ಸ್ಮಶಾನದಲ್ಲಿ ಶವ ಹೂಳಲು ಅಡ್ಡಿ, ಪಿಡಿಓ ದೂರು, ಅಡ್ಡಿ ಪಡಿಸಿದ ವ್ಯಕ್ತಿ ಈಗ – ಪೊಲೀಸ್ ರ ವಶ.

ಕೂಡ್ಲಿಗಿ ಏಪ್ರಿಲ್.23

ಕೂಡ್ಲಿಗಿ ಏಪ್ರಿಲ್.23

ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ತಂದು ಅಂತ್ಯೆಕ್ರಿಯೆ ಮಾಡಲು ಹೋದಾಗ ಈ ಭೂಮಿ ನನ್ನದು ಎಂದು ವ್ಯಕ್ತಿಯೊರ್ವ ಅಂತ್ಯೆ ಕ್ರಿಯೆಗೆ ಅಡ್ಡಿ ಪಡಿಸಿದ್ದರಿಂದ ಕೆಲ ಗಂಟೆ ಹಾಗೆಯೇ ಶವ ಇಟ್ಟುಕೊಂಡು ವಾಗ್ವಾದ ನಡೆದ ಘಟನೆ ಜರುಗಿದ್ದು. ನಂತರ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಪೋಲೀಸರ ಆಗಮನ ದಿಂದ ಅಂತ್ಯೆ ಸಂಸ್ಕಾರಕ್ಕೆ ಅಂತ್ಯ ಕಂಡ ಅಪರೂಪದ ಘಟನೆ ಶನಿವಾರ ತಾಲೂಕಿನ ಚಿಕ್ಕಜೋಗಿಹಳ್ಳಿ ಹೊರವಲಯದ ಸ್ಮಶಾನ ಜಾಗದಲ್ಲಿ ಜರುಗಿದೆ.ತಾಲೂಕಿನ ಮಾಕನಡಕು ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿ ಸ.ನಂ 225 ರ ಪೈಕಿ 4 ಎಕರೆ ಭೂಮಿಯನ್ನು ನಾಲ್ಕೈದು ವರ್ಷಗಳ ಹಿಂದೆ ಸರ್ಕಾರಿ ಭೂಮಿಯನ್ನು ಸ್ಮಶಾನವೆಂದು ಘೋಷಣೆ ಮಾಡಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಈ ಭೂಮಿಯಲ್ಲಿ ಮಾಕನಡಕು ಗ್ರಾಮದ ರೈತನೊಬ್ಬ ತಾನು ಸಾಗುವಾಳಿ ಮಾಡುತ್ತೇನೆಂದು ಹೇಳುತ್ತಾ, ಈ ಸ್ಮಶಾನದಲ್ಲಿ ಶವ ಹೂಳಲು ಅಡ್ಡಿ ಪಡಿಸುತ್ತಾ ಬಂದಿದ್ದಾನೆ. ಅದೇ ರೀತಿ ಶುಕ್ರವಾರ ರಾತ್ರಿ ಚಿಕ್ಕಜೋಗಿಹಳ್ಳಿ ಗ್ರಾಮದ ದಾಸರ ಸಮುದಾಯಕ್ಕೆ ಸೇರಿದ ದಲಿತ ಕುಟುಂಬದ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದು ಶನಿವಾರ ಅಂತ್ಯೆಕ್ರಿಯೆ ಮಾಡಲು ಶವ ತೆಗೆದುಕೊಂಡು ಸ್ಮಶಾನಕ್ಕೆ ಹೋದಾಗ ಅಂತ್ಯೆಕ್ರಿಯೆ ಮಾಡಲು ಅಡ್ಡಿ ಪಡಿಸಿದ್ದಾನೆ. ಮೃತನ ಕುಟುಂಬದವರು ಗ್ರಾಪಂ ಪಿಡಿಒ ಮತ್ತು ಕೂಡ್ಲಿಗಿ ತಹಸೀಲ್ದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ಮಶಾನ ಭೂಮಿ ಸಾರ್ವಜನಿಕರಿಗೆ ಸೇರಿದ್ದು ಅಂತ್ಯೆಕ್ರಿಯೆ ಮಾಡಿ ಕೊಳ್ಳುವಂತೆ ಸೂಚಿಸಿದ್ದಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಗ್ರಾಪಂ ಪಿಡಿಒ ಕಾನಾ ಹೊಸಹಳ್ಳಿ ಪೊಲೀಸರ ಗಮನಕ್ಕೆ ತಂದಿದ್ದು ನಂತರ ಸ್ಥಳಕ್ಕೆ ಧಾವಿಸಿದ ಹೊಸಹಳ್ಳಿ ಪಿಎಸೈ ಎರಿಯಪ್ಪ ಅಂಗಡಿ ಹಾಗು ಸಿಬ್ಬಂದಿ ಅಗಮಿಸಿ ಅಡ್ಡಿ ಪಡಿಸಿದ ವ್ಯಕ್ತಿಗೆ ತಿಳಿ ಹೇಳಲು ಮುಂದಾಗಿದ್ದಾರೆ ಆದರು ಅದಕ್ಕೆ ಸ್ಪಂದನೆ ನೀಡದ ವ್ಯಕ್ತಿ ಮೇಲೆ ಮಾಕನಡಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿದ ದೂರಿನಂತೆ ಅಡ್ಡಿ ಪಡಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಮೃತನ ಕುಟುಂಬಸ್ಥರಿಗೆ ಅಂತ್ಯೆಕ್ರಿಯೆ ನೆರವೇರಿಸಲು ಅನುವು ಮಾಡಿಕೊಡುವ ಮೂಲಕ ಸುಖ್ಯಾಂತ್ಯಾ ಗೊಳಿಸಿದ್ದಾರೆ.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button