ಸರ್ಕಾರದ ಮೂಲಕ ಸೌಲಭ್ಯ ಒದಗಿಸುವ ಭರವಸೆ ವ್ಯಕ್ತಡಿಸಿದ ಶಾಸಕರು ಡಾll ಎನ್.ಟಿ.ಶ್ರೀನಿವಾಸ್.
ಕೂಡ್ಲಿಗಿ ಜುಲೈ.26

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಮಂಗಳವಾರದಂದು ಮಾನ್ಯ ಕೂಡ್ಲಿಗಿ ಶಾಸಕರಾದ ಡಾಕ್ಟರ್ ಎನ್ ಟಿ ಶ್ರೀನಿವಾಸ್ ರವರಿಗೆ ಕರ್ನಾಟಕ ಪತ್ರಕರ್ತರ ಸಂಘ (ರಿ) ರವರಿಂದ ಕೂಡ್ಲಿಗಿ ತಾಲೂಕಿನ ಎಲ್ಲಾ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ನೂತನ ಶಾಸಕರಿಂದ ಸರ್ಕಾರದ ಯೋಜನೆ ಅಡಿಯಲ್ಲಿ ಖಾಲಿ ನಿವೇಶನ ಹಾಗೂ ಪತ್ರಿಕಾ ಭವನವನ್ನು ಸೌಲಭ್ಯಗಳನ್ನು ಕಲ್ಪಿಸುವಂತೆ ಶಾಸಕರಿಗೆ ಪ್ರವಾಸಿ ಮಂದಿರದಲ್ಲಿ ಮನವಿ ಪತ್ರವನ್ನು ಕರ್ನಾಟಕ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷರಾದ ಬಡಿಗೇರ್ ನಾಗರಾಜ ಹೊಸಪೇಟೆ ಟೈಮ್ಸ್ ದಿನ ಪತ್ರಿಕೆ ವರದಿಗಾರರು ಹಾಗೂ ತಾಲೂಕು ಗೌರವಾಧ್ಯಕ್ಷರಾದ ಸಿದ್ದಾಪುರದ ಈಶಪ್ಪ ಹೊಸಳ್ಳಿ ಹೋಬಳಿಯ ಗಣಿನಾಡು ಪತ್ರಿಕೆಯ ವರದಿಗಾರರು ಹಾಗೂ ರಾಜ್ಯ ಸದಸ್ಯರಾದ ಮುರುಳಿದರ ತಾಲೂಕು ಕಾರ್ಯದರ್ಶಿಯಾದ ರಾಘವೇಂದ್ರ ಸಾಲುಮನಿ ಸಿಹಿ -ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್. ಕಿಸ್ಕಿಂದ ಯುಟ್ಯೂಬ್ ಚಾನೆಲ್ ವರದಿಗಾರರು ಕೂಡ್ಲಿಗಿ ಹೆಚ್. ತಿಪ್ಪೇಸ್ವಾಮಿ ಎ ಟು ಝೆಡ್ ಯೂಟ್ಯೂಬ್ ಚಾನೆಲ್ ವರದಿಗಾರರು ಮೀನ್ ಕೆರೆ ಹಾಗೂ ಮಂಜುನಾಥ ಹೂಡೇo ಹೊಸ ದಿಗಂತ ಪತ್ರಿಕೆಯ ವರದಿಗಾರರು ಹಾಗೂ ಪಬ್ಲಿಕ್ ವೈಬ್ ನ ವರದಿಗಾರ ಹಾಗೂ ಬಣಕಾರ್ ಮುಗಪ್ಪ ಹೆಗ್ಡಾಳ್ ವಿಶ್ವ ದರ್ಶನ ದಿನಪತ್ರಿಕೆ ವರದಿಗಾರರು ಇವರ ಸಮ್ಮುಖದಲ್ಲಿ ಮನವಿ ಪತ್ರವನ್ನು ಕೊಡಲಾಯಿತು.

ಈ ಸಂದರ್ಭದಲ್ಲಿ ಜಿಟಿ ರಾಜಶೇಖರ್ ಬಿಸಿಲು ನಾಡು ಪತ್ರಿಕೆಯ ಸಂಪಾದಕ ವರದಿಗಾರರು ಈ ಹಿಂದೆಲ್ಲಾ ಅನೇಕ ಬಾರಿ ಶಾಸಕರುಗಳಿಗೆ ಪತ್ರಿಕಾ ವರದಿಗಾರರಿಗೆ ನಿವೇಶನ ಹಾಗೂ ಪತ್ರಿಕಾ ಭವನವನ್ನು ನಿರ್ಮಿಸಿ ಕೊಡುವಂತೆ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಈ ಬಾರಿಯಾದರೂ ತಮ್ಮಿಂದ ನಿರಂತರವಾಗಿ ಪತ್ರಿಕಾ ರಂಗದಲ್ಲಿ ತಾಲೂಕಿನಲ್ಲಿ ಎಲ್ಲಾ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವಂತಹ ವರದಿಗಾರರು ಸರ್ಕಾರದ ಸೌಲಭ್ಯ ನಿವೇಶನ ಹಾಗೂ ಪತ್ರಿಕ ಭವನವನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕದ ಪತ್ರಕರ್ತ ಸಂಘದ ಎಲ್ಲಾ ಸದಸ್ಯರಿಗೆ ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ನಾವು ಶಾಸಕರಾಗಿ ಗೆಲ್ಲುವುದಕ್ಕೆ ಯೂಟ್ಯೂಬ್ ಚಾನಲ್ ಗಳು ಹಾಗೂ ಸಣ್ಣ ಸಣ್ಣ ಲೋಕಲ್ ಪತ್ರಿಕೆಗಳು ಉತ್ತಮವಾದ ಸುದ್ದಿಗಳನ್ನು ಮಾಡಿದರು ಎಂದು ಪತ್ರಕರ್ತರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಾಗೂ ಸರ್ಕಾರದ ಮೂಲಕ ಸೌಲಭ್ಯಗಳು ಒದಗಿಸುವುದಾದರೆ ಖಂಡಿತವಾಗಿ ಮಾಡುವ ಭರವಸೆ ತಿಳಿಸಿದರು, ಈ ಸಂದರ್ಭದಲ್ಲಿ ಕರ್ನಾಟಕದ ಪತ್ರಕರ್ತ ಸಂಘದವರು ಶಾಸಕರಿಗೂ ಹಾಗೂ ಮಾನ್ಯ ತಹಶೀಲ್ದಾರ್ ರಾ ದ ಟಿ.ಜಗದೀಶ್ ರವರೆಗೂ ಕೂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನಿ. ಕೂಡ್ಲಿಗಿ