ನೇಹಾ ಹೀರೆಮಠರವರ ಬರ್ಬರವಾಗಿ ಹತ್ಯೆ ಮಾಡಿರುವ ಫಯಾಜ್ ಗೆ ಗಲ್ಲು ಶಿಕ್ಷೆ ವಿಧಿಸುವಂತೆ – ಕರ್ನಾಟಕ ರೈತ ಸಂಘದಿಂದ ಆಗ್ರಹ.
ಹುನಗುಂದ ಏಪ್ರಿಲ್.23
ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ನೇಹಾ ಹಿರೇಮಠ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ ಹತ್ಯೆಗೈದ ದುಷ್ಕರ್ಮಿ ಫಯಾಜ್‌ನಿಗೆ ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ಸೋಮವಾರ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಗ್ರೇಡ್.೨ ತಹಶೀಲ್ದಾರ ಮಹೇಶ ಸಂದಿಗವಾಡ ಅವರಿಗೆ ಸಲ್ಲಿಸಿದರು.ಈ ವೇಳೆ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಹೂಗಾರ ಮಾತನಾಡಿ ಹುಬ್ಬಳ್ಳಿಯಲ್ಲಿ ಕಾಲೇಜು ಒಂದರಲ್ಲಿ ಹಾಡು ಹಗಲೇ ನೇಹಾ ಹಿರೇಮಠ ವಿದ್ಯಾರ್ಥಿಯನ್ನು ೯ ಸಲ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆಗೈದ ಮುಸ್ಲಿಂ ಯುವಕ ಫಯಾಜ್ ಮೇಲೆ ಸರ್ಕಾರ ಕಠಿಣ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಲಾಗುವುದು. ಇನ್ನು ನ್ಯಾಯಾಲಯಗಳು ಸಾರ್ವಜನಿಕರ ದೇವಸ್ಥಾನವಿದ್ದಂತೆ ಅಂತಹ ನ್ಯಾಯಾಲಯಗಳಲ್ಲಿ ಬೆಂಚು, ಕುರ್ಚಿ, ಕುಡಿಯುವ ನೀರು, ಶೌಚಾಲಯ ಸೇರಿದ್ದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿದ್ದು. ಸರ್ಕಾರ ಇಲ್ಲಿವರೆಗೂ ಸೌಲಭ್ಯಗಳನ್ನು ನೀಗಿಸುತ್ತಿಲ್ಲ ಎಂದರೇ ಮುಖ್ಯಮಂತ್ರಿ ಮತ್ತು ಸಚಿವರು ಯಾಕೆ ಇರಬೇಕು ಎಂದು ಪ್ರಶ್ನಿಸಿದರು.ತಕ್ಷಣವೇ ಸರ್ಕಾರ ನ್ಯಾಯಾಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು. ಅದರ ಜೊತೆಗೆ ಮಳೆಯಿಲ್ಲದೇ ಹುನಗುಂದ ತಾಲೂಕು ಸಂಪೂರ್ಣ ಬರಗಾಲ ಬಿದಿದ್ದು. ಅಲ್ಪ ಸ್ವಲ್ಪ ಬೆಳೆದ ಬೆಳೆಗೆ ಇಲ್ಲಿವರಗೂ ಒಂದು ರೂಪಾಯಿ ಸರ್ಕಾರ ದಿಂದ ಪರಹಾರ ಸಿಕ್ಕಿಲ್ಲ. ಬರಗಾಲದಿಂದ ಜನರಿಗೆ ಕುಡಿಯುವ ನೀರಿಲ್ಲ ಜಾನುವಾರಗಳಿಗೆ ತಿನ್ನಲು ಮೇವು ಇಲ್ಲ ಸರ್ಕಾರ ಬರಗಾಲ ಪ್ರದೇಶಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಈ ವೇಳೆ ಜಿಲ್ಲಾ ಕಾರ್ಯದರ್ಶಿ ಸುರೇಶ ಕುಂಬಾರ,ಸದಸ್ಯರಾದ ಬಸವರಾಜ ಮುರನಾಳ,ಭೀಮಣ್ಣ ದಾದ್ಮಿ,ಶಿವಣ್ಣ ಕುರಬರ,ಸಿದ್ರಾಮಪ್ಪ ಲೋಕಾಪೂರ,ಶಿವಪುತ್ರಪ್ಪ ಮೇಟಿ,ಮಲ್ಲಪ್ಪ ಹಗೇದಾಳ,ಭೀಮಪ್ಪ ಮಾದರ,ಬಸವರಾಜ ಕುಂಬಾರ,ಹನಮಂತ ವಾಲೀಕಾರ,ಸೋಮಶೇಖರ ಗಣಾಚಾರಿ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.