ಕೆ.ಎಮ್.ಪಿ.ಜೆ.ಜೆ.ಎಸ್ ಇಂಡಿ ತಾಲೂಕಾ ಅಧ್ಯಕ್ಷೆರಾಗಿ ಅನಸೂಬಾಯಿ ಆಯ್ಕೆ.
ಇಂಡಿ ಮಾರ್ಚ್.23

ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿಯಿಂದ ಇಂಡಿ ತಾಲೂಕಾ ಪದಾಧಿಕಾರಿಗಳ ಆಯ್ಕೆಗಾಗಿ ತಾಲೂಕಿನಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀಮತಿ ಜಗದೇವಿ ಆರ್ ಹೆಗಡೆ ಇವರ ಅನುಮತಿಯ ಮೇರೆಗೆ ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಎಮ್ ಯಡ್ರಾಮಿ ಇವರು ಜಿಲ್ಲಾ ಸರ್ವ ಸದಸ್ಯರ ಒಮ್ಮತದ ಮೇರೆಗೆ ಇಂಡಿ ತಾಲೂಕಾ ಅಧ್ಯಕ್ಷೆಯರನ್ನಾಗಿ ಶ್ರೀಮತಿ ಅನಸೂಬಾಯಿ ಮದರಿ. ಗೌರವ ಅಧ್ಯಕ್ಷರನ್ನಾಗಿ ಶ್ರೀ ಮತಿ ಶೋಭಾ ಕಟ್ಟಿ. ಉಪಾಧ್ಯಕ್ಷರನ್ನಾಗಿ ಶ್ರೀ ಭೌರಮ್ಮ ನಾವಿ. ಪ್ರ. ಕಾರ್ಯದರ್ಶಿಯಾಗಿ ಶ್ರೀಮತಿ ಬಸಮ್ಮ ಮರಡಿ. ಸಂ. ಕಾರ್ಯದರ್ಶಿಯಾಗಿ ಶ್ರೀ ಮತಿ ಶ್ರೀ ದೇವಿ ಆರ್ ಕುಲಕಣಿ೯.ಖಜಾಂಚಿಯಾಗಿ ಶ್ರೀ ಮತಿ ರೇಖಾ ಶಿಂಗೆ. ಇವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಯಿತು.

ಈ ಆದೇಶದಲ್ಲಿ ಕನಾ೯ಟಕ ಮಹಿಳಾ ಪರ ಜನ ಜಾಗೃತಿ ಸಮಿತಿ ಸಂವಿಧಾನ ಬದ್ಧವಾಗಿ ರಾಜ್ಯದ ಎಲ್ಲಾ ಮಹಿಳೆಯರ ಮೇಲೆ ನಡೆಯುವ ಅನ್ಯಾಯ, ಅತ್ಯಾಚಾರ,ಶೋಷಣೆ,ದೌಜ೯ನ್ಯ ವಿರೋಧ ಹೋರಾಟದ ಮುಖಾಂತರ ನ್ಯಾಯ ದೊರಕಿಸಿ ಕೊಡುವುದ ರೊಂದಿಗೆ ಸಂಘಟನೆಯನ್ನು ರಾಜ್ಯ/ ಜಿಲ್ಲೆ/ತಾಲೂಕು ಮಟ್ಟದಲ್ಲಿ ಬಲಿಷ್ಠಗೊಳಿಸಿ ರಾಜ್ಯದ ಎಲ್ಲಾ ಮಹಿಳೆಯರ ಕ್ಷೇಮಾಭಿವೃದ್ಧಿ ಏಳಿಗೆಗಾಗಿ ಕಾಯ೯ ಪ್ರವೃತ್ತರಾಗ ಬೇಕೆಂದು ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ಅದನೂರ. ಶ್ರೀಮತಿ ಮಹಾದೇವಿ ಬಂಡಿವಡ್ಡರ. ಶ್ರೀ ಮಂಗಳಾ ಕ್ಷತ್ರಿ. ಶ್ರೀಮತಿ ಶಿಲ್ಪಾ ನಾಕಮನ. ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ