ಕೋಟೆ ಗುಡ್ಡದ ಮಾರಮ್ಮ ಜಾತ್ರೆ ಇಂದು ಸಿಡಿ ನೋಡಿ – ಭಕ್ತಾದಿಗಳು ಸಂತೃಪ್ತರಾದರು.
ರಾಯಪುರ ಜ.17

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಪುರ ಗ್ರಾಮ ಪಂಚಾಯಿತಿಗೆ ಒಳಪಡುವ ವ್ಯಾಸರಹಟ್ಟಿ ಕೋಟೆ ಗುಡ್ಡದ ಮಾರಮ್ಮ ದೇವಿ ನೆಲೆಸಿದ್ದು ಈ ದೇವಿಯ ಜಾತ್ರೆ 14, 15, 16 ಮೂರು ದಿನ ಗಂಗೆ ಪೂಜೆಗಾವು ಜಿಗಿಯುವುದು ಮತ್ತು ಸಿಡಿ ಹಾಡುವುದು ಇದ್ದೀವಿ ಕಾರ್ಯಕ್ರಮಗಳು ಮೂರು ದಿನ ಸುಮಾರು 50 ಗ್ರಾಮಗಳಿಂದ ನಾನಾ ಜಿಲ್ಲೆಗಳಿಂದ ಬಂದಿರತಕ್ಕಂತ ಭಕ್ತಾದಿಗಳು ಇಂದು ಸಿಡಿ ಆಡುವುದು ನೋಡಿ ಸಂತೃಪ್ತರಾದರು.

ಮತ್ತು ಈ ಈ ದೇವಿಗೆ ಹೂ ಎಂದರೆ ಬಹಳ ಇಷ್ಟ ಎಲ್ಲಾ ಭಕ್ತಾದಿಗಳು ಹೂ ಅರ್ಪಿಸಿ ಹಣ್ಣು ಕಾಯಿಗಳನ್ನು ಮಾಡಿಸಿ ಸಾವಿರಾರು ಸಂಖ್ಯೆಯಿಂದ ಬಂದಿರ್ತಕ್ಕಂತ ಭಕ್ತಾದಿಗಳು ದೇವಿಯ ನೋಡಿ ಸಂತೃಪ್ತರಾಗುತ್ತಾರೆ ರಾಯಪುರ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾದ. ಕರಿಬಸಪ್ಪ ಅಧ್ಯಕ್ಷರು ಸದಸ್ಯರುಗಳು ಗ್ರಾಮದ ಮತ್ತು ಪೊಲೀಸ್ ಇಲಾಖೆಯ ಬಂದೋಬಸ್ತ್ ವೃತ್ತ ನಿರೀಕ್ಷಕರಾದ ಸಿಪಿಐ ವಸಂತ ಹಸುದಿ ಪಿ.ಎಸ್.ಐ ಪಾಂಡುರಂಗಪ್ಪ ಹಾಗೂ ಪ್ರಮುಖರು ಗಣ್ಯರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು