ಮಹಾನ ಬಿಸಲಿಗೆ ನಲುಗಿದ ಜನ, ತಂಪು ಪಾನೀಯಗಳಿಗೆ ಮೊರೆ, – ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.
ಹುನಗುಂದ ಏಪ್ರಿಲ್.08

ಅಯ್ಯೋ… ಬಿಸಿಲು…! ಅಯ್ಯೋ… ಧಗೆ…ಧಗೆ…! ಎಂಥ ಬಿಸಿಲು… ಏನ ಝಳವೋ…! ಯಾವಾಗದ್ರೂ ಮುಗಿಯೋತ್ತೋ ಈ ಬೇಸಿಗೆ ಎಂದು ಸಾರ್ವಜನಿಕರು ಮಹಾನ ಬಿಸಿಲಿನ ತಾಪದಿಂದ ಬಸವಳಿದು ಹೋಗಿದ್ದಾರೆ, ಬಿಸಿಲಿನ ಪ್ರಖರತೆಯು ಬೆಳಗ್ಗೆ ೯ ಗಂಟೆಯಿಂದಲೇ ಮೈಯಲ್ಲಿ ಜಿಣಿಜಿಣಿ ನೀರು ಹರಿಯಲು ಪ್ರಾರಂಭಿಸಿದರೇ ಸಂಜೆಯ ೬ ಗಂಟೆಯವರಗೆ ಮಹಾನ ಝಳಕ್ಕೆ ಜನರು ದಂಗ್ಗಾಗುವಂತಾಗಿದೆ. ಈ ಬಾರಿಯ ಬಿಸಿಲಿನ ತಾಪಕ್ಕೆ ತಾಲೂಕಿನ ಜನರು ತತ್ತರಿಸಿ ಹೋಗಿದ್ದಂತು ಸತ್ಯ.ಹೌದು ಈ ಬಾರಿ ಮಳೆಯ ಅಭಾವದಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿ ಜನರನ್ನು ಅಸ್ತವ್ಯವಸ್ಥೆ ಗೊಳಿಸುತ್ತಿದೆ.ಬಿಸಿಲಿನ ಧಗೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಕಳೆದ ಎರಡು ಮೂರು ದಿನಗಳಿಂದ ೩೯ ಡಿಗ್ರಿ ಸೆಲ್ಸಿಯಸ್‌ನಿಂದ ೪೧ ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಲಿನ ತಾಪಮಾನ ಕಾಣಿಸಿ ಕೊಳ್ಳುತ್ತಿದ್ದು. ಮೊದಲೇ ಮಳೆಯಿಲ್ಲದೇ ಭೂಮಿ ಮರಭೂಮಿ ಯಂತಾಗಿದ್ದು. ಭಯಂಕರ ಬಿಸಿಲಿಗೆ ಮತ್ತಷ್ಟು ಕಾಯಿದು ಕಬ್ಬಿದ್ದಂತಾಗಿದ್ದು ಭೂಮಿಯ ಉಷ್ಠಾಂಶದ ಪ್ರಮಾಣ ಹೆಚ್ಚಾಗಿ ಬಿಸಿ ಗಾಳಿ ಬಿಸುತ್ತಿದ್ದು. ಮನೆಯಿಂದ ಹೊರ ಬರುವ ಪ್ರತಿಯೊಬ್ಬರಿಗೆ ಮತ್ತು ರಸ್ತೆಯ ಮೇಲೆ ಸಂಚರಿಸುವ ವಾಹನ ಸವಾರರು ಮಹಾನ ಬಿಸಿಲಿನ ತಾಪ ಮತ್ತು ಬಿಸಿ ಗಾಲಿಗೆ ಭಯಗೊಂಡು ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.ಬಿಸಿಲ ತಾಪಕ್ಕೆ ಮಗು ನಳಿಯಲ್ಲಿ ಸ್ನಾನ-ರವಿವಾರ ಬಿಸಿಲಿನ ಭಯಂಕರ ಝಳದಿಂದ ತಪ್ಪಿಸಿ ಕೊಳ್ಳಲು ಹುನಗುಂದ ಪಟ್ಟಣದ ವಿದ್ಯಾನಗರದ ಎರಡು ವರ್ಷದ ಪುಟ್ಟ ಬಾಲಕ ಮನೆಯಲ್ಲಿ ಕೆಳಗೊಂದು ಬೂಟ್ಟಿಯನ್ನು ಇಟ್ಟುಕೊಂಡು ನಳಿಯಿಂದ ನೀರನ್ನು ಪ್ರಾರಂಭಿಸಿ ಸ್ನಾನ ಮಾಡುತ್ತಿರುವ ದೃಶ್ಯ ಕಂಡು ಬಂದಿತು.ಬಿಸಿಲಿನ ಝಳಕ್ಕೆ ಮರ ಗಿಡಗಳ ಆಶ್ರಯ-ಮಳೆಯಿಲ್ಲದೇ ಬರಗಾಲ ದಿಂದ ಒಂದೆಡೆ ಜನರು ತತ್ತರಿಸಿ ಹೋದರೇ ಇನ್ನೊಂದಡೆ ಬಿಸಿಲಿನ ಝಳಕ್ಕೆ ಅಯೋಮಯ ಗೊಂಡ ವಯೋವೃದ್ದರು,ಚಿಕ್ಕ ಚಿಕ್ಕ ಮಕ್ಕಳ,ಮಹಿಳೆಯರು ಬಿಸಿಲಿನ ಧಗೆಗೆ ಒಂದು ಬಾಟಲ್ ನೀರನ್ನು ಹಿಡಿದು ಕೊಂಡು ಬೆಳಗ್ಗಿನಿಂದ ಸಾಯಂಕಾಲ ದವರಗೆ ಮರ ಗಿಡಿಗಳ ಆಶ್ರಯಿಸಿ ವಿಶ್ರಾಂತಿ ಪಡೆಯುವ ಪರಸ್ಥಿತಿ ಬಂದೋದಗಿದೆ.

ಜನರು ತಂಪು ಪಾನೀಯ ಕಡೆಗೆ ಮೊರೆ-ಬೆಳಗ್ಗಿನಿಂದಲೇ ಬಿಸಿಲಿನ ಧಗೆ ಆರಂಭವಾಗುತ್ತಿದ್ದಂತೆ ಅದರ ತಾಪಕ್ಕೆ ಜನರು ನೀರು ನೀರು ಎಂದು ಪರಿ ತಪಿಸುವಂತಾಗಿದೆ.ಬಿಸಿಲಿನ ತಾಪಕ್ಕೆ ಬಾಯಾರಿಕೆಯನ್ನು ಹಿಂಗಿಸಿ ಕೊಳ್ಳಲು ತಂಪು ಪಾನೀಯಗಳಾದ ಯಳನೀರು, ಕಲ್ಲಂಗಡಿ, ಮಜ್ಜಿಗೆ, ಲಸ್ಸಿ, ಕರಬೂಜ, ಶರಬತ್, ಲಿಂಬು ಸೋಡಾದಂತ ತಂಪು ಪಾನೀಯದ ಕಡೆಗೆ ಮೊರೆ ಹೋಗಿ ಬಿಸಲಿನ ತಾಪದಿಂದ ಸ್ವಲ್ಪ ಪ್ರಮಾಣದ ರಿಲ್ಯಾಕ್ಸ್ ಪಡೆಯುತ್ತಿದ್ದಾರೆ.ಕೆಮ್ಮು ದಮ್ಮುಗಳ ರೋಗಿಗಳ ಸ್ಥಿತಿ ಅಯೋಮಯ-ದಿನದಿಂದ ದಿನಕ್ಕೆ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿ ಬಾರಿ ಧಗೆ,ಬಿಸಿ ಗಾಳಿಗೆ ಸಾಮಾನ್ಯ ಜನರೇ ನಡುಗುವ ಸ್ಥಿತಿ ನಿರ್ಮಾಣವಾಗಿದ್ದರೇ ಇನ್ನು ಕೆಮ್ಮು ದಮ್ಮು ಇರುವ ವಯೋವೃದ್ದರ ಸ್ಥಿತಿಯಂತೂ ಅಯೋಮಯವಾಗಿದೆ.
“ಬಾಕ್ಸ್ ಸುದ್ದಿ”-
ಮಳೆಯಿಲ್ಲದೇ ಬಿಸಿಲಿನ ಪ್ರಮಾಣ ಹೆಚ್ಚಾಗಿ ನೀರು ನೀರು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ತಿಂಗಳೊಂದರಲ್ಲಿಯೇ ಜನರು ಮಹಾನ ಬಿಸಿಲಿಗೆ ಬಾರಿ ಹೈರಾಣಾಗಿದ್ದು. ಇನ್ನು ಏಪ್ರಿಲ್ ಮೇ ತಿಂಗಳಲ್ಲಿ ಇನ್ನಷ್ಟು ಬಿಸಿಲಿನ ಪ್ರಖರತೆಗೆ ಜನರು ಮತ್ತಷ್ಟು ತ್ರಾಸ ಪಡುವ ಪರಸ್ಥಿತಿ ನಿರ್ಮಾಣವಾಗಲಿದೆ. ರೋಹಿತ ಬಾರಕೇರ ಅಧ್ಯಕ್ಷರು ಕರವೇ ಹುನಗುಂದ.
“ಬಾಕ್ಸ್ ಸುದ್ದಿ”-
ಈ ಬಾರಿ ಬಿಸಿಲು ಹೆಚ್ಚಾಗಿರುವುದರಿಂದ ಬಿಸಿಲಿನಿಂದ ರಕ್ಷಿಸಿ ಕೊಳ್ಳಲು ಕಾಟನ್ ಬಟ್ಟೆಗಳನ್ನು ಧರಿಸಬೇಕು, ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸ ಬೇಕು,ಅದರಲ್ಲಿ ವಿಶೇಷವಾಗಿ ವಯೋವೃದ್ದರು,ಗರ್ಭಿಣಿಯರು,ಮಕ್ಕಳು ಹೆಚ್ಚು ಹೆಚ್ಚು ನೀರನ್ನು ಸೇವಿಸುವದರ ಜೊತೆಗೆ ತಂಪಾದ ಪ್ರದೇಶದಲ್ಲಿ ಇರುವುದು ಸೂಕ್ತ.ಕೂಲಿ ಕಾರ್ಮಿಕರು ಬೆಳಗ್ಗೆ ೬ ಗಂಟೆಗೆಯಿಂದ ೧೧ ಗಂಟೆಯವರಗೆ ಮತ್ತು ಸಾಯಂಕಾಲ ೫ ಗಂಟೆಯ ಮೇಲೆ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡುವುದು ಒಳ್ಳೆಯದು.ಡಾ.ಸಂಗಮೇಶ ಅಂಗಡಿ ತಾಲೂಕಾ ವೈದ್ಯಾಧಿಕಾರಿ ಹುನಗುಂದ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ