ಬೈರವಾಡಗಿ ಗ್ರಾಮದಲ್ಲಿ ಸಂಭ್ರಮದ ರಂಜಾನ್ ಆಚರಣೆ.
ಬೈರವಾಡಗಿ ಏಪ್ರಿಲ್.11

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಬೈರವಾಡಗಿ ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಮುಸ್ಲಿಮರ ಮೂವತ್ತು ದಿನಗಳ ಉಪವಾಸ ಆಚರಣೆ ಕೊನೆ ಗೊಳಸಿ ರಂಜಾನ್ ಹಬ್ಬ ಸಂಭ್ರಮ ದಿಂದ ಆಚರಿಸಿದರು.ದಿಂಡವಾರ ರಸ್ತೆಯ ದರ್ಗಾ ಈದ್ಗಾ ಮೈದಾನದಲ್ಲಿ ಗುರುವಾರ ಮುಂಜಾನೆಯಿಂದಲೇ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಸಂಬಂಧಿಗಳೊಂದಿಗೆ ಮುಸ್ಲಿಮರು ಬೆಳಿಗ್ಗೆ ಹೊಸ ಬಟ್ಟೆಗಳನ್ನು ತೊಟ್ಟು ಕುಟುಂಬ ಸಮೇತರಾಗಿ ಪ್ರಾರ್ಥನೆಗಳಿಗೆ ಆಗಮಿಸಿ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಣೆಯಲ್ಲಿ ತೊಡಗಿದರು. ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಮರು ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಒಬ್ಬರಿ ಗೊಬ್ಬರು ಪರಸ್ಪರ ಶುಭಾಶಯ ಕೋರುವುದರೊಂದಿಗೆ ರಂಜಾನ್ ಆಚರಿಸಿದರು. ಮುಸ್ಲಿಂ ಮಹಿಳೆಯರೂ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.ಈ ಸಂದರ್ಭದಲ್ಲಿ.ಅಲ್ತಾಪ್ ಕರ್ಜಗಿ, ಮೈನುದಿನ್ ಕರ್ಜಗಿ,ಬಂದೇನವಾಜ್ ಲೈಮಾನ್ ಮಶ್ಯಾಕ, ಮೋದಿನ ವಾಲಿಕಾರ, ರಜಾಕ್ ಶಾಬಾದಿ,ಅಬ್ದುಲ್ ಬಳಗಾನೂರ, ನಬಿಲಾಲ್ ಪಾನಪರೋಷ್,ರಪಿಕ್ ಕರ್ಜಗಿ,ಮೊಮ್ಮದ್ ಯಾಸಿನ್ ಶಾಬಾದಿ,ಮುಸ್ಲಿಂ ಬಾಂಧವರು ಇತರರು ಇದ್ದರು.
ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ.