ಸಹ ಮತಲ್ಲವಿದ ಲೋಕ ಸಮರ, ತೆರೆ ಮರೆಯಲ್ಲಿ ನಾಯಕರ ಭಿನ್ನಮತ ಒಲವು – ಗೆಲುವಿನ ಆಟ ಬಾಗಲಕೋಟೆ.
ಬಾಗಲಕೋಟೆ ಏಪ್ರಿಲ್.09

ಲೋಕ ಸಮರದ ಕಾವು ಬಿರು ಬಿಸಿಲಿನಲ್ಲಿ ಕಾವು ಏರುತ್ತಿದೆ. ಇತ್ತ ರಾಷ್ಟ್ರೀಯ ಎರಡು ಪಕ್ಷಗಳ ಅಭ್ಯರ್ಥಿಗಳ ಒಲವು – ಗೆಲುವಿನ ಗುದ್ದಾಟದ ಒದ್ದಾಟ ಜೋರಾಗಿಯೇ ನಡೆದಿದೆ ಎನ್ನಲಾಗಿದೆ. ಹಾಲಿ ಸಂಸದರು, ಬಿ ಜೆ ಪಿ ಯ ಅಭ್ಯರ್ಥಿಯು ಆಗಿರುವ ಪಿ ಸಿ ಗದ್ದಿಗೌಡರ ರವರು ಸಭೆ ನಡೆಸಿದಲ್ಲೆಲ್ಲ ತಮ್ಮ ಐದು ವರ್ಷದ ಕ್ರೆಡಿಟ್ ಕಾರ್ಡ್ ಬಳಸಿ ಕೊಂಡು ಭಾಷಣ ಮಾಡುತ್ತಿದ್ದರೆ ಒಳಗಿನ ಬೇಗುದಿ ಎಂಬಂತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿ ಕಂಗಲಾಗಿರುವ ಎಂ ಕೆ ಪಟ್ಟಣಶೆಟ್ಟಿ ಹಾಗೂ ಸಮೀಪದ ಸಂಭಂದಿ ಬೀಗರಾದ ಮಹಾoತೇಶ ಮಮದಾಪುರ ನಡೆ ಮೌನ ಹಾಗೂ ನಿಗೂಢವಾಗಿದೆ, ಇತ್ತ ಕಾಂಗ್ರೇಸ್ ಟಿಕೆಟ್ ವಂಚಿತೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆಗಿರುವ ವೀಣಾ ಕಾಶಾಪ್ಪನವರ ಮುನಿಸು ಅಭ್ಯರ್ಥಿ ಸಂಯುಕ್ತ ಪಾಟೀಲ್ ಹಾಗೂ ರಾಜ್ಯ ಹಿರಿಯ ನಾಯಕರ ಮೇಲೆ ಬಿಸಿಗಾಳಿ ಬಿಸಿದಂಗೆ ಬಿಸುತ್ತಿದೆ, ಸಚಿವರಾದ ಶಿವಾನಂದ ಪಾಟೀಲರು ಬೀಸುವ ಬೇಗೆಯನ್ನು ತನಿಸುವ ಹಾಗೆ ಶಾಸಕ ವಿಜಯಾನಂದ ಕಾಶಪ್ಪನವರನ್ನು ಹುನಗುಂದದ ಅವರ ನಿವಾಸದಲ್ಲಿ ಚಹಾ ಫೆ ಚರ್ಚಾ ಮಾಡಿ ಯಾವುದೇ ಮುನಿಸು ಇಟ್ಟುಕೊಳ್ಳದೆ ಪ್ರಚಾರಕ್ಕೆ ಬನ್ನಿ ಎoದು ಕರೆದಾಗ ನಗುತ್ತಲೇ ಕೈ ಕುಲುಕಿ ಕಾಂಗ್ರೇಸ್ ಪಕ್ಷವೇ ನನ್ನೂಸಿರು ಸಾರ್ವಜನಿಕ ಪ್ರಚಾರಕ್ಕೆ ಬರುತ್ತೇವೆ ಎಂದರು ಸಾರ್ವಜನಿಕ ವಲಯದಲ್ಲಿ ಪತಿ ಬಂದಿದ್ದಾರೆ ಪತ್ನಿಯು ಬರಬಹುದು ಎಂಬ ನೀರಿಕ್ಷೆಯನ್ನು ವೀಣಾ ಮೇಡಂ ಹುಸಿಯಾಗಿಸಿ ಸಂಯುಕ್ತ ಮೇಡಂ ಗೆ ಟಾಂಗ ಕೊಟ್ಟಿರುವುದು ಜಿಲ್ಲೆಯ ಕೆಲವು ನಾಯಕರಿಗೆ ಕಸಿ ವಿಸಿ ಗೊಂಡತಾಗಿದೆ ಬಲ್ಲ ಮೂಲಗಳ ಪ್ರಕಾರ ವೀಣಾ ಕಾಶಪ್ಪನವರ ನಡೆ ಬಿಸಿತುಪ್ಪವನ್ನು ನುಂಗಿಸುವ ಮಾರ್ಮಿಕ ಉತ್ತರದಂತಾಗಿದೆ. ಎಂದು ಕೈ ಕೈ ಹಿಸುಕಿ ಕೊಳ್ಳುವ ಸ್ಥಿತಿ ಕೈ ನಾಯಕರದ್ದಾಗಿದೆ.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.