ಆರ್.ಎಂ.ಎಸ್.ಎ ಶಾಲೆಯ ೬ ನೇ. ತರಗತಿ ಪ್ರವೇಶಕ್ಕಾಗಿ – ಅರ್ಜಿ ಆಹ್ವಾನ.
ಹುನಗುಂದ ಫೆ.18

ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ವಸತಿ ರಹಿತ ಆಂಗ್ಲ ಮಾದ್ಯಮ ಶಾಲೆಗೆ 2025-26 ನೇ. ಸಾಲಿಗೆ 6 ನೇ. ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು. ಹುನಗುಂದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲೆಗಳಲ್ಲಿ 2024-25 ನೇ. ಸಾಲಿನಲ್ಲಿ 5 ನೇ. ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಸರಕಾರಿ ಆದರ್ಶ ವಿದ್ಯಾಲಯ ಹುನಗುಂದ ಶಾಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ವಿರುತ್ತದೆ. ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ www.schooleducation.krnrnataka. gov.in ವೆಬ್ ಸೈಟ್ ಮೂಲಕ ಫೆ.14 ರಿಂದ ಫೆ. 28 ರ ಸಾಯಂಕಾಲ 6 ಗಂಟೆಗೆ ಅರ್ಜಿ ಸಲ್ಲಿಸಲು ಅವಕಾಶ ವಿರುತ್ತದೆ. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆದಾರ್ಶ ವಿದ್ಯಾಲಯ ಹುನಗುಂದ ಮುಖ್ಯೋಪಾಧ್ಯಾಯ ಎಸ್.ಜಿ ಕಡಿವಾಲ ೯೪೪೯೫೧೭೧೩೮, ಹಿರಿಯ ಶಿಕ್ಷಕ ಸುಭಾಸ ಅರಕೇರಿ ೯೪೪೯೨೮೨೬೬೦, ಪ್ರ.ದ.ಸ.ರಾಘವೇಂದ್ರ ಚಲವಾದಿ ೯೮೪೫೭೯೪೦೦೮ ಇವರಿಗೆ ಸಂಪರ್ಕಿಸ ಬಹುದಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ