ಐಹೊಳೆಯಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಂದ ಮತದಾನ ಜಾಗೃತಿ.
ಐಹೊಳೆ ಏಪ್ರಿಲ್.08

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ವೈಷ್ಣವಿ ಸಂಜೀವಿನಿ ಮಹಿಳಾ ಒಕ್ಕೂಟ ದಿಂದ ಮತದಾನ ಜಾಗೃತಿ ಹಾಗೂ ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ವೇಳೆ ಸಾಂಪ್ರದಾಯಿಕ ಇಳಕಲ್ಲ ಸೀರೆ ತೊಟ್ಟ ಮಹಿಳೆಯರಿಂದ ಕುಂಭಮೇಳ ಕಾರ್ಯಕ್ರಮ ಜರುಗಿತು. ಈ ಅಭಿಯಾನಕ್ಕೆ ಕಾರ್ಯ ನಿರ್ವಾಹಕ ಅಧಿಕಾರಿ ತಾರಾ ಎನ್ ಹಾಗೂ ಸಹಾಯಕ ನಿರ್ದೆಶಕ ಮಹಾಂತೇಶ್ ಕೋಟಿ, ಚಾಲನೆ ನೀಡಿದರು.ಮತದಾನ ಜಾಗೃತಿ ಮೂಡಿಸುವ ಉತ್ತಮ ರಂಗೋಲಿ ಹಾಕಿದ ಸ್ಫರ್ಧಿಗಳಿಗೆ ಪ್ರಥಮ ಸ್ಥಾನ, ದ್ವಿತೀಯ ಹಾಗೂ ತೃತೀಯ ಸ್ಥಾನ ಆಯ್ಕೆ ಮಾಡಿ ಕಾರ್ಯ ನಿರ್ವಾಹಕ ಅಧಿಕಾರಿ ತಾರಾ ಎನ್ ಅವರು ಹಾಗೂ ಸಹಾಯಕ ನಿರ್ದೇಶಕ ಮಹಾಂತೇಶ್ ಕೋಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಗೋಡಿ ಪ್ರಶಸ್ತಿ ಪತ್ರ ನೀಡಿದರು. ಬಳಿಕ ಕ್ಯಾಂಡಲ್ ಲೈಟ್ ಮೂಲಕ ಮತದಾನ ಅರಿವು ಮೂಡಿಸಲಾಯಿತು.ಬಳಿಕ ಕಾರ್ಯ ನಿರ್ವಾಹಕ ಅಧಿಕಾರಿ ತಾರಾ ಎನ್ ಅವರು ಗ್ರಾಮಸ್ಥರಿಗೆ ಮತದಾನ ಅರಿವು ಮೂಡಿಸಿ, ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು. ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಇನ್ನು ಕಾರ್ಯ ನಿರ್ವಾಹಕ ಅಧಿಕಾರಿ ತಾರಾ ಎನ್ ಅವರು ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದಡಿ ಜನರಿಗೆ ಉದ್ಯೋಗ ನೀಡುವಂತೆ ಕಾಯಕ ಬಂಧುಗಳು ಫಾರ್ಮ್ ನಂ 6 ನೀಡಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಗೋಡಿ, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಾಜಿ ಪವಾರ್ , ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್ ಎಲ್ ಹುಣಶ್ಯಾಳ , ಕಾಯಕ ಮಿತ್ರ ಸುಮಂಗಲಾ ಐಹೊಳೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.