ಪ್ರತಿ ಕೂಲಿ ಕಾರ್ಮಿಕರು ಆರೋಗ್ಯ ಶಿಬಿರದ ಲಾಭ ಪಡೆಯಿರಿ – ಪಿಡಿಓ ಕುಂಬಾರ.
ನಾಗೂರು ಮಾರ್ಚ್.21

ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿಯೇ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ತಿಪ್ಪಣ ಕುಂಬಾರ ತಿಳಿಸಿದರು.ಹುನಗುಂದ ತಾಲೂಕಿನ ನಾಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸಸಿಗೆ ನೀರುಣಿಸಿವುದರ ಮೂಲಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಪ್ಪಣ ಕುಂಬಾರ, ಕೂಲಿ ಕಾರ್ಮಿಕರು ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ನಿಮ್ಮಗಾಗಿಯೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೆಲಸ ಮಾಡುವ ಸ್ಥಳದಲ್ಲಿಯೇ ಆಗಮಿಸಿ, ಆರೋಗ್ಯ ತಪಾಸಣೆ ಮಾಡುತ್ತಿದ್ದು, ಬೇಜವಾಬ್ದಾರಿ ತೊರದೇ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದು ತಿಳಿಸಿದರು.ಬಳಿಕ ಮಾತನಾಡಿದ ತಾಂತ್ರಿಕ ಸಂಯೋಜಕ ನವೀನ್ ಹಂಚಾಟೆ, ಕೂಲಿ ಕಾರ್ಮಿಕರು ಆರೋಗ್ಯ ಅಧಿಕಾರಿಗಳು ನೀಡುವ ಸಲಹೆಯನ್ನು ಪ್ರತಿಯೊಬ್ಬರು ಪಾಲಿಸಿ ಆರೋಗ್ಯವಾಗಿರಿ ಎಂದು ತಿಳಿಸಿದರು.ಇನ್ನು ತಾಪಂ ಐಇಸಿ ಸಂಯೋಜಕ ಬಸವರಾಜ ಕೊಪ್ಪದ ಮಾತನಾಡಿ, ಪ್ರತಿ ವರ್ಷ ನರೇಗಾ ಕೂಲಿಕಾರರಿಗಾಗಿಯೇ ಆರೋಗ್ಯ ಶಿಬಿರ ಹಮ್ಮಿಕೊಳ್ಳುತ್ತೇವೆ. ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು. ಜೊತೆಗೆ ಮಹಿಳೆಯರ ಕೂಲಿ ಬೇಡಿಕೆ ಕಡಿಮೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದರು.ಇನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಿ. ಎಸ್ ಮಠಪತಿ ಮಾತನಾಡಿ, ಬೇಸಿಗೆ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ದ್ರವ ರೂಪದ ಆಹಾರವನ್ನು ಸೇವಿಸಲು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಪ್ಪಣ ಕುಂಬಾರ , ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಅಧ್ಯಕ್ಷೆ ಶಿವಗಂಗವ್ವ ನಾಗೂರ, ತಾಂತ್ರಿಕ ಸಹಾಯಕ ಲಾಲಾಸಾಬ್ ಗುರಗುಣಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಎ. ಎಚ್. ಹಿರೇಅಮರಗೌಡ್ರ, ಗ್ರಾಮ ಪಂಚಾಯಿತಿ ಸದಸ್ಯ ಅಜ್ಜಪ್ಪ ನರಗುಂದ, ಆರೋಗ್ಯ ಇಲಾಖೆ ಸಿಬ್ಬಂದಿ ಸಿ. ಎಸ್ ಮಠಪತಿ, ಡಾಟಾ ಎಂಟ್ರಿ ಆಪರೇಟರ್ ಎಂ. ಆಯ್. ಮೇಟಿ, ಬಿಎಫ್ ಟಿ ಸಾವಿತ್ರಿ ಪೋಲಿಸ್ ಪಾಟೀಲ್, ಬಿಲ್ ಕಲೆಕ್ಟರ್ ಎ. ಎಚ್ ಹಿರೇಅಮರಗೌಡ್ರ, ಕಾಯಕ ಮಿತ್ರ ಸಾವಿತ್ರಿ ಲಿಂಗದಳ್ಳಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು, ಉಪಸ್ಥಿತರಿದ್ದರು.