ಹೆಚ್.ಎಸ್.ಪ್ರತಿಮಾ ಹಾಸನ್ ರವರಿಗೆ ಜ್ಞಾನಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿಗೆ ಆಯ್ಕೆ.
ಹಾಸನ ಮಾರ್ಚ್.23

ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಮಾರ್ಚ್ 29 ರಂದು ಬೆಂಗಳೂರು ಬಾಗಲಗುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯುವ ವಿಶ್ವ ಕನ್ನಡ ಪ್ರಥಮ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಮಾಡುವ ಜ್ಞಾನಯೋಗಿ ಶಿವಶರಣೆ ನೀಲಾಂಬಿಕ ಪ್ರಶಸ್ತಿಗೆ ಮಹಿಳಾ ಸಾಧಕಿಯಾದಂತಹ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಸಾಮಾಜಿಕ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ. ಇವರು ಶಿಕ್ಷಕಿಯಾಗಿ, ಕವಯಿತ್ರಿಯಾಗಿ, ಸಾಹಿತಿಯಾಗಿ, ಅಂಕಣಗಾರ್ತಿಯಾಗಿ, ಪತ್ರಕರ್ತೆಯಾಗಿ, ನಿರೂಪಕಿಯಾಗಿ, ಗಾಯಕಿಯಾಗಿ, ಸಾಮಾಜಿಕ ಚಿಂತಕಿಯಾಗಿ, ಲೇಖಕಿಯಾಗಿ, ಸಮಾಜ ಸೇವಕಿಯಾಗಿ, ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮದೇ ಅಧ್ಯಕ್ಷತೆಯನ್ನು ವಹಿಸಿ ಯಶಸ್ವಿ ಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಸಂಘಟಕಿಯಾಗಿ ತಮ್ಮದೇ ಆದ ” ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ”ಎಂಬ ಸಂಸ್ಥೆಯ ಸಂಸ್ಥಾಪಕಿಯಾಗಿದ್ದಾರೆ. ಹಲವಾರು ಸಂಘ ಸಂಸ್ಥೆಯಲ್ಲಿ ಜಿಲ್ಲಾಧ್ಯಕ್ಷರಾಗಿದ್ದು, ರಾಜ್ಯ ಮಟ್ಟದಲ್ಲೂ, ಪದಾಧಿಕಾರವನ್ನು ಪಡೆದು ತಮ್ಮದೇ ಆದ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರನ್ನು ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಇವರ ಪ್ರತಿಭೆಗೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ.

ಒಟ್ಟಾರೆ ಇವರ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತಿಕ, ಪತ್ರಿಕೋದ್ಯಮ, ಈ ಎಲ್ಲಾ ಕ್ಷೇತ್ರದ ಸೇವೆಯನ್ನು ಪರಿಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಂದು ವಿಶ್ವ ಕನ್ನಡ ಕಲಾ ಸಂಸ್ಥೆ ಯ ಸಂಸ್ಥಾಪಕ ಅಧ್ಯಕ್ಷರು ರವೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪಡೆಯುತ್ತಿರುವ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಕಮಲಾ ರಾಜೇಶ್ ರವರು, ಕರ್ನಾಟಕ ಮುಕ್ತ ಬಳಗದ ಅಧ್ಯಕ್ಷರಾದ ಶ್ರೀ ಮುತ್ತುಸ್ವಾಮಿರವರು ತಾಯಿ ಶ್ರೀಮತಿ ನೀಲಮ್ಮ ಸುರೇಶ್, ಸೋದರ ಹೆಚ್. ಎಸ್. ಮಂಜುನಾಥ್. ( ಆರೋಗ್ಯ ನಿರೀಕ್ಷಣಾಧಿಕಾರಿ ) ಮತ್ತು ಕುಟುಂಬದ ಎಲ್ಲಾ ಸದಸ್ಯರು, ಪತ್ರಕರ್ತರು, ಹಿರಿಯ ಕಿರಿಯ ಸಾಹಿತಿಗಳು, ಸಮಾಜ ಸೇವಕರು, ಸಂಘ ಸಂಸ್ಥೆಯ ಸಂಸ್ಥಾಪಕರು, ಪ್ರ, ಸಾ, ಸಾ, ಅ, ಪ್ರ, ದ ಪದಾಧಿಕಾರಿಗಳಾದ ಶುಭ ಮಂಗಳ ಸತೀಶ್, ಮಮತಾ, ಯಶೋಧ, ರಶ್ಮಿ, ವಸಂತ, ಮಂಜುಳಾ, ಕೋಮಲ.ಹೆಚ್. ಎಸ್. ರಾಧಾ. ಇನ್ನೂ ಹಲವಾರು ಸದಸ್ಯರು ಅಭಿನಂದನೆಯನ್ನು ತಿಳಿಸಿದ್ದಾರೆ