ಹೋಳಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆ.
ಇಂಡಿ ಮಾರ್ಚ್.23

ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವುದು ಎಲ್ಲರ ಕರ್ತವ್ಯ. ಸಂತೋಷ ಹಂಚಿ ಕೊಳ್ಳಲಿಕ್ಕೆ ಶಾಂತಿ ಸಾರಲಿಕ್ಕೆ ಹಬ್ಬಗಳು ಆಚರಿಸುತ್ತೇವೆ ಎಂದು ಡಿ.ವೈ.ಎಸ್.ಪಿ ಎಚ್.ಎಸ್.ಜಗದೀಶ ಹೇಳಿದರು.ಪಟ್ಟಣದ ಡಿ.ವಾಯ್.ಎಸ್.ಪಿ ಕಚೇರಿಯ ಸಭಾ ಭವನದಲ್ಲಿ ನಡೆದ ಹೋಳಿ ಮತ್ತು ರಮಜಾನ ಹಬ್ಬದ ಪ್ರಯಕ್ತ ಶಾಂತಿ ಸಭೆಯಲ್ಲಿ ಮಾತನಾಡಿದರು.ಪಟ್ಟಣದ ಪೋಲಿಸ್ ಠಾಣಾ ಸಿ.ಪಿ.ಐ ರತನಕುಮಾರ ಜಿರಗಿಹಾಳ ಮಾತನಾಡಿ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಗೆಯಲ್ಲಿ ಇರುವದರಿಂದ ರಾಜಕೀಯ ಧುರೀಣರ ಬ್ಯಾನರ್, ಬಂಟಿಗ್ಸ ಮತ್ತು ಪ್ಲೆಕ್ಸ್ ಅಳವಡಿಸಬಾರದು. ಹಚ್ಚಿದರೆ ಕ್ಷಣಾರ್ಧದಲ್ಲೇ ತೆರವು ಗೊಳಿಸಲಾಗುವದು ಎಂದರು. ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಭೀಮನಗೌಡ ಪಾಟೀಲ, ಅಯೂಬ ನಾಟಿಕಾರ, ರೈಸ್ ಅಷ್ಟೇಕರ ಮಾತನಾಡಿ ಹಿಂದು ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಹಬ್ಬ ಆಚರಿಸುತ್ತಾ ಬಂದಿದ್ದಾರೆ. ಯಾವುದೇ ಸಮಸ್ಯೆ ಎಂದೂ ಉದ್ಭವಿಸಿಲ್ಲ. ರಂಗಪಂಚಮಿ ಎಂದು ಇದೆ ಡಂಗುರ ಸಾರಲಾಗುವದು. ೨೪ ರಂದು ಕಾಮ ದಹನ ಇದೆ. ಇಂಡಿಯಲ್ಲಿ ಸುಮಾರು ೫೦ ಕಡೆ ಕಾಮ ದಹನ ಮಾಡುತ್ತಾರೆ. ಅಣ್ಣ ತಮ್ಮಂದಿರಂತೆ ಮುಸ್ಲಿಂ ಬಾಂಧವರು ಸಹಕರಿಸುತ್ತಾರೆ ಎಂದರು. ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಭೀಮಾಶಂಕರ ಮೂರಮನ, ಅಂಜುಮನ್ ಸಮಿತಿ ಅಧ್ಯಕ್ಷ ಅಪಝಲ ಹವಾಲದಾರ, ಎಸ್.ಜಿ.ಬಾಗವಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮತ್ತು ಬಾಗವಾನ ಅಲ್ಪ ಸಂಖ್ಯಾತ ಬ್ಯಾಂಕಿನ ಅಧ್ಯಕ್ಷ ಸತ್ತಾರ ಬಾಗವಾನ,ಪುರಸಭೆ ಸದಸ್ಯ ಎ.ಆರ್.ಬಾಗವಾನ,ದೇವೆಂದ್ರ ಕುಂಬಾರ, ಪ್ರಕಾಶ ಬಿರಾದಾರ,ಜಬ್ಬಾರ ಅಣ್ಣಾ, ಭಿಮು ಗುಡ್ಲ,ಸತೀಶ ಕುಂಬಾರ,ದತ್ತಾ ಬಂಡೆನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ್, ಶಿವಾನಂದ ಮೂರಮನ್ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ