ಕರಾಟೆ ಪಟುಗಳಿಂದ ಮತದಾನ – ಸಂವಿಧಾನ ಜಾಗೃತಿ.
ಬಾಗಲಕೋಟೆ ಏಪ್ರಿಲ್.14

ರಾಜ್ಯದ ಪ್ರತಿಷ್ಠಿತ ಕರಾಟೆ ಸಂಸ್ಥೆ ರಾಠೋಡ ಮಾರ್ಷಲ್ ಆರ್ಟ್ಸ್ & ಸ್ಕೀಲ್ ಯೂನಿಯನ್ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ರವಿವಾರ ಬೆಳಿಗ್ಗೆ ೬:೩೦ ಕ್ಕೆ ನಗರದ ವಿದ್ಯಾಗಿರಿ ಸರ್ಕಲ್‌ನಿಂದ ಜಿಲ್ಲಾಡಳಿತ ಭವನದವರೆಗೆ ನಡೆದ ಮತದಾನ ಹಾಗೂ ಸಂವಿಧಾನ ಜಾಗೃತಿ ಜಾಥಾಗೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಅವರು, ಈ ಸುದಿನ ದಂದು ಜಾಗೃತಿ ಕಾರ್ಯಕ್ರಮವನ್ನು ಈ ಪುಟಾಣಿ ಮಕ್ಕಳಿಂದ ಹಮ್ಮಿಕೊಂಡಿದ್ದು ಬಹಳ ಅಭಿನಂದನಾರ್ಹ, ಇದರ ಜೊತೆಗೆ ಎಲ್ಲರೂ ತಪ್ಪದೇ ನೈತಿಕವಾಗಿ ಮತದಾನ ಮಾಡಿ ಎಂದು ಕರೆ ನೀಡಿದರು. ತದನಂತರ ಪ್ರಾರಂಭವಾದ ಜಾಥಾ ಕಾಳಿದಾಸ ಸರ್ಕಲ್, ಜಿಲ್ಲಾ ಆಸ್ಪತ್ರೆ, ನಗರಸಭೆ, ಡಿಸಿಸಿ ಬ್ಯಾಂಕ್, ಎಲ್‌ಐಸಿ ಸರ್ಕಲ್, ಪೊಲೀಸ್ ಪ್ಯಾಲೇಸ್, ಬಸ್ ನಿಲ್ದಾಣದಿಂದ ಜಿಲ್ಲಾಡಳಿತ ಭವನದವರೆಗೆ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಮತದಾನ ಹಾಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದರು. ತದ ನಂತರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರಾಟೆ ಚೀಪ್ ಕೋಚ್ ಎಸ್.ಆರ್.ರಾಠೋಡ ಸೇರಿದಂತೆ ಚುನಾವಣಾಧಿಕಾರಿಗಳು, ಪೊಲೀಸರು, ಕರಾಟೆ ತರಬೇತುದಾರರು, ಪಾಲಕರು ಉಪಸ್ಥಿರಿದ್ದರು.