ಪಾದಾಚಾರಿ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ಸ್ ಹರಿದು – ಸ್ಥಳದಲ್ಲಿ ಓರ್ವ ವ್ಯಕ್ತಿ ಸಾವು.
ಹುನಗುಂದ ನವೆಂಬರ್.18

ಪಾದಚಾರಿಯ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದು ಸ್ಥಳದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿ ೫೦ ರ ರಾಮವಾಡಗಿ ಕ್ರಾಸ್ ಬಳಿ ನಡೆದಿದೆ.ಹುನಗುಂದ ತಾಲೂಕಿನ ರಾಮವಾಡಗಿ ಗ್ರಾಮದ ನಿಂಗಪ್ಪ ಶರಣಪ್ಪ ನಿಡಶೇಸಿ (೫೬) ಅಪಘಾತದಲ್ಲಿ ಸಾವನ್ನಪ್ಪಿದ ದುದೈರ್ವಿಯೆಂದು ಗುರುತಿಸಲಾಗಿದೆ.ಘಟನೆಯ ವಿವರ-ಪಾದಚಾರಿ ನಿಂಗಪ್ಪ ಶರಣಪ್ಪ ನಿಡಶೇಸಿ ರಾಮವಾಡಗಿ ಕ್ರಾಸ್‌ನಿಂದ ನಡೆದು ಕೊಂಡು ಹುನಗುಂದ ಪಟ್ಟಣಕ್ಕೆ ಬರುವ ವೇಳೆಯಲ್ಲಿ ತಾಳಿಕೋಟಿ ಡೀಪೋದ ಕೆಎಸ್‌ಆರ್‌ಟಿ ಬಸ್ ಮುದ್ದೇಬಿಹಾಳದಿಂದ ಹುನಗುಂದ ಕಡೆಗೆ ಅತೀ ವೇಗವಾಗಿ ಚಾಲಕನ ನಿರ್ಲಕ್ಷ್ಯತನ ದಿಂದ ಹೊರಳಿಸಿದ್ದರಿಂದ ನಡೆದು ಕೊಂಡು ಹೊರಟಿದ್ದ ಪಾದಾಚಾರಿಯ ಎಡ ಭಾಗಕ್ಕೆ ಬಸ್ ಡಿಕ್ಕಿ ಹೊಡೆದಾಗ ನೆಲಕ್ಕೆ ಬಿದ್ದನು.ಆಗ ಅವನ ಮೇಲೆ ಬಸ್ ಹಾಯ್ದು ಸೊಂಟಕ್ಕೆ ಬಲವಾದ ಪಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.ಸ್ಥಳಕ್ಕೆ ಹುನಗುಂದ ಡಿಎಸ್‌ಪಿ ವಿಶ್ವನಾಥ ಕುಲಕರ್ಣಿ,ಸಿಪಿಐ ಎಸ್.ಎ.ಸವದಿ,ಪಿಎಸ್‌ಐ ಚನ್ನಯ್ಯ ದೇವೂರ ಭೇಟಿ ಸ್ಥಳ ಪರಶೀಲಿಸಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ