ನೇಹಾ ಹೀರೆಮಠರವರ ಹತ್ಯೆಯ ಆರೋಪಿ ಫಯಾಜ್ ಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆ.
ಹುನಗುಂದ ಏಪ್ರಿಲ್.23

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಬಿವಿಪಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಮುಖಂಡರು ಸೋಮವಾರ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸದಸ್ಯ ಅರುಣೋದಯ ದುದ್ಗಿ ಮಾತನಾಡಿ,ಹಾಡುಹಗಲೇ ಕಾಲೇಜು ಮೈದಾನದಲ್ಲಿ ಓರ್ವ ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆರೋಪಿ ಫಯಾಜ್‌ನಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಮುಂದಿನ ದಿನಮಾನದಲ್ಲಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸದ್ದಂತೆ ಕಠಿಣ ಕಾನೂನು ಜಾರಿಗೆ ತರಬೇಕು, ಇಂತಹ ಕೃತ್ಯದಲ್ಲಿ ತೊಡಗುವವರನ್ನು ಎನ್‌ಕೌಂಟರ್ ಮಾಡಬೇಕು. ಸಧ್ಯ ಈ ಘಟನೆ ಇಡೀ ಮಹಿಳಾ ಕುಲಕ್ಕೆ ಮತ್ತು ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ ಎಂದರು. ಎಪಿವಿಬಿ ಸಂಘಟನೆಯ ಅಧ್ಯಕ್ಷ ನವೀನ ಪಾಟೀಲ ಮಾತನಾಡಿ ರಾಜ್ಯದಲ್ಲಿ ವಿದ್ಯಾರ್ಥಿಗಳು ಹತ್ಯೆ ಘಟನೆಗಳು ಪದೇ ಪದೇ ನಡೆಯುತ್ತಿದ್ದು ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜನನ್ನು ವಿಚಾರಣೆ ನಡೆಸದೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಿ ಮುಂದೇ ಇಂತಹ ಯಾವುದೇ ಘಟನೆ ರಾಜ್ಯದಲ್ಲಿ ನಡೆಯದಂತೆ ಸರ್ಕಾರ ಅವರಿಗೆ ಕಠಿಣ ಕಾನೂನನ್ನು ಜಾರಿ ಗೊಳಿಸಬೇಕು. ಇಲ್ಲವಾದರೆ ನಮ್ಮ ಸಂಘಟನೆಯಿಂದ ಮುಂದಿನ ದಿನಗಲ್ಲಿ ಉಗ್ರವಾದ ಹೋರಾಟವನ್ನು ನಡೆಸಲಾಗುತ್ತದೆ ಎಂದು ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದರು.ಈ ಸಂದರ್ಭದಲ್ಲಿ ಡಾ.ಮಹಾಂತೇಶ ಕಡಪಟ್ಟಿ, ವೀರಣ್ಣ ಬಳೂಟಗಿ, ಮುಖಂಡರಾದ ಮಹಾತೇಶ ಚಿತ್ತವಾಡಗಿ, ರಾಜು ನಾಡಗೌಡ, ಮಲ್ಲು ಚೂರಿ, ಮಂಜು ಕಿರಸೂರ, ಮಹಾಂತೇಶ ಭಾವಿಕಟ್ಟಿ, ರಾವುಲ್ ಮೈತ್ರಿ, ವೀಣಾ ಕಿರಗಿ, ಅಭಿಲಾಷ ಮರಕುಂಬಿ, ರಂಜಿತಾ ತೆನಹಳ್ಳಿ, ಪಿ.ಎ.ರಂಬರಗಿ, ವನಿತಾ ಪಟ್ಟಣಶೆಟ್ಟಿ,ಶಂಕ್ರಪ್ಪ ದುತ್ತರಗಿ, ಡಾ.ಅಂಕದ,ರಾಜೇಶ್ವರ ಪಾಟೀಲ, ಸುಧಾ ಕೊಂತಿಕಲ್ಲ, ಶರಣಮ್ಮ ನಾಡಗೌಡರ,ಎಸ್.ಎಸ್.ಕಡಪಟ್ಟಿ ಡಿ ಪಾರ್ಮಸಿ ಮತ್ತು ಗೌರಮ್ಮ ಚರಂತಿಮಠ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.