ಲೋಕ ಸಮರ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಅಕ್ರಮ ಮದ್ಯ ಮಾರಾಟ ಮಾತ್ರ ಜೀವಂತ – ಮಲ್ಲಿಕಾರ್ಜುನ.ಎಂ.ಬಂಡರಲ್ಲ.
ಹುನಗುಂದ ಏಪ್ರಿಲ್.23
ಲೋಕ ಸಮರದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ಒಂದು ತಿಂಗಳು ಗತಿಸಿದರೂ ಕೂಡಾ ಹುನಗುಂದ ಪಟ್ಟಣದ ಪ್ರಮುಖ ಬಾರ್‌ಗಳಿಂದ ಬಾಕ್ಸ್ಗಟ್ಟಲೇ ಅಕ್ರಮ ಮದ್ಯ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಸರಬರಾಜು ಆಗುತ್ತಿದ್ದರೂ ಇದಕ್ಕೆ ಸಂಬಂಧಪಟ್ಟ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಕ್ರಮ ಸಾರಾಯಿ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.ಹೌದು ಲೋಕಸಭೆ ಚುನಾವಣಿ ನೀತಿ ಸಂಹಿತೆ ಆರಂಭವಾಗುತ್ತಿದ್ದಂತೆ ಹುನಗುಂದ ಮತಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಪಟ್ಟಣದ ಬಾರ್ ಮತ್ತು ಡಾಬಾಗಳ ಮಾಲಕರ ಕರೆದು ಗುಪ್ತವಾಗಿ ಮೀಟಿಂಗ್ ನಡೆಸಿ ಬಾರ್‌ನವರಿಗೆ ನೀವು ಇನ್ಮೇಲೆ ಬಾಕ್ಸ್ಗಟ್ಟಲೇ ಯಾರಿಗಾದರೂ ಸರಾಯಿ ಕೊಟ್ಟರೇ ಅಂತವರ ಹೆಸರು ಮತ್ತು ಅವರ ವಿಳಾಸವನ್ನು ತಿಳಿಸಬೇಕು ಮತ್ತು ಡಾಬಾಗಳಲ್ಲಿ ಇನ್ನು ಮುಂದೆ ಸಾರಾಯಿ ಮಾರಾಟ ಮಾಡುವಂತಿಲ್ಲವೆಂದು ಖಡಕ್ ವಾರ್ನಿಂಗ್ ನೀಡಿದ್ದರೂ ಕೂಡಾ ಅವರ ಎಚ್ಚರಿಕೆಗೆ ಕ್ಯಾರೇ ಎನ್ನದೇ ಅಲ್ಲಿಂದ ಇಲ್ಲಿವರಗೂ ಪಟ್ಟಣದ ಪ್ರಮುಖ ಬಾರ್‌ಗಳಿಂದ ಬಾಕ್ಸ್ಗಟ್ಟಲೆ ಅಕ್ರಮ ಸರಾಯಿ ಮಾರಾಟಗಾರರು ನಿತ್ಯ ಬೈಕ್‌ಗಳಲ್ಲಿ ಹಾಡುಹಗಲೇ ತಾಲೂಕಿನ ಎಲ್ಲ ಹಳ್ಳಿಗಳಿಗೂ ಮದ್ಯ ತಗೆದುಕೊಂಡು ಹೋಗುತ್ತಿದ್ದರೂ ಅಕ್ರಮ ತಡೆಯಬೇಕಾದ ಚುನಾವಣಾಧಿಕಾರಿ ಅಕ್ರಮ ಸರಾಯಿ ತಡೆಯುವಲ್ಲಿ ಯಾಕೆ ನಿಷ್ಕಾಳಜಿ ವಹಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಚುನಾವಣಾಧಿಕಾರಿ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಉತ್ತರಿಸ ಬೇಕಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಕ್ರಮ ಸರಾಯಿ ಮಾರಾಟ ನಿಂತಿಲ್ಲಾ ಎನ್ನುವುದ್ದಕ್ಕೆ ಪ್ರತಿಯೊಂದು ಹಳ್ಳಿಗಳ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಕುಡಿದು ಬಿಸಾಕಿರುವ ರಾಶಿ ರಾಶಿ ಸರಾಯಿ ಪ್ಯಾಕೇಟ್ ಮತ್ತು ನೀರಿನ ಕಪ್‌ಗಳೇ ತಾಜಾ ಉದಾಹರಣೆ ಇಲ್ಲಿದೆ.ಅದರಲ್ಲು ತಾಲೂಕಿನ ಇದ್ದಲಗಿ,ಧನ್ನೂರ,ಕೂಡಲ ಸಂಗಮ ಕ್ರಾಸ್,ಬಿಸಲದಿನ್ನಿ ಸೇರಿದ್ದಂತೆ ತಾಲೂಕಿನ ಅನೇಕ ಗ್ರಾಮಗಳು ಅಕ್ರಮ ಮದ್ಯ ಮಾರಾಟದ ಹಾಟ್ಸ್ಪಾರ್ಟ್ ಆಗಿವೆ. ಬೈಕ್‌ನಲ್ಲಿ ಹಾಡು ಹಗಲೇ ಸರಾಯಿ ತಗೆದುಕೊಂಡು ಹಳ್ಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೇ ಎಂದು ಸಂಬಂಧಪಟ್ಟ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಕ್ರಮ ತಗೆದು ಕೊಳ್ಳುತ್ತಿಲ್ಲ. ಗ್ರಾಮದಲ್ಲಿಯೇ ಸರಾಯಿ ಸಿಗುತ್ತಿರುವುದರಿಂದ ಬೆಳಂ ಬೆಳಗ್ಗೆ ನಮ್ಮ ಗಂಡರು ಕೆಲಸಕ್ಕೆ ಹೋಗದೇ ಸರಾಯಿ ಕುಡಿಯುತ್ತಾ ಕುಳಿತು ಕೊಳ್ಳೋದು ಮನೆಗೆ ಬಂದು ಹೆಂಡರ ಮಕ್ಕಳ ಜೊತೆ ಜಗಳ ತೆಗೆದು ಒಡಿಹೊಡೆ ಮಾಡಿತ್ತಾರೆ.ಸರಾಯಿ ಸಹವಾಸ ಹೆಂಡರಮಕ್ಕಳ ಉಪವಾಸ ಎಂಬಂತಾಗಿದೆ ನಮ್ಮ ಸಂಸಾರ ಎಂದು ನಿತ್ಯ ಮಹಿಳೆಯರು ಕಣ್ಣೀರು ಹಾಕುವಂತಾಗಿದೆ. ಇನ್ನು ನಾಮಕಾವಸ್ತೆ ಸರಾಯಿ ಮಾರುವರನ್ನು ಹಿಡಿದು ಕೊಂಡು ಹೋಗುದು ಮರಳಿ ಬಿಟ್ಟು ಬಿಡೋದು ಮಾಡುತ್ತಿರುವುದರಿಂದಲೇ ಅವರಿಗೆ ಇಲಾಖೆಯ ಅಧಿಕಾರಿಗಳ ಭಯವಿಲ್ಲದ್ದಂತಾಗಿದೆ ಎನ್ನುತ್ತಿದ್ದಾರೆ.ಒಟ್ಟಾರೆಯಾಗಿ ಈಗಲಾದರೂ ಎಚ್ಚೆತ್ತುಕೊಂಡು ಚುನಾವಣಾಧಿಕಾರಿ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಹಿಳೆಯರ ಗೋಳನ್ನು ಕೇಳಿಯಾದರೂ ಅಕ್ರಮ ಸರಾಯಿ ತಡೆಯುತ್ತಾರಾ ಎಂಬುವುದ್ದನ್ನು ಕಾಯ್ದು ನೋಡಬೇಕಿದೆ.
“ಬಾಕ್ಸ್ ಸುದ್ದಿ”–
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪಟ್ಟಣದ ಪ್ರಮುಖ ಬಾರ್‌ಗಳಿಂದ ಬಾಕ್ಸ್ಗಟ್ಟಲೇ ಸರಾಯಿಯನ್ನು ತಾಲೂಕಿನ ಅನೇಕ ಹಳ್ಳಿಗಳಿಗೆ ಬೈಕ್‌ನಲ್ಲಿಯೇ ಹಾಡುಹಗಲೇ ಸರಬರಾಜು ಆಗುತ್ತಿದೆ.ಇಂತಹ ಅಕ್ರಮ ಮದ್ಯವನ್ನು ನಿಲ್ಲಿಸುವಲ್ಲಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.ಅಕ್ರಮ ಸರಾಯಿ ಮಾರಾಟದಿಂದ ಪ್ರತಿಯೊಂದು ಹಳ್ಳಿಗಳಲ್ಲಿ ಮಹಿಳೆಯರು ಗೋಳಾಡುತ್ತಿದ್ದು.ತಕ್ಷಣವೇ ಅಕ್ರಮ ಮದ್ಯ ಮಾರಾಟ ನಿಲ್ಲುವಂತಾಗಬೇಕು. ಕಿರಣ ಕಲಾಲ ಹುನಗುಂದ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.