ಸರ್ಕಾರದ ನಿಯಮಗಳನ್ನು ಹಾಗೂ ಕಾನೂನು ಉಲ್ಲಂಘನೆ ಮಾಡದೇ ಚಾಚು ತಪ್ಪದೇ ನಿಯಮಗಳನ್ನು ಪಾಲಿಸಿ – ಸಿ.ಪಿ.ಐ ಸುರೇಶ್ ತಳವಾರ.
ಕೂಡ್ಲಿಗಿ ಆ.30





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈದ್ ಮಿಲಾದ್ ಹಾಗೂ ಗಣೇಶ್ ಚತುರ್ಥಿಯ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯನ್ನು ಮಾನ್ಯ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಇವರ ನೇತೃತ್ವದಲ್ಲಿ ಶಾಂತಿ ಸಭೆ ಕರೆಯಲಾಯಿತು. ಈ ಸಭೆಗೆ ಹಿಂದೂ- ಮುಸ್ಲಿಂ ಪ್ರಮುಖ ಯುವಕರುಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಅನೇಕ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಅಧಿಕಾರಿಗಳು ಸಹ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ನೀಡುವುದರ ಬಗ್ಗೆ ಮಾನ್ಯ ವಿಜಯನಗರ ಜಿಲ್ಲಾ ಹೆಚ್ಚುವರಿ ಅಡಿಷನಲ್ ಎಸ್ಪಿ ಯಾದ ಸಲೀಮ್ ಪಾಷ ರವರ ಸಲಹೆಗಳನ್ನು ಕೇಳಿ ಪಡೆದರು. ಹಾಗೆ ಈ ಸಂದರ್ಭದಲ್ಲಿ ಕೂಡ್ಲಿಗಿಯ ಸಿ.ಪಿ.ಐ ಸುರೇಶ್ ತಳವಾರ್ ಅವರು ಗಣೇಶ ಚತುರ್ಥಿ ಹಬ್ಬವನ್ನು ಆಚರಣೆ ಮಾಡುವಂತಹ ಸಂದರ್ಭದಲ್ಲಿ ತಮ್ಮ ತಮ್ಮ ಏರಿಯಾ ಗಳಲ್ಲಿ ಪ್ರತಿಷ್ಠಾಪನೆ ಮಾಡುವಂತ ಎಲ್ಲಾ ಏರಿಯಾದ ಯುವಕರುಗಳು ಪ.ಪಂ, ಕೆ.ಇ.ಬಿ. ಹಾಗೂ ಪೊಲೀಸ್ ಇಲಾಖೆ ಗಳಿಂದ ತಪ್ಪದೆ ಗಣೇಶನನ್ನು ಪ್ರತಿಷ್ಠಾಪನೆ ಮಾಡುವವರು ಪರವಾನಿಗೆ ಚಾಚು ತಪ್ಪದೆ ಪಡೆದು ಕೊಳ್ಳಲು ತಿಳಿಸಿದರು, ಹಾಗೂ ಎಲ್ಲಾರು ತಪ್ಪದೇ ಕಾನೂನು ನಿಯಮ ಉಲ್ಲಂಘನೆ ಮಾಡದೆ ಪ್ರತಿ ಏರಿಯಾದ ಯುವಕರುಗಳು ನೀವು ಸಹ ಜವಾಬ್ದಾರಿ ವಹಿಸಿಕೊಂಡು ಸಂತೋಷ ದಿಂದ ಸಡಗರ ದಿಂದ ಹಬ್ಬ ಆಚರಣೆ ಮಾಡಲು ಸೂಚನೆ ತಿಳಿಸಿದರು. ಕಾರಣ ಯಾವ ಯಾವ ಏರಿಯಾಗಳಲ್ಲಿ ಎಷ್ಟೆಷ್ಟು ಗಣೇಶ ವಿಗ್ರಹ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರುವ ಮಾಹಿತಿ ನಮ್ಮ ಪೊಲೀಸ್ ಇಲಾಖೆಗೆ ಸಿಗುತ್ತದೆ ಹಾಗೂ ಗಣೇಶ ಹಬ್ಬವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಜನಗಳು ಸೇರುವ ಸಂಭವವಿರುತ್ತದೆ ಅಂತಃ ಸ್ಥಳದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ತೆಗೆದು ಕೊಳ್ಳಲಿಕ್ಕೆ ಪೊಲೀಸ್ ಬಂದೋಬಸ್ತ್ ನೀಡಲು ಅನುಕೂಲವಾಗುತ್ತೆ ಎಂದು ತಿಳಿಸಿದರು.

ಹಾಗೆ ಈ ಸಂದರ್ಭದಲ್ಲಿ ಶಾಂತಿ ಸಭೆಯಲ್ಲಿ ಹಾಜರಾಗಿಂದಾತಹ ಜುಗಲರ ಭರತ ಯುವಕ ತಮ್ಮ ಏರಿಯಾದಲ್ಲಿ ಈ ವರ್ಷ 11 ದಿನಗಳು ಗಣೇಶ್ ನನ್ನು ಕುಡಿಸುತ್ತೇವೆ ತಮ್ಮ ಪೊಲೀಸ್ ಇಲಾಖೆಯಿಂದ ಪರವಾನಿಗೆ ಕೊಡಬೇಕು ಎಂದು ಕೇಳಿ ಕೊಂಡರು.ನಂತರ ದಲಿತ ಮುಖಂಡ ಎಸ್. ದುರುಗೇಶ್ ಮಾತನಾಡಿ ತಮ್ಮ ವೈಯಕ್ತಿಕ ಅನಿಸಿಕೆ ತಿಳಿಸಿದರು. ತಮ್ಮ ತಮ್ಮ ಏರಿಯಾದಲ್ಲಿ ಕುಡಿಸುವಂತ ಗಣೇಶನನ್ನು ಸಾರ್ವಜನಿಕರ ರಸ್ತೆಯಲ್ಲಿ ಇಂದೆ ಮುಂದೆ ಕುಡಿಸದೆ ಸಾರ್ವಜನಿಕರಿಗೆ ಓಡಾಡಲಿಕ್ಕೆ ಒಂದು ಸೈಡ್ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಒಳ್ಳೆಯದು ಎಂದು ತಿಳಿಸಿದರು.ಹಾಗೆ ಸಿ.ಪಿ.ಐ ಪಕ್ಷದ ಮುಖಂಡ ಈರಣ್ಣ ರವರು ಸಹ ಸಣ್ಣ ಸಣ್ಣ ಮಕ್ಕಳು ಹಾಗೂ ಅನೇಕ ಹಳ್ಳಿಗಳ ರಸ್ತೆಯಲ್ಲಿ ಗಣೇಶನ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಹಾಗೂ ಹೋಗಿ ಬರುವ ವಾಹನಗಳನ್ನು ತಡೆದು ನಿಲ್ಲಿಸುವುದು ತಪ್ಪು ಆಯಾ ಹಳ್ಳಿಯ ಗ್ರಾಮ ಪoಚಾಯಿತಿ ಮುಖಂಡರುಗಳು ತಿಳುವಳಿಕೆ ಹೇಳಬೇಕು ಎಂದು ತಿಳಿಸಿದರು.ಪ.ಪಂ ನೂತನ ಅಧ್ಯಕ್ಷರು ಕಾವಲ್ಲಿ ಶಿವಪ್ಪ ನಾಯಕ ಸಹ ಕೂಡ್ಲಿಗಿ ಪಟ್ಟಣದಲ್ಲಿ ಯಾವುದೇ ವಾರ್ಡಿನ ಯುವಕರು ಯಾವುದೇ ಗಲಾಟೆ ಗದ್ದಲ ಯಾವಾಗಲು ನಮ್ಮ ಕೂಡ್ಲಿಗಿಯಲ್ಲಿ ನಡೆದಿಲ್ಲ ಹಾಗೂ ನಾವೆಲ್ಲರೂ ಅಂತಃ ಘಟನೆಗಳಿಗೆ ಯಾರು ಆಸ್ಪದ ಕೊಡುವುದಿಲ್ಲ ಮುಖಂಡರುಗಳೇ ಹೆಚ್ಚಿನ ಜವಾಬ್ದಾರಿ ತೆಗೆದು ಕೊಂಡು ನಡೆಸಿಕೊಂಡು ಹೋಗುತ್ತೇವೆ ಎಂದು ಕೂಡ್ಲಿಗಿ ಪಟ್ಟಣದ ಎಲ್ಲಾ ನಾಗರಿಕರ ಪರವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಕೆ.ಇ.ಬಿ ಅಭಿಯಂತರರು ಏಕಾಂತ ರೆಡ್ಡಿ, ಪ.ಪಂ ಮುಖ್ಯಧಿಕಾರಿಗಳಾದ ಕೆ. ಮುಗುಳಿ, ಪಿ.ಎಸ್.ಐ ಪ್ರಕಾಶ್, ಅಗ್ನಿಶಾಮಕ ಅಧಿಕಾರಿಗಳು ಹಾಗೂ ಕೂಡ್ಲಿಗಿ ಪ್ರಮುಖ ಮುಖಂಡರು ಯುವಕರುಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ