“ಸಿಹಿ ಮಾತು ರವಿಯ ಹೊಂಗಿರಣವು”…..

ಮನದ ಕನಸು ನೆನಸು ಸೋಗಸು
ಶ್ರಮದ ಫಲ ಮಧುರ ಅಮೃತವು
ಅಂತರಾಳದಲಿ ಅನುರಾಗ ಅರಳಿದಾ
ಗಸ್ನೇಹತನದ ಜೋಡಿಗಳ ಸಿವಿಮಾತು
ಶ್ರದ್ಧೆ ಭಕ್ತಿಯ ರುಚಿ ಹಾಲುಜೇನು
ಪ್ರಾಮಾಣಿಕ ನಿಷ್ಠೆ ಆದರ್ಶತದ ಬೆಳಕು
ಒಳ್ಳೆಯತನ ನೆನೆವ ಜನಮನ
ನಿಜ ದೇವರು
ಕರ್ಮದ ಫಲಶೃತಿ ಪ್ರಸ್ತುತ
ಜೀವನ ಕ್ಷಣಗಳು
ಹಾವ ಭಾವ ಸತ್ಯತೆಯ ಮೆರಗು
ಹಚ್ಚಿದ ಬಣ್ಣ ಬೇಗ ಮಾಸುವುದು
ನಗು ಮಗು ಮನ ಮನೆಯ ಅಂದವು
ಪರಂಜ್ಯೋತಿಯ ಶಾಂತತೆಯೇ
ಜಗದ ತಮಂಧ ಅಳಿಸುವುದು
ಅಹಂಕಾರದಲಿ ಕಾಣದು ನಗು
ಸಿರಿತನದವಂಗೆ ಕಡಿಮೆ ಹಸಿವು
ಸಿಹಿಮಾತು ರವಿಯ ಹೊಂಗಿರಣವು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ..