ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ.
ಅಥಣಿ ಜನೇವರಿ.1

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿ ಹಾಗೂ ಹೊಸ ವರ್ಷದ ಸ್ವಾಗತ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶ್ರೀ ದಾವುದ್ ಆಸಂಗಿ ಮುಖ್ಯ ಅತಿಥಿಗಳಾಗಿ ಶ್ರೀ ವಿ ಎ ಬಳೆಗಾರ ಪ್ರಧಾನ ಗುರುಗಳಾದ ಶ್ರೀ ಪಿ ಎ ಕೊರಬು ಅತಿಥಿ ಶಿಕ್ಷಕಿಯ ರಾದ ಸಮೀರಾ ಜಾರೆ ಮಾಧ್ಯಮ ಹಾಗೂ ಪತ್ರಿಕಾ ವರದಿಗಾರರು ಎಂ ಎಂ ಶರ್ಮಾ ಇದೇ ಸಂದರ್ಭದಲ್ಲಿ ಸನ್ಮಾನ ಮಾಡಿದರು ಗುರುಗಳು ಶಿಕ್ಷಕರಿಂದ ಉಪಸ್ಥಿತರಿದ್ದರು ಪಾಲಕ ಪೋಷಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಕುರಿತು ಶ್ರೀ ಬಳಿಗಾರವರು ಶ್ರೀ ಸಿ ಆಯ್ ಮಗದುಮ್ಮ ಮಾತನಾಡಿ ಪ್ರಾಮಾಣಿಕತೆ ಮತ್ತು ನಿಷ್ಠಾವಂತ ಪತ್ರಕರ್ತರು ಎಂಎಂ ಶರ್ಮಾ ಎಂದು ಹೇಳಿದರು ನಮ್ಮಮಕ್ಕಳಿಗೆ ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ವರ್ಷದಲ್ಲಿ ನಾವು ಹೇಗೆ ಇರಬೇಕು ಆರೋಗ್ಯ ಕೆಲಸ ಕಾರ್ಯಗಳಿಗೆ ಮಹತ್ವ ನೀಡುವುದು. ಮುದ್ದು ಮಕ್ಕಳಿಗೆ ಬುಕ್ಕು ಮತ್ತು ಪೆನ್ನುಗಳು ವಿತರಿಸಲಾಯಿತು ಗುರು ಸೇವಾ ಬಳಗದ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಶಾಲಾ ಗುರುಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೆನ್ನು ನೋಟ್ ಬುಕ್ ಹಂಚಿಕೆ ಮಾಡಿ ಸಿಹಿ ವಿತರಿಸಲಾಯಿತು. ಶ್ರೀ ವಸಿಮ ಜಗದಾಳ ಗುರುಗಳು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ