ಕೇಂದ್ರ ಸರ್ಕಾರದ ಹತ್ತು ವರ್ಷ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ – ಶಾಸಕ ಕಾಶಪ್ಪನವರ.

ಹುನಗುಂದ ಏಪ್ರಿಲ್.24

ಕಳೆದ ಹತ್ತು ವರ್ಷದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಸರ್ಕಾರ ಸ್ವಾಮ್ಯದಲ್ಲಿರುವ ರೈಲು,ಬ್ಯಾಂಕಿಂಗ್, ವಿಮಾನಯಾನ ಮತ್ತು ಇಂಧನ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನು ಆರ್ಥಿಕ ಅಧಃಪತನಕ್ಕೆ ಹೋಗುವಂತೆ ಮಾಡಿದ್ದಾರೆ. ಇನ್ನೊಂದು ಸಾರಿ ಬಿಜೆಪಿಯನ್ನು ಆಯ್ಕೆ ಮಾಡಿದರೇ ನಮ್ಮನ್ನು ನಿಮ್ಮನ್ನೆಲ್ಲಾ ಮಾರಾಟ ಮಾಡತ್ತಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಮತದಾರರಿಗೆ ಬಿಜೆಪಿ ದುರಾಡಳಿತ ಬಗ್ಗೆ ತಿಳಿಸಿದರು.ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಸಂಯುಕ್ತ ಪಾಟೀಲ ಪ್ರಚಾರಸಭೆ ಭಾಗವಹಿಸಿ ಅವರು ಮಾತನಾಡಿದ ಅವರು,ನಾಲ್ಕು ಬಾರಿ ಸಂಸದ ಪಿ.ಸಿ. ಗದ್ದಿಗೌಡರ ಜಿಲ್ಲೆಗೆ ಅವರ ಕೊಟ್ಟ ಕೊಡುಗೆ ಏನು? ದಿ.ಮಾಜಿ ಸಂಸದ ಸಿದ್ದು ನ್ಯಾಮಗೌಡ್ರ ಆಗೀನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಕುಡುಚಿಯಿಂದ ರಾಯಚೂರ ರೈಲು ಮಾರ್ಗಕ್ಕೆ ಅಡಿಗಲ್ಲು ಹಾಕಿದ್ದರೂ ಆದರೇ ಮೋದಿ ಹೆಸರಿನ ಮೇಲೆ ಅಧಿಕಾರ ಬಂದ ಪಿ.ಸಿ.ಗದ್ದಿಗೌಡ್ರ ೨೦ ವರ್ಷದ ಅವಧಿಯಲ್ಲಿ ಆ ರೈಲು ಮಾರ್ಗ ೩೬ ಕಿಲೋ ಮೀಟರ್ ಕೆಲಸ ಮಾಡಲು ಆಗಿಲ್ಲ.ಯಾವುದೇ ಅಭಿವೃದ್ದಿ ಮಾಡದೇ ಮತ್ತೇ ಜನರ ಬಳಿ ಬಂದು ನನಗೆ ಮತ ಹಾಕಿ ಅಂತ ಯಾರನ್ನು ಕೇಳೋದಿಲ್ಲ ಇನ್ನೊಂದು ಸಾರಿ ಮೋದಿಗೆ ಮತ ಹಾಕಿ.ಮೋದಿಗೆ ಮತ ಹಾಕಿ ಅಂತ ಕೇಳತ್ತಾರೆ. ಯಾಕಂದರೇ ಅವರ ಮಾಡಿದ ಯಾವುದೇ ಅಭಿವೃದ್ದಿ ಕಾರ್ಯಗಳಿಲ್ಲ. ಎಂದು ಬಿಜೆಪಿ ಮುಖಂಡರ ಚೀಡಿಸಿದರು. ಕೆಲಸ ಮಾಡದ ಸಂಸದರು ಜಿಲ್ಲೆಗೆ ಅವಶ್ಯಕತೆಯಿಲ್ಲ. ಅಭಿವೃದ್ಧಿ ಕನಸ್ಸು ಹೊತ್ತು ಬಂದಿರುವ ಸಹೋದರಿ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದರು.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಇದು ನನ್ನ (ಸಂಯುಕ್ತಾ) ಚುನವಾಣೆ ಅಲ್ಲ. ರಾಜ್ಯದ ಸ್ವಾಭಿಮಾನಿ ರೈತರ, ಮಹಿಳೆಯರ ಚುನವಾಣೆ ಆಗಿದ್ದು, ನನಗೆ ಒಂದು ಅವಕಾಶ ಕೊಡಿ.ಜಿಲ್ಲೆಗೆ ರೈಲು ಮಾರ್ಗ, ಯುಕೆಪಿ ಯೋಜನೆ ಅನುಷ್ಠಾನ, ಕಳಸ ಬಂಡೂರಿ ಯೋಜನೆ, ನಿರುದ್ಯೋಗ ಯುವಕರಿಗೆ ಉದ್ಯೋಗ ಸೇರಿದ್ದಂತೆ ಹತ್ತಾರೂ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ನಿಮ್ಮ ಋಣ ತೀರಿಸುವೆ ಎಂದರು.ವಿಧಾನ ಸಭಾ ಉಸ್ತುವಾರಿ ನಿಸಾರ್ ಅಹ್ಮದ್ ಖಾಜಿ, ಮುಖಂಡರಾದ ರವೀಂದ್ರ ಕಲ್ಬುರ್ಗಿ, ವಿಜಯ ಗದ್ದನಕೇರಿ, ಜಬ್ಬಾರ ಕಲ್ಬುರ್ಗಿ, ಚೇತನ ಮುಕ್ಕಣ್ಣವರ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಂಗಾಧರ ದೊಡ್ಡಮನಿ,ಶೇಖರಪ್ಪ ಬಾದವಾಡಗಿ,ದೀಪಾ ಸುಂಕದ,ಗAಗಮ್ಮ ಎಮ್ಮಿ,ಮಹಾಂತೇಶ ಅವಾರಿ,ರವಿ ಹುಚನೂರ,ನೀಲಪ್ಪ ತಪೇಲಿ,ಸಂಗಪ್ಪ ಹೂಲಗೇರಿ,ಶರಣು ಬೆಲ್ಲದ,ಮುತ್ತಣ್ಣ ಕಲಗೋಡಿ,ಅಮರೇಶ ನಾಗೂರ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗ ಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button