ಪ್ರತಿಯೊಬ್ಬರೂ ಆರೋಗ್ಯ ವಂತರಾಗಿರಬೇಕೆಂದು ಪೌರ ಕಾರ್ಮಿಕರು ಯೋಚಿಸುವರು – ಜಿ.ಎಚ್.ಶ್ರೀನಿವಾಸ್.
ತರೀಕೆರೆ ಸಪ್ಟೆಂಬರ್.27

ಪೌರ ಕಾರ್ಮಿಕರ ಮನಸ್ಸು ಸದಾ ನಿರಂತರವಾಗಿ ನಗರವನ್ನು ಒಂದು ಸುಂದರ ಆರೋಗ್ಯದಾಯಕ ಸಮಾಜ ನಿರ್ಮಾಣ ಮಾಡಿ ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರಬೇಕೆಂದು ಯೋಚಿಸುವವರು ನಮ್ಮ ಪೌರ ಕಾರ್ಮಿಕರು ಎಂದು ತರೀಕೆರೆ ಶಾಸಕ ಜಿ ಎಚ್ ಶ್ರೀನಿವಾಸ್ ಹೇಳಿದರು. ಪಟ್ಟಣದ ಅರಮನೆ ಹೋಟೆಲ್ ಆವರಣದಲ್ಲಿ ತರೀಕೆರೆ ಪುರಸಭೆ ಮತ್ತು ಪೌರ ಸೇವಾ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಆದರೆ ತಾವು ಮಾತ್ರ ಸದಾ ಬೇರೆಯವರ ಬಗ್ಗೆ ಯೋಚಿಸುವ ಪೌರ ಕಾರ್ಮಿಕರು ತಮ್ಮ ಬಗ್ಗೆಯು ಸದಾ ಕಾಳಜಿ ಇಟ್ಟುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಅದಕ್ಕೆ ನಿಯಮಿತ ಅವಧಿಯಲ್ಲಿ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಕೊಂಡು ಆರೋಗ್ಯರಬೇಕು ಹಾಗೆಯೇ, ಸರ್ಕಾರದ ಮಟ್ಟದಲ್ಲಿ ಪೌರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭಾ ಮುಖ್ಯ ಅಧಿಕಾರಿಯದ ಪ್ರಶಾಂತ್ ಮಾತನಾಡಿ ಸಮಾಜದಲ್ಲಿನ ಪ್ರತಿಯೊಬ್ಬರ ಸಮಸ್ಯೆಗಳನ್ನು ಬಗೆ ಹರಿಸುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ನಾವು ಪ್ರಯತ್ನ ಪಡುತ್ತೇವೆ ಆದರೆ ಪೌರ ಕಾರ್ಮಿಕರು ನೌಕರರು ತಮ್ಮ ಜೀವದ ಹಂಗು ತೊರೆದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಹ ಸದಾ ಸದೃಢ ಸಮಾಜ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂದು ತಾವು ಮಾಡುವ ಕಾಯಕದಲ್ಲಿ ಸದಾ ತೃಪ್ತಿಯಿಂದ ಕೆಲಸ ಮಾಡುತ್ತಾರೆ. ಸಮಾಜದ ಕಟ್ಟ ಕಡೆಯ ವ್ಯವಸ್ಥೆಯಲ್ಲಿ ಇರುವ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಯಾವುದೇ ಭದ್ರತೆ ಇಲ್ಲವಾಗಿತ್ತು ಅದರಂತೆ ಪೌರ ಕಾರ್ಮಿಕರು ಒಂದು ದಿನ ನಗರದಲ್ಲಿ ಸ್ವಚ್ಛತೆ ಮಾಡಲಿಲ್ಲವೆಂದರೆ ಇಡೀ ನಗರವೇ ಕೊಳಕು ವಾಸನೆಯಿಂದ ನಾರುತ್ತದೆ ಇದನ್ನು ಮನಗಂಡ ಸಪಾಯಿ ಕರ್ಮಚಾರಿಗಳ ಕಾವಲು ಸಮಿತಿ, ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಸಂಘಟನೆಗಳು ಹೋರಾಟ ಮಾಡಿದ ಪ್ರತಿಫಲವಾಗಿ ಸರ್ಕಾರ ಅಂತಂತವಾಗಿ ಪೌರ ಕಾರ್ಮಿಕರಿಗೆ ಒಂದು ದಿನಕ್ಕೆ ಕನಿಷ್ಠ ವೇತನ ನಿಗದಿಪಡಿಸಿ ಅವರ ಸೇವಾ ಭದ್ರತೆಯ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಿದರು. ತರೀಕೆರೆ ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡುವುದಕ್ಕೆ ಪ್ರಾಮುಖ್ಯತೆ ನೀಡಿದ್ದೇವೆ. ಸಂಬಳದ ಜೊತೆಯಲ್ಲಿ ಸಂಕಷ್ಟ ಪರಿಹಾರವಾಗಿ 2000 ರೂಪಾಯಿಗಳು ನೀಡುವಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಪ್ರತಿ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವುದಕ್ಕೆ ಪುರಸಭೆಯಿಂದ ಕ್ರಮ ಜರುಗಿಸಲಾಗಿದೆ. ಪ್ರಪಂಚದಲ್ಲಿ ಆವರಿಸಿದ ಮಹಾಮಾರಿ ಕೋವಿಡ್ ವೈರಸ್ ನಿಂದ ಜಗತ್ತು ತತ್ತರಿಸಿದ್ದರು ಆದರೆ ಪೌರ ಕಾರ್ಮಿಕರು ಅತ್ಯಂತ ಸಮರ್ಥವಾಗಿ ಈ ಕೋವಿಡ್ ಮಹಾಮಾರಿ ರೋಗ ನಿಯಂತ್ರಣಕ್ಕೆ ಬರಲು ವೈದ್ಯರೊಂದಿಗೆ ಅತ್ಯಂತ ಪ್ರಾಮಾಣಿಕವಾಗಿ ಕೈಜೋಡಿಸಿದ್ದರು. ಅವರ ಈ ಸಾಧನೆಯನ್ನು ಸಾರ್ವಜನಿಕರು ಗಮನದಲ್ಲಿ ಇಟ್ಟುಕೊಂಡು ಪೌರ ಕಾರ್ಮಿಕರನ್ನು ಗೌರವ ಭಾವನೆಯಿಂದ ಕಾಣಬೇಕೆಂದು ಮುಖ್ಯ ಅಧಿಕಾರಿ ಪ್ರಶಾಂತ್ ಕಾರ್ಯಕ್ರಮದಲ್ಲಿ ತಿಳಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಸಪಾಯಿ ಕರ್ಮಚಾರಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ವೆಂಕಟೇಶ್ ಮಾತನಾಡಿ ಕಳೆದ 25 ವರ್ಷಗಳಿಂದ ಸ್ಕ್ಯಾವೆಂಜರ್ಸ್ ಬಗ್ಗೆ ಸಪಾಯಿ ಕರ್ಮಚಾರಿಗಳ ಬಗ್ಗೆ ಪೌರ ಕಾರ್ಮಿಕರ ಹಿತ ದೃಷ್ಟಿಯಿಂದ ಹೋರಾಟ ಮಾಡಿಕೊಂಡು ಬಂದಿರುತ್ತೇವೆ ಆದರೆ ಇದು ಅಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಪೌರ ಕಾರ್ಮಿಕರ ಪಿತಾಮಹರಾದ ಐಪಿಡಿ ಸಾಲಪ್ಪ ಪೌರಕಾರ್ಮಿಕರ ಹಿತದೃಷ್ಟಿಯಿಂದ ವರದಿಯನ್ನು ಸರ್ಕಾರಕ್ಕೆ ನೀಡಿರುತ್ತಾರೆ ಆದರೆ ಆ ವರದಿ ಪರಿ ಪೂರ್ಣವಾಗಿ ಸರ್ಕಾರ ಜಾರಿ ಮಾಡಿಲ್ಲ ಎಂದು ಆಗ್ರಹಿಸಿದರು. ಪೌರ ಕಾರ್ಮಿಕರ ಮತ್ತು ಸಪಾಯಿ ಕರ್ಮಚಾರಿಗಳ, ಮ್ಯಾನುವಲ್ ಕ್ಯಾವೆಂಜರ್ಸ್ ಗಳ ಕ್ಷೇಮಾಭಿವೃದ್ಧಿಗಾಗಿ, ಕರ್ನಾಟಕ ಸರ್ಕಾರ ಸಿಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಸಪಾಯಿ ಕರ್ಮಚಾರಿ ಆಯೋಗ, ಸ್ಥಾಪನೆ ಮಾಡಿದ್ದು ಎಲ್ಲಾ ಪೌರ ಕಾರ್ಮಿಕರು ಸಪಾಯಿ ಕರ್ಮಚಾರಿಗಳು ಮತ್ತು ಮ್ಯಾನುವಲ್ ಕ್ಯಾವೆಂಜರಗಳು ಇಲ್ಲಿ ಸೌಲತ್ತುಗಳನ್ನು ಪಡೆದುಕೊಳ್ಳಬೇಕು. ಪೌರಾಡಳಿತ ಸಚಿವರಾದ ಬಸವಲಿಂಗಪ್ಪನವರು ಶಾಸನ ಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಲ ಹೋರುವ ಪದ್ಧತಿಯನ್ನು ನಿಷೇಧಿಸಬೇಕೆಂದು ಶಾಸನ ಜಾರಿ ಮಾಡಿಸಿದರು. 2013ರ ಕಾಯ್ದೆಯಂತೆ ಮ್ಯಾನುವೆಲ್ ಸ್ಕ್ಯಾವೇಂಜಸ್ಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಹೇಳಿದರು. ಆದರೆ ಸರ್ಕಾರ ಮತ್ತು ಕೇಂದ್ರ ಸರ್ಕಾರ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮ್ಯಾನುವಲ್ ಸ್ಕಾವೆಂಜರ್ಸ್ ವೃತ್ತಿ ಮಾಡುವವರ ಸರ್ವೆ ಕಾರ್ಯಕ್ರಮ ಪ್ರಾಮಾಣಿಕವಾಗಿ ನಡೆದಿರುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿ ಐಎಎಸ್ ಮತ್ತು ಐಪಿಎಸ್, ಡಾಕ್ಟರ್, ಲಾಯರ್, ಇಂಜಿನಿಯರ್ ಗಳು ಹೀಗೆ ಉನ್ನತ ಸ್ಥಾನ ಮಾನಗಳನ್ನು ಕೊಡಿಸಬೇಕೆಂದು ಹೇಳಿದರು. ಪೌರ ಕಾರ್ಮಿಕರಿಗಳಿಗೆ ಇ ಎಸ್ ಐ ಕಾರ್ಡು ಕೊಡಬೇಕು ಎಂದು ಪುರಸಭಾ ಮುಖ್ಯ ಅಧಿಕಾರಿಗಳಿಗೆ ತಿಳಿಸಿದರು. ಹಾಗೂ ತರೀಕೆರೆಯಲ್ಲಿ ಕನಿಷ್ಠ ನಾಲ್ಕು ಪೌರ ಕಾರ್ಮಿಕರ ವಿಶ್ರಾಂತಿಗೃಹಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಮೇಶ್ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ಅದರಂತೆ ನಮ್ಮ ವೈದ್ಯ ಲೋಕ ಪ್ರತಿಯೊಬ್ಬರಿಗೂ ರೋಗ ಬಂದ ನಂತರ ಆರೋಗ್ಯ ತಪಾಸಣೆ ಮಾಡಿ ರೋಗಿಗೆ ಚಿಕಿತ್ಸೆ ನೀಡುತ್ತಾರೆ, ಆದರೆ ನಮ್ಮ ಪುರಸಭೆಯ ಪೌರ ಕಾರ್ಮಿಕರು ಯಾರಿಗೂ ರೋಗ ಬಾರದಂತೆ ಮುಂಜಾಗ್ರತವಾಗಿ ಜಾಗೃತಿ ವಹಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಿಹನಾ ಪರ್ವೀನ್ , ಮಾಜಿ ಅಧ್ಯಕ್ಷರಾದ ಕಮಲಾ ರಾಜೇಂದ್ರ, ರಂಗನಾಥ, ಟಿ ಜಿ ಲೋಕೇಶ್, ಟಿ ಎಮ್ ಬೋಜರಾಜ್, ಆಶಾ ಅರುಣ್ ಕುಮಾರ್, ದಿವ್ಯ ರವಿ, ಪಾರ್ವತಮ್ಮ ತಿಮ್ಮಣ್ಣ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕುಮಾರಪ್ಪ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ದಾದಾಪೀರ್, ಬಸವರಾಜ್, ಮಾಜಿ ಪುರಸಭಾ ಅಧ್ಯಕ್ಷರಾದ ಪ್ರಕಾಶ್ ವರ್ಮಾ, ಬಿಂದು, ಮಹೇಶ್, ವಿಜಯ್ ಕುಮಾರ್ ಪ್ರಭಾರಿ ಅಧ್ಯಕ್ಷರಾದ ಪ್ರಕಾಶ್, ಉಪಸಿತರಿದ್ದು ಪೌರ ಕಾರ್ಮಿಕನಾದ ಶ್ರೀನಿವಾಸ್ ಪ್ರಾರ್ಥಿಸಿ, ತಹೆರಾ ತಸ್ಮೀನ್ ನಿರೂಪಿಸಿ, ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ