ಅಂಗನವಾಡಿ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ.

ಹುನಗುಂದ ಏಪ್ರಿಲ್.18

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಾ ಪಂಚಾಯತಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯ ಕರ್ತೆಯರಿಂದ ಮತದಾನ ಜಾಗೃತಿ ಜಾಥಾಗೆ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಾರಾ ಎನ್ ಹಾಗೂ ಸಿಡಿಪಿಓ ವೆಂಕಪ್ಪ ಗಿರಿತಮನ್ನವರ ಚಾಲನೆ ನೀಡಿದರು.ಜಾಥಾವೂ ತಾಲೂಕಾ ಪಂಚಾಯತಿ ಕಚೇರಿಯಿಂದ ನಗರದ ಸರ್ಕಲ್ ವರೆಗೂ ಜಾಥಾ ನಡೆಯಿತು. ಬಳಿಕ ಮಾನವ ಸರಪಳಿ ಮೂಲಕ ಮತದಾನ ಅರಿವು ಮೂಡಿಸಲಾಯಿತು. ಕಾರ್ಯ ನಿರ್ವಾಹಕ ಅಧಿಕಾರಿ ತಾರಾ ಎನ್ ಅವರು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಾಜಿ ಪವಾರ್, ಸೂಪರ್ ವೈಸರ್ ಅವರು ಉಪಸ್ಥಿತರಿದ್ದರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button