ರಾಜ್ಯದ ಎಸ್ಸಿ ಪಟ್ಟಿಯನ್ನು ಪರಿಶೀಲಿಸಲು ಹೈಕೋರ್ಟ್ ರೆಡಿ, ಕೇಂದ್ರ /ರಾಜ್ಯಗಳ ಆಯೋಗಕ್ಕೆ ನೋಟಿಸ್ ಜಾರಿ.
ಬಾಗಲಕೋಟೆ ಏಪ್ರಿಲ್.10
ರಾಯಚೂರ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಾದ ಮಹೇಂದ್ರಕುಮಾರ ಮೀತ್ರಾರವರು ಕರ್ನಾಟಕದಲ್ಲಿ ಪರಿಶಿಷ್ಟ ಮೀಸಲಾತಿ ಪಟ್ಟಿಯಲ್ಲಿರುವ (sc)ಲಂಬಾಣಿ ಬೋವಿ ಕೊರಮ ಕೊರಚ ನಾಲ್ಕು ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳಾದ ಏನ್ ವಿ ಅಂಜರಿಯಾ ಹಾಗೂ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ಮಾಡಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಸಲ್ಲಿಸಿದ್ದ ಮನವಿವನ್ನು 2020 ಫೇಬ್ರುವರಿ 14 ರಂದು ಸುಪ್ರೀಂಮ್ ಕೋರ್ಟ್ ಪರಿಶೀಲಿಸಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕೆಂಬುದನ್ನು ಆಧಾರಿಸಿ 2020 ರ ಮಾರ್ಚ್ 12 ರಂದು ಆಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ನಾಲ್ಕು ಜಾತಿಗಳನ್ನು ಕೈ ಬಿಡುವ ಅಥವಾ ತೀರಸ್ಕರಿಸುವ ಬಗ್ಗೆ ಪ್ರಸ್ತಾವನೆ ಕಳಿಸುವಂತೆ ಆದೇಶಿಸಿತ್ತು ಆದರೆ ಸರ್ಕಾರವು ಈ ಪ್ರಸ್ತಾವನೆಗೆ ಅನುಮತಿಸದೆ ಕಾಲಹರಣ ಮಾಡಿತ್ತು, 2020 ಮೇ 14 ರಂದು ಅದೇ ಮಾದರಿ ವರದಿ ಮನವಿಯನ್ನು ಪುನಃ ಆಯೋಗದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿತ್ತು, ಇದರ ಪರಿಣಾಮವಾಗಿ 2023 ಫೇ 16 ರಂದು ಸರ್ಕಾರವು ಈ ನಾಲ್ಕು ಜಾತಿಗಳನ್ನೂ ಪಟ್ಟಿಯಲ್ಲಿಯೇ ಉಳಿಸಿ ಕೊಳ್ಳಲು ಆಯೋಗಕ್ಕೆ ಪತ್ರ ಬರೆದಿತ್ತು, ಇದನ್ನರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮನವಿಯನ್ನು ಸುಪ್ರೀಂ ಕೋರ್ಟ್ ಮುಖಾಂತರ ಹೈಕೋರ್ಟ್ (ಉಚ್ಚ )ಮೊರೆ ಹೋಗಿದ್ದರ ಪರಿಣಾಮವಾಗಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸರ್ಕಾರದಿಂದ ಹಾಗೂ ಆಯೋಗದಿಂದ ಪಡೆದು ಕೊಂಡು ಪರಿಶೀಲಿಸಿ ದಾಖಲಿಸಲು ಮಾನ್ಯ ಉಚ್ಚನ್ಯಾಯಾಲಯವು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತೀಯ ಜನಗಣತಿ ಆಯುಕ್ತರು, ಪ್ರಧಾನ ರೀಜಿಸ್ಟರ್, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಕೇಂದ್ರ ಚುನಾವಣೆ ಆಯೋಗ, ರಾಜ್ಯ ಮುಖ್ಯ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಚುನಾವಣೆ ಆಯೋಗದ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮಾಡುತ್ತಿದೆ.
(ಸಂಗ್ರಹ ಮಾಹಿತಿ)
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ ಶಿರೂರು.