ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಿಜ್ಞಾನ ಪ.ಪೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದ – ಪ್ರಕೃತಿ.ಕೆ.ಎಂ.ಎಂ ವಿದ್ಯಾರ್ಥಿನಿ.
ಕೊಟ್ಟೂರು ಏಪ್ರಿಲ್.10
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ 2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕ ತೆಗೆದುಕೊಂಡ ಪ್ರಕೃತಿ ಕೆ ಎಂ ಎಂ ವಿದ್ಯಾರ್ಥಿನಿಯು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡ 96.5 ರಷ್ಟು ಫಲಿತಾಂಶವನ್ನು ಪಡೆದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಿಜ್ಞಾನ ಪ.ಪೂ.ಕಾಲೇಜಿನ ಕೀರ್ತಿಗೆ ಪಾತ್ರರಾಗಿರುತ್ತಾರೆ. ನೊಂದಣಿ ಸಂಖ್ಯೆ-20249257154 ಕನ್ನಡ-99, ಇಂಗ್ಲಿಷ್ -93,ಭೌತಶಾಸ್ತ್ರ-94, ರಸಾಯನಶಾಸ್ತ್ರ-96, ಗಣಿತ-100 ಜೀವಶಾಸ್ತ್ರ-97 ಒಟ್ಟು ಅಂಕಗಳು 579 ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.ಬಿ ಮಹಾಲಕ್ಷ್ಮಿ ವಿದ್ಯಾರ್ಥಿನಿಯು 555 ಅಂಕಗಳನ್ನು ಪಡೆದು ಶೇಕಡ 93 ಫಲಿತಾಂಶವನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ರಕ್ಷಿತಾ ಎಂ ಎಸ್ 518 ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಪಡೆದಿರುತ್ತಾರೆ ಹಾಗೂ ಕಾಲೇಜಿನ ಒಟ್ಟು ಫಲಿತಾಂಶ 80 ರಷ್ಟು ಪಡೆದಿದ್ದು ಕಾಲೇಜಿನ ಕೀರ್ತಿಗಾಗಿ ಶ್ರಮಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕ ವೃಂದವರಿಗೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯಿಂದ ಅಭಿನಂದನೆಗಳನ್ನು ತಿಳಿಸಲು ಹರ್ಷವಾಗುತ್ತದೆ.ಎಂದು ಶ್ರೀ ಗುರು ತಿಪ್ಪಿರುದ್ರಸ್ವಾಮಿ ವಿಜ್ಞಾನ ಪದವಿಪೂರ್ವ ಕಾಲೇಜ್ ಕೊಟ್ಟೂರು ಪ್ರಾಂಶುಪಾಲರು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಸುದ್ದಿ ವಾಹಿನಿಯೊಂದಿಗೆ ಹಂಚಿಕೊಂಡರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು.