ರಾಜ್ಯದಲ್ಲಿಯೇ ಹೆಸರಾಂತ ಕುಸ್ತಿ ನಡೆಯುತ್ತಿದೆ – ಪರಮೇಶ್.

ತರೀಕೆರೆ ಅಕ್ಟೋಬರ್.26

ವಿವಿಧ ರಾಜ್ಯಗಳಿಂದ ಬರುವ ಪೈಲ್ವಾನರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕುಸ್ತಿ ಪಂದ್ಯಗಳನ್ನು ನಡೆಸಲಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷರಾದ ಪರಮೇಶ್ ಹೇಳಿದರು. ಅವರು ಇಂದು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಕುರುಬ ಸಮಾಜ, ಪುರಸಭೆ ತರೀಕೆರೆ, ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಕುಸ್ತಿ ಕ್ರೀಡಾಪಟುಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುಸ್ತಿ ಸ್ಪರ್ಧೆ ರಾಜ್ಯದಲ್ಲಿಯೇ ಹೆಸರಾಂತವಾಗಿದೆ ಎಂದು ಹೇಳಿದರು. ಪುರಸಭಾ ಸದಸ್ಯರಾದ ಅಶೋಕ್ ಕುಮಾರ್ ಮಾತನಾಡಿ ರಾಜ್ಯದ ಮೈಸೂರುನಲ್ಲಿ ನಡೆಯುವ ಕೇಸರಿ ದಸರಾ ಕುಸ್ತಿ ನಂತರ ತರೀಕೆರೆಯಲ್ಲಿಯೇ ಬೆಳ್ಳಿ ಗದೆ ಮತ್ತು ಬಂಗಾರದ ಬಳೆ, ಬೆಳ್ಳಿ ಪದಕ, ಚಿನ್ನದ ಪದಕ ಹಾಗೂ ಆಕರ್ಷಕ ಬಹುಮಾನಗಳೊಂದಿಗೆ ಕುಸ್ತಿ ನಡೆಸಲಾಗುತ್ತದೆ. ಪ್ರಾಚೀನ ಪರಂಪರೆಯನ್ನು ತರೀಕೆರೆ ಕುಸ್ತಿ ಪಂದ್ಯಗಳು ಉಳಿಸಿಕೊಂಡು ಬಂದಿವೆ ಇದಕ್ಕೆ ಮುಖ್ಯ ಕಾರಣ ಗುರು ರೇವಣಸಿದ್ದೇಶ್ವರ ಕುಸ್ತಿ ಸಂಘ ಆಗಿರುತ್ತದೆ. ಹೊರಗಿನಿಂದ ಬಂದಂತಹ ಕುಸ್ತಿ ಪಟುಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಹ ಸಂಘದವರು ಏರ್ಪಡಿಸಿರುತ್ತಾರೆ ಎಂದು ಹೇಳಿದರು.

ಪುರ ಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ರವರು ಮಾತನಾಡಿ ದೇಶೀಯ ಕ್ರೀಡೆಗಳಲ್ಲಿ ಕುಸ್ತಿ ಕ್ರೀಡೆ ಪ್ರಾಮುಖ್ಯತೆಯನ್ನು ಪಡೆದಿದೆ, ಮಣ್ಣಿನ ಅಸ್ಮಿತೆ ಕಾಣಬಹುದಾಗಿದೆ. ತರೀಕೆರೆ ಪಟ್ಟಣದಲ್ಲಿ ಏರ್ಪಡಿಸಿರುವ ಕುಸ್ತಿ ಪಂದ್ಯಾವಳಿಗಳು ರಾಜ್ಯದಲ್ಲಿ ಪ್ರತಿಷ್ಠಿತೆ ಪಡೆದಿದೆ. ಶ್ರೀ ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘವು ನಿಜವಾದ ಕುಸ್ತಿ ಪೈಲ್ವಾನರನ್ನು ಗುರುತಿಸುವ ಮತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದೆ. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯೂ ಆಗಿದೆ, ಈ ಕುಸ್ತಿ ಪಂದ್ಯಾವಳಿಗಳನ್ನು ಯಾವುದೇ ರಾಜಕೀಯ ಕೋಮು ವಿವಾದಗಳಿಲ್ಲದೆ ನ್ಯಾಯ ಸಮ್ಮತವಾಗಿ ನಡೆಸಲಾಗುತ್ತಿದೆ. ಇದು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುತ್ತಿದೆ ಎಂದು ಹೇಳಿದರು. ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಗೌರವಾಧ್ಯಕ್ಷರಾದ ವಗ್ಗಪ್ಪ ರವರ ಮಂಜಣ್ಣ ಮಾತನಾಡಿ ತರೀಕೆರೆಗೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸಹ ಕುಸ್ತಿ ಪೈಲ್ವಾನರು ಆಗಮಿಸಿ ಇಲ್ಲಿ ಉತ್ತಮ ಕುಸ್ತಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಗಳಿಗೆ ಎಲ್ಲರೂ ಶಾಂತಿಯಿಂದ ವೀಕ್ಷಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಟಿಎಲ್ ಕಿರಣ್ ಕುಮಾರ್( ಪಕಾಳಿ ), ಉಪಾಧ್ಯಕ್ಷ ಜೈ ಸ್ವಾಮಿ ಕಾರೆ, ಪುರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ, ಕಾರ್ಯದರ್ಶಿ ನಂದೀಶ್ ಕುಮಾರ್, ಮಾಜಿ ಪೈಲ್ವಾನರಾದ ಮೊಹಮ್ಮದ್ ಫಯಾಜ್, ಮಾಜಿ ಪುರ ಸಭಾ ಅಧ್ಯಕ್ಷರಾದ ಡಿ ವಿ ಪದ್ಮರಾಜ್ , ಟಿಎಸ್ ರಮೇಶ್, ಮತ್ತು ಪುರ ಸಭಾ ಸದಸ್ಯರಾದ ಚಂದ್ರಶೇಖರ್, ಉಪಸ್ಥಿತರಿದ್ದು ಕುಸ್ತಿ ಪಂದ್ಯಗಳನ್ನು ಪೈಲ್ವಾನ್ ಶಿವಣ್ಣ, ಪೈಲ್ವಾನ್ ರೇವಣ್ಣ ತೀರ್ಪುಗಾರರಾಗಿ ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button