ವಿವೇಕ ಪೂರ್ಣಿಮ ಕಾರ್ಯಕ್ರಮದಲ್ಲಿ – ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯ.
ಸಿಂಧನೂರು ಸ.08

ನಗರದ ಬಪ್ಪುರ ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಅನಂತನ ಹುಣ್ಣಿಮೆಯ ಅಂಗವಾಗಿ ವಿವೇಕ ಪೂರ್ಣಿಮ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಶ್ರೀ ಅಮರೇಗೌಡ ಮಲ್ಲಾಪುರ, ಕರ್ನಾಟಕ ಪರಿಸರ ಪ್ರಶಸ್ತಿ ಪುರಸ್ಕೃತರು, & ಸಂಸ್ಥಾಪಕ ಅಧ್ಯಕ್ಷರು, ವನಸಿರಿ ಫೌಂಡೇಶನ್ ರಾಯಚೂರು ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿ, ಸಸಿ ನೆಡುವುದರಿಂದಾಗುವ ಪ್ರಯೋಜನಗಳು & ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು. ನಂತರ ಪೂಜ್ಯ ಸ್ವಾಮೀಜಿಯವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೂವಿನ ಸಸಿಗಳನ್ನು ನೀಡಿದರು.

ಕಾರ್ಯಕ್ರಮದ ಅತಿಥಿಗಳಾದ ಶ್ರೀ ಮಲ್ಲಪ್ಪ.ಬಿ ಅಧ್ಯಕ್ಷರು, ಸಿ.ತಾ.ಪ್ರಾ. ಶಾಲಾ ಶಿ.ಪ.ಸ.ಸಂಘ & ಮುಖ್ಯ ಗುರುಗಳು, ಸ.ಹಿ.ಪ್ರಾ ಶಾಲೆ ಕನಕ ನಗರ ಸಿಂಧನೂರು ಇವರು ಸ್ವಾಮಿ ವಿವೇಕಾನಂದರ ಆದರ್ಶಗಳ ಕುರಿತು ಮಾತನಾಡಿದರು.

” ಭಜನ ಸಂದ್ಯಾ” ಕಾರ್ಯಕ್ರಮವನ್ನು ಶ್ರೀಯೀಮ್ಮಳ್ಳ ಪದ್ಮರಾಜು ಚೌಧರಿ ಗುರುಗಳು ಪಗಡದಿನ್ನಿ ಕ್ಯಾಂಪ್ & ಸಂಗಡಿಗರು ಬಹಳ ಶ್ರದ್ಧಾ ಭಕ್ತಿಯಿಂದ ನಡೆಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ & ಅಧ್ಯಕ್ಷತೆಯನ್ನು ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಸದಾನಂದ ಮಹಾರಾಜ್ ರವರ ಆಶೀರ್ವದಿಸಿದರು. ಕಳಕಪ್ಪ ಗಡಾದ ಅವರು ನಿರೂಪಣೆ ಮಾಡಿದರು.
ನಂತರ ಮಹಾ ಪ್ರಸಾದ ನೆರವೇರಿತು.ಈ ಸಂಧರ್ಭದಲ್ಲಿ ಸ್ವಾಮಿ ವಿವೇಕಾನಂದ ಆಶ್ರಮದ ಸರ್ವ ಭಕ್ತಾಧಿಗಳು ಉಪಸ್ಥಿತರಿದ್ದರು.

