಿಯೊಂದು ವಾಹನಗಳ ಮೇಲೆ ತಪಾಸಣೆ ಮಾಡುತ್ತಿದ್ದಾಗ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾದ 4 ಲಕ್ಷ 50 ಸಾವಿರ ರೂಪಾಯಿಗಳು ಜಪ್ತಿ ಮಾಡಲಾಗಿದೆ.ಮಹಾರಾಷ್ಟ್ರರಾಜ್ಯದ ಔರಂಗಾಬಾದ ಜಿಲ್ಲೆಯ ರೋಶನ ಗಜಾನನ ಕರನಾಶೆ ಯಾವುದೆ ಅಧಿಕೃತ ದಾಖಲೆ ಇಲ್ಲದೆ ಎಮ್ ಹೆಚ್ 20 ಎಫ್ ಯು 2039 ಕಾರ್‌ನಲ್ಲಿ 4 ಲಕ್ಷ 50 ಸಾವಿರ ರೂಪಾಯಿ ನಗದು ಧೂಳಖೇಡ ಮಾರ್ಗದಿಂದ ಬೆಂಗಳೂರ ಕಡೆ ಹೊರಟಿದ್ದರು. ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಈ ಹಣ ಜಪ್ತಿ ಜಿಲ್ಲಾ ಸೀಜರ್ ಕಮೀಟಿಯವರಿಗೆ ಒಪ್ಪಸಲಾಗಿದೆ ಎಂದು ತಿಳಿದು ಬಂದಿದೆ.ಈ ವೇಳೆ ಎಸ್ ಎಸ್ ಟಿ ಟಿಮ್ ನಂ 13 ರ ಅಧಿಕಾರಿಗಳಾದ ಪರಮೇಶ್ವರ ತಳವಾರ, ಎಸ್ ಜೆ ಪೂಜಾರಿ, ಎನ್ ಎಸ್ ಸಾತಲಗಾಂವ, ಪಿಎಸ್‌ಐ ಹೊನ್ನಪ್ಪ ತಳವಾರ, ಇದ್ದರು. ಈ ಪ್ರಕರಣ ಕುರಿತು ಝಳಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ