ಪ್ರೀತಿ ಬಾಂಧವ್ಯ ಬೆಸೆಯುವ ರಂಜಾನ್ ಹಬ್ಬ ಸಾಮರಸ್ಯದ ಸಂಕೇತ.
ಕಲಕೇರಿ ಏಪ್ರಿಲ್.10

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗುರುವಾರ ಪವಿತ್ರ ರಂಜಾನ್ ಹಬ್ಬ ಎಲ್ಲಾ ಮುಸ್ಲಿಂ ಬಾಂಧವರು ಗುರುವಾರ ದಿಂದ ಬೆಳಗ್ಗೆ ಮದೀನಾ ಮಸೂತಿಯಿಂದ ಎಲ್ಲಾ ಮುಸ್ಲಿಂ ಬಾಂಧವರು ಒಂದಾಗಿ ಅಲ್ಲಾನ ಧ್ಯಾನ ಮಾಡುತ್ತಾ ಇದೀಗ ಮೈದಾನದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಒಂದಾಗಿ ಪವಿತ್ರ ರಂಜಾನ್ ಹಬ್ಬವನ್ನು ಒಂದು ತಿಂಗಳು ವರೆಗೆ ಎಲ್ಲಾ ಮುಸ್ಲಿಂ ಬಾಂಧವರು ಉಪಾಸವನ್ನು ಮಾಡಿ ಆ ಅಲ್ಲಾನಲ್ಲಿ ನಾವು ಮಾಡಿದಂತ ಕರ್ಮಗಳನ್ನು ದೂರ ಮಾಡು ಎಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡಿದರು. ಕಲಕೇರಿಯ ಸಮಸ್ತ ಮುಸ್ಲಿಂ ಬಾಂಧವರು ಗುರುವಾರ ಮದೀನಾ ಮಸೂತಿಯಿಂದ ಬೆಳಗ್ಗೆ 8:00 ಯಿಂದ ಅಲ್ಲಾನ ಪ್ರಾರ್ಥನಾ ಮಾಡುತ್ತಾ ಈದ್ಗಾ ಮೈದಾನದಲ್ಲಿ ಎಲ್ಲರೂ ಸೇರಿ ನಮಾಜ್ ಮಾಡಿ ನಂತರ ಎಲ್ಲಾ ಮುಸ್ಲಿಂ ಬಾಂಧವರು ತಮ್ಮ ಮನೆಗಳಿಗೆ ಬಂದು ಎಲ್ಲರನ್ನೂ ಕೈ ಕೂಲಿಕಿಸಿ ಎಲ್ಲರೂ ಆತ್ಮೀಯ ಮನೋಭಾವನೆ ಇರೋಣ ಎಂದು ಈ ಸಂತೋಷದ ಮುಂದೆ ಯಾವ ಸಂತೋಷವಿಲ್ಲ ಎಂದು ತಿಳಿಸಿದರು. ನಂತರ ಹಿಂದುಗಳನ್ನು ಮನೆಗೆ ಕರೆದು ಶುರ್ಕುಂಬಾ ಕುಡಿಸಿ ನಾವು ನೀವು ಭೇದ ಭಾವ ಇಲ್ಲದೆ ಎಲ್ಲರೂ ಅಣ್ಣ ತಮ್ಮನಂತೆ ಒಂದೇ ತಾಯಿಯ ಮಕ್ಕಳಂತೆ ಇರೋಣ ಎಂದು ಊರಿನ ಮುಖಂಡರಾದ ನಬಿಲಾಲ್ ನಾಯ್ಕೋಡಿ ಗ್ರಾಮ ಪಂಚಾಯತಿಯ ಸದಸ್ಯರು ಈ ಸಂದರ್ಭದಲ್ಲಿ ತಿಳಿಸಿದರು, ರಜಾಕ್ ನೈಕೋಡಿ, ಹುಸೇನ್ ನಾಯ್ಕೋಡಿ, ನಜೀರ್ ಮುಲ್ಲಾ, ಬಸಿರ ಮೊವಿನ್, ಗುರುವಾರ ನಡೆಯುವ ಪವಿತ್ರ ರಂಜಾನ್ ಹಬ್ಬವನ್ನು ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಒಳ್ಳೆಯ ರೀತಿಯಿಂದ ಖುಷಿಯಿಂದ ಆಚರಣೆ ಮಾಡೋಣ ಎಂದು ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.