ಇಂದು ಜಾಲಕಮಲದಿನ್ನಿ ಶ್ರೀ ಮಾರುತೇಶ್ವರ ಮತ್ತು ಶ್ರೀ ಚೆನ್ನಬಸವೇಶ್ವರ ರಥೋತ್ಸವ.
ಹುನಗುಂದ ಏಪ್ರಿಲ್.23





ತಾಲೂಕಿನ ಜಾಲಕಮಲದಿನ್ನಿ ಗ್ರಾಮದ ಶ್ರೀ ಮಾರುತೇಶ್ವರ ಮತ್ತು ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಏ.23 ರಂದು ಮಂಗಳವಾರ ಸಾಯಂಕಾಲ 5.30 ಗಂಟೆಗೆ ಮಹಾರಥೋತ್ಸ ಜರುಗಲಿದೆ.ಜಾತ್ರಾ ಮಹೋತ್ಸವ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಪಶ್ವಕಂಥಿ ಹಿರೇಮಠ ಕುಷ್ಟಗಿಯ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಇವರ ನೇತೃತ್ವದಲ್ಲಿ ಏ.23 ರಂದು ಬೆಳಗ್ಗೆ ಮಾರುತೇಶ್ವರ ಮೂರ್ತಿಗೆ ಹೋಮ ಹವನ ಮತ್ತು ಧಾರ್ಮಿಕ ಕೈಂಕರ್ಯಗಳು ಜರುಗಲಿದೆ. ನಂತರ ಶ್ರೀ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳ ಭಾವ ಚಿತ್ರವನ್ನು ಮುತ್ತೈದೆಯರು ಕುಂಭಮೇಳ,ಕಳಸ ಅನೇಕ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣೆಗೆಯನ್ನು ನಡೆಯಲಿದೆ. ಮಧ್ಯಾಹ್ನ ಮಹಾಪ್ರಸಾದ ಜರಗುವುದು.ನಂತರ ವೇ.ಮೂ.ಶಾಂತವೀರಯ್ಯ ಶಾಸ್ತ್ರಿಗಳಿಂದ ಚನ್ನಬಸವೇಶ್ವರರ ಪ್ರವಚನ ಕಾರ್ಯಕ್ರಮ ಜರಗುಲಿದೆ. ಸಾಯಂಕಾಲ ಸಕಲ ಶರಣ,ಸಂತ,ಮಠಾಧೀಶರ ಸಮ್ಮುಖದಲ್ಲಿ ಸಂಜೆ 5.30 ಗಂಟೆಗೆ ರಥೋತ್ಸವ ಜರಗುಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.