ಶ್ರೀದೇಶಂಸು ಇವರಿಗೆ – “ಹೆಮ್ಮೆಯ ಕನ್ನಡಿಗ” ಪ್ರಶಸ್ತಿಗೆ ಭಾಜನ.
ದೇವರ ಹಿಪ್ಪರಗಿ ನ.08

ವಿಜಯಪೂರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಾಹಿತಿ ಬರಹಗಾರ ಶ್ರೀದೇಶಂಸು(ಶ್ರೀಸುರೇಶ ಶಂಕ್ರೆಪ್ಪ ಅಂಗಡಿ) ವೃತ್ತಿಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೃತ್ತಿಯಲ್ಲಿ ಕವಿ ಲೇಖಕ ಬರಹಗಾರರು. “ಸಾವಿರ ಹೊನ್ನುಡಿಗಳ ಸಿರಿ” ಕವಿತೆಗಳು 160, ಚುಟುಕು 56, ಸಮಾಜ ಮುಖಿ ಲೇಖನಗಳು 200, ಆರೋಗ್ಯ ಲೇಖನಗಳು 41′ ಪ್ರಮುಖ ವಿದ್ಯಮಾನಗಳ ಬರಹಗಳ ಮೂಲಕ ಪ್ರಖ್ಯಾತರಾದ ಇವರನ್ನು ಗುರುತಿಸಿ ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘ (ರಿ) ಅಮೀನಗಡ ಇವರು.

ಕರ್ನಾಟಕ ರಾಜ್ಯೋತ್ಸವದ “ಹೆಮ್ಮೆಯ ಕನ್ನಡಿಗ” ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. “ಹೆಮ್ಮೆಯ ಕನ್ನಡಿಗ” ಪ್ರಶಸ್ತಿಗೆ ಭಾಜನರಾದ ಇವರನ್ನು ಸಾಹಿತ್ಯ ಆಶಕ್ತರು ಗೆಳಯರ ಬಳಗ ಬಂಧು ಬಳಗ ಶುಭ ಕೋರಿ ಅಭಿನಂದಿಸಿದ್ದಾರೆ.

