ಮತದಾನ ಜಾಗೃತಿ ನಡೆ, ಮತದಾರರ ಚಿತ್ತ ಲೋಕಸಭಾ ಚುನಾವಣೆ ಕಡೆ ಜಿಲ್ಲಾಧಿಕಾರಿ ಕರೆ, ಬಾಗಲಕೋಟೆ.
ಬಾಗಲಕೋಟೆ ಏಪ್ರಿಲ್.08

ಪ್ರಜಾಪ್ರಭುತ್ವದ ಯಶಸ್ವಿಗಾಗಿ ಮೇ 7ರಂದು ನಡೆಯುವ 2024ರ ಸಾರ್ವತ್ರಿಕಾ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಚುನಾವಣೆ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ತಮ್ಮ ಬಹುಮೂಲ್ಯ ಮತವನ್ನು ಚಲಾಯಿಸಬೇಕು ಹಾಗೂ ಚುನಾವಣೆಗಳಲ್ಲಿ ಮತದಾನವೆಂಬುವದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ ಎಂದು ಜಿಲ್ಲಾಧಿಕಾರಿಗಳಾದ ಜಾನಕಿ ಕೆ ಎಂ ಅವರು ಮಾತಾದಾನ ಜಾಗೃತಿ ಕರೆ ನೀಡಿದರಲ್ಲದೆ, ಮತದಾನ ಜಾಗೃತಿಯ ಬೃಹತ್ ಕಾಲ್ನಡಿಗೆ ಜಾತಾದಲ್ಲಿ ಪಾಲ್ಗೊಂಡು ಪ್ರತಿಜ್ಞಾ ವಿಧಿ ಬೊದಸಿದರು ಕಾಲ್ನಡಿಗೆ ಜಾತಾವು ಜಿಲ್ಲಾಧಿಕಾರಿಗಳ ಭವನದಿಂದ ಸಾಗಿ ಡಾ!! ಬಿ ಆರ್ ಅಂಬೇಡ್ಕರ್ ಭವನದ ಮಾರ್ಗವಾಗಿ ಜಿಲ್ಲಾ ಕ್ರೀಡಾoಗಣಕ್ಕೆ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರೆಷ್ಟಾಧಿಕಾರಿಗಳಾದ ಅಮರೇಶ್ ರೆಡ್ಡಿ, ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳಾದ ಶಶಿಧರ್ ಕುರೆರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಮರೇಶ್ ನಾಯಕ್ ಮುಂತಾದವರು ಭಾಗವಹಿಸಿದ್ದರು.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹುಲಿಗಿ ಶಿರೂರು.