ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ 14 ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ – ಜಾಸ್ಮೀನ್ ಕಿಲ್ಲೇದಾರ.

ಹುನಗುಂದ ಮಾರ್ಚ್.22

ಪ್ರಸಕ್ತ ೨೦೨೩-೨೪ ನೆಯ ಸಾಲಿನ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.೨೫ ರಿಂದ ಏ.೬ ರವರಗೆ ನಡೆಯುವ ಪರೀಕ್ಷೆಗಳಿಗೆ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ೧೪ ಪರೀಕ್ಷೆ ಕೇಂದ್ರಗಳಲ್ಲಿ ಸಕಲ ಸಿದ್ದತೆಯನ್ನು ಮಾಡಿ ಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ತಿಳಿಸಿದರು.ಶುಕ್ರವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಹುನಗುಂದ ಪಟ್ಟಣದ ವಿ.ಮ ಪ್ರೌಢ ಶಾಲೆಯಲ್ಲಿ ೨ ಕೇಂದ್ರ, ಧನ್ನೂರ, ಕೂಡಲ ಸಂಗಮ, ಕಮತಗಿ, ಹೂವಿನಹಳ್ಳಿ, ಸೂಳೇಭಾವಿ, ಅಮೀನಗಡ ತಲಾ ಒಂದರಂತೆ ಒಟ್ಟು ೮ ಪರೀಕ್ಷೆ ಕೆಂದ್ರಗಳನ್ನು ಹುನಗುಂದ ತಾಲೂಕಿನಲ್ಲಿ ತೆರಯಲಾಗಿದ್ದು. ಇನ್ನು ಇಳಕಲ್ಲ ನಗರದಲ್ಲಿ ೩ ಕೇಂದ್ರಗಳು,ಕರಡಿ, ಕಂದಗಲ್ಲ, ಗುಡೂರ ತಲಾ ಒಂದರಂತೆ ಇಳಕಲ್ಲ ತಾಲೂಕಿನಲ್ಲಿ ೬ ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದ್ದು. ಅವಳಿ ತಾಲೂಕಿನಲ್ಲಿ ಒಟ್ಟು ೧೪ ಕೇಂದ್ರಗಳಲ್ಲಿ ಬೆಳಗ್ಗೆ ೧೦.೩೦ ಗಂಟೆಯಿಂದ ೧.೩೦ ಗಂಟೆಯವರಗೆ ಪರೀಕ್ಷೆಗಳು ನಡೆಯಲಿವೆ.ಅವಳಿ ತಾಲೂಕಿನ ೧೪ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೫೩೨೭ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.

ಅದರಲ್ಲಿ ೫೨೨೪ ರೆಗ್ಯುಲರ್ ವಿದ್ಯಾರ್ಥಿಗಳು,೫೦ ಜನ ವಯೋ ನೇರವಾಗಿ ಪರೀಕ್ಷೆ, ೩೧ ಜನ ಪೇಲಾದ ವಿದ್ಯಾರ್ಥಿಗಳು, ೨೨ ಜನ ರೆಗ್ಯುಲರ್ ರಿಪೀಟರ್ ವಿದ್ಯಾರ್ಥಿಗಳು ಸೇರಿದ್ದಾರೆ. ಒಟ್ಟು ೫೩೨೭ ವಿದ್ಯಾರ್ಥಿಗಳ ಪರೀಕ್ಷೆಗಾಗಿ ೨೫೦ ಕೊಠಡಿಗಳನ್ನು ಮತ್ತು ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ವಿಕಲ ಚೇತನ ಮಕ್ಕಳಿಗೆ ಪ್ರತಿ ಕೇಂದ್ರದಲ್ಲಿ ಕೆಳಗಿನ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವಿಶೇಷ ಕೊಠಡಿಯನ್ನು ತೆರೆಯಲಾಗಿದೆ. ಎಲ್ಲ ಪರೀಕ್ಷಾ ಕೊಠಡಿಗಳಿಗೆ ಸಿಸಿ ಟಿವಿಯನ್ನು ಅಳವಡಿಸಲಾಗಿದೆ.೩೦೦ ಸಿಬ್ಬಂದಿಗಳ ನಿಯೋಜನೆ-ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕ ಮತ್ತು ಕಟ್ಟು ನಿಟ್ಟಾಗಿ ನಡೆಸಲು ೧೪ ಜನ ಮುಖ್ಯ ಅಧೀಕ್ಷಕರು, ೭ ಜನ ಉಪ ಅಧೀಕ್ಷಕರು, ೧೪ ಜನ ಕಸ್ಟೋಡಿಯನ್, ೭ ಜನ ಮಾರ್ಗಾಧಿಕಾರಿಗಳು, ೧೪ ಜನ ಸ್ಥಾನಿಕ ಜಾಗೃತ ದಳ, ೧೪ ಜನ ಮೋಬೈಲ್ ಸ್ವಾಧೀನಾಧಿಕಾರಿಗಳು, ಇದೇ ಮೊದಲ ಬಾರಿಗೆ ೧೪ ಜನ ಸಿಸಿ ಟಿವಿ ವೀಕ್ಷಕರನ್ನು ನೇಮಕ ಸೇರಿದ್ದಂತೆ ಒಟ್ಟು ೩೦೦ ಜನ ಸಿಬ್ಬಂದಿಗಳನ್ನು ಪರೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅದರ ಜೊತೆಗೆ ಆರೋಗ್ಯ ಇಲಾಖೆಯ ಸಹಾಯಕ ಆರೋಗ್ಯಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಪರೀಕ್ಷಾ ಕೇಂದ್ರ ಸೂಕ್ತ ಬಿಗಿ ಬಂದೋಬಸ್ತೆಗೆ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಗಮೇಶ ಹೊದ್ಲೂರ, ಪ್ರಶಾಂತ ಪಟ್ಟದಕಲ್ಲ, ನಾಗರಾಜ ಹೊಸೂರ ಸೇರಿದ್ದಂತೆ ಅನೇಕರು ಇದ್ದರು.

“ಬಾಕ್ಸ್ ಸುದ್ದಿ”– ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ. ೨೫ ರಿಂದ ಆರಂಭವಾಗಲಿದ್ದು. ಪ್ರತಿಯೊಂದು ಪರೀಕ್ಷೆಗಳು ಬೆಳಗ್ಗೆ ೧೦.೩೦ ಗಂಟೆಯಿಂದ ೧.೩೦ ಗಂಟೆಯವರಗೆ ನಡೆಯಲಿವೆ.ವಿದ್ಯಾರ್ಥಿಗಳು ಪರೀಕ್ಷೆಯ ಸಮಯದ ಕ್ಕಿಂತ ೩೦ ನಿಮಿಷ ಮುಂಚೆ ಪರೀಕ್ಷಾ ಕೊಠಡಿಯಲ್ಲಿ ಇರಬೇಕು. ಪರೀಕ್ಷಾ ಕೇಂದ್ರ ಸುತ್ತಲೂ ೨೦೦ ಮೀಟರ್ ನಿಷೇದಾಜ್ಞೆ ಜಾರಿಯಲ್ಲಿದ್ದು. ಈ ಸ್ಥಳದಲ್ಲಿ ಝರಾಕ್ಸ್ ಮತ್ತು ಇನ್ನೀತರ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಅವಕಾಶ ಇರೋದಿಲ್ಲ. ಜಾಸ್ಮೀನ್ ಕಿಲ್ಲೇದಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುನಗುಂದ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button