ಮಳೆಗಾಲದಲ್ಲಿ ಗಿಡ ಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸ ಬೇಡಿ ಸಾರ್ವಜನಿಕರಲ್ಲಿ – ಅಮರೇಗೌಡ ಮಲ್ಲಾಪುರ ಮನವಿ.
ಸಿಂಧನೂರು ಜೂ.09

ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಂಧನೂರು ನಗರದೆಲ್ಲಡೆ ಗಿಡ ಮರಗಳು ನೆಲಕ್ಕುರುಳಿವೆ. ಅದಲ್ಲದೆ ಗಿಡ ಮರಗಳ ಕೆಳಗಡೆ ನಿಲ್ಲಿಸಿರುವ ವಾಹನಗಳ ಮೇಲೆ ಬಿದ್ದಿವೆ. ದಯವಿಟ್ಟು ಎಲ್ಲ ಸಾರ್ವಜನಿಕರು ಮಳೆ ಬರುವ ಸಮಯದಲ್ಲಿ ಗಿಡ ಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸಬೇಡಿ ಎಂದು ವನಸಿರಿ ಅಮರೇಗೌಡ ಮಲ್ಲಾಪುರ ಮನವಿ ಮಾಡಿದರು.ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭ ಗೊಂಡಿದ್ದು. ರಾಜ್ಯದಲ್ಲಿ ಇನ್ನೂ ಕೆಲ ದಿನಗಳ ಕಾಲ ಅತೀ ಹೆಚ್ಚು ಮಳೆ ಬೀಳಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇದರಿಂದ ನಿನ್ನೆ ಸಿಂಧನೂರಿನಲ್ಲಿ ರಾತ್ರಿ ಪ್ರಾರಂಭ ಗೊಂಡ ಮಳೆ ಗುಡುಗು ಸಿಡಿಲಿನೊಂದಿಗೆ ರಾತ್ರಿವಿಡೀ ಸುರಿದು ಮಳೆಗೆ ನಗರದ ಹಲವೆಡೆ ಸುಮಾರು ಗಿಡ ಮರಗಳು ನೆಲಕ್ಕುರುಳಿವೆ.

ಇದರಿಂದ ಗಿಡದ ಕೆಳಗಡೆ ಸಾರ್ವಜನಿಕರು ನಿಲ್ಲಿಸಿರುವ ಕಾರು, ಬೈಕ್ ಹಾಗೂ ಇನ್ನಿತರ ವಾಹನಗಳ ಮೇಲೆ ಗಿಡಗಳು ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಗುಡುಗು ಸಿಡಿಲಿನಿಂದ ಸಾರ್ವಜನಿಕರು, ಪ್ರಾಣಿಗಳಿಗೆ ಹಾನಿ ಉಂಟಾಗುತ್ತದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಮಳೆಗಾಲದ ಸಮಯದಲ್ಲಿ ಗಿಡ ಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸಬಾರದು, ಹಸು, ಎಮ್ಮೆ, ಕರುಗಳಂತಹ ಪ್ರಾಣಿಗಳನ್ನು ಗಿಡಕ್ಕೆ ಕಟ್ಟ ಬಾರದು ಮತ್ತು ತಾವೂ ಕೂಡಾ ನಿಂತುಕೊಳ್ಳ ಬಾರದು ಎಂದು ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಸಾರ್ವಜನಿಕರಲ್ಲಿ ಮನವಿ ಮಾಡಿದರು.