ಪೋಲಿಸ್ ಮತ್ತು ಸಿ.ಆರ್.ಪಿ.ಎಫ್ ತುಕಡಿ – ರೂಟ್ ಮಾರ್ಚ್.
ತರೀಕೆರೆ ಏಪ್ರಿಲ್.12
2024 ರ ಲೋಕಸಭಾ ಚುನಾವಣೆಯ ನಿಮಿತ್ತ ಜನರಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಇಂದು ತರೀಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಮತ್ತು ಸಿ ಆರ್ ಪಿ ಎಫ್ ಸಿಬ್ಬಂದಿಯೊಂದಿಗೆ ರೂಟ್ ಮಾರ್ಚ್ ಮಾಡಲಾಯಿತು ಎಂದು ಉಪ ವಿಭಾಗಾಧಿಕಾರಿ ಡಾ. ಕೆಜೆ ಕಾಂತರಾಜ್ ಹೇಳಿದರು.
ಅವರು ಇಂದು ಪೊಲೀಸ್ ಉಪ ಅಧೀಕ್ಷಕರಾದ ಹಾಲುಮತೀರಾವ್, ತಹಶೀಲ್ದಾರ್ ರಾಜೀವ, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್, ಪೊಲೀಸು ಇನ್ಸ್ಪೆಕ್ಟರ್ ಸಂತೋಷ ಶೆಟ್ಟಿ, ರವರೊಂದಿಗೆ ಎರಡು ಜನ ಇನ್ಸ್ಪೆಕ್ಟರ್ಗಳು ಐದು ಜನ ಪೊಲೀಸ್ ಉಪ ನಿರೀಕ್ಷಕರು 20 ಜನ ಪೊಲೀಸ್ ಕಾನ್ಸ್ಟೇಬಲ್ ಗಳು ಮತ್ತು 50 ಜನ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಸಂಚಲನ ಮಾಡಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದರು. ದಿನಾಂಕ 26 ರಂದು ನಡೆಯುವ ಚುನಾವಣೆಗೆ ಶಾಂತಿಯಿಂದ ಜನರು ನಿರ್ಭೀತಿಯಿಂದ ಮತ ಚಲಾವಣೆ ಮಾಡಬೇಕೆಂದು ಹೇಳಿದರು. ಎಂ ಸಿ ಹಳ್ಳಿ ಮತ್ತು ರಂಗೆನಹಳ್ಳಿ ಗ್ರಾಮಗಳಲ್ಲಿಯೂ ಸಹ ರೂಟ್ ಮಾರ್ಚ್ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ.