ಮಾದಿಗ ಸಮಾಜಕ್ಕೆ ಹೆಚ್ಚಿನ ಪ್ರಾಶಸ್ತೆ ಕೊಟ್ಟಿದ್ದು ಬಿ ಜೆ ಪಿ, ಬಿ.ವೈ.ವಿಜೇಯೇಂದ್ರ.
ಬಾಗಲಕೋಟೆ ಏಪ್ರಿಲ್.25

ಮಾದಿಗ ಸಮುದಾಯಕ್ಕೆ ಬಂದ ಅವಕಾಶಗಳನ್ನು ಸ್ವಾಭಿಮಾನ ಸಮುದಾಯದ ಜನರು ಬಳಸಿ ಕೊಳ್ಳಲು ಒಗ್ಗಟ್ಟಾಗಬೇಕು ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ 15\ಇದ್ದಾಗ ದೇಶದ ಜನಸಂಖ್ಯೆ 30 ಕೋಟಿ ಇತ್ತು ಸದ್ಯದ ಬೆಳವಣಿಗೆಯಲ್ಲಿ ಜನಸಂಖ್ಯೆ 140ಕೋಟಿಗೂ ಅಧಿಕ ಇದ್ದು ಮೀಸಲಾತಿ ಪ್ರಮಾಣ ಏರಿಕೆಯಾಗಿಲ್ಲ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು ಮೈಸೂರು ನಗರದಲ್ಲಿ ಬಿ.ಜೆ.ಪಿ ಏರ್ಪಡಿಸಿದ್ದ ಸ್ವಾಭಿಮಾನಿ ಮಾದಿಗ ಸಮುದಾಯದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಮೀಸಲಾತಿ ಹೆಚ್ಚಾದಲ್ಲಿ ನಮ್ಮ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಮೆಡಿಕಲ್, ಎಂಜಿನಿಯರ್ ಸೇರಿದಂತೆ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಸ್ಥಾನದಲ್ಲಿರಲು ಸಾಧ್ಯವಾಗುತ್ತದೆ, ಬಿ.ಜೆ.ಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜೇಯೇಂದ್ರ ಮಾತನಾಡಿ ಒಳಮೀಸಲಾತಿ ಹೆಚ್ಚಳಕ್ಕೆ ಪ್ರಯತ್ನ ಪಟ್ಟಿದ್ದು ಹಾಗೂ ಮಾದಿಗ ಸಮುದಾಯಕ್ಕೆ ಪ್ರತಿ ಹಂತದಲ್ಲು ಶಕ್ತಿ ತುಂಬುವ ಕೆಲಸ ಬಿ.ಜೆ.ಪಿ ಮಾಡಿದೆ ಸದಾಶಿವ ಆಯೋಗದ ಜಾರಿಗಾಗಿ ಬಸವರಾಜ್ ಬೊಮ್ಮಾಯಿ ಸರ್ಕಾರ ಹೆಚ್ಚಿನ ಶ್ರಮ ಪಟ್ಟಿತ್ತು ಸಮುದಾಯದ ನಾಯಕರುಗಳಾದ ನಾರಾಯಣ ಸ್ವಾಮಿ ಗೋವಿಂದ್ ಕಾರಜೋಳ ಅವರಿಗೆ ಪಕ್ಷ ಉತ್ತಮ ನಾಯಕತ್ವ ನೀಡಿದ್ದು. ಬಿ.ಜೆ.ಪಿ ಗೆ ಭರವಸೆ ನಾಯಕರಾಗಿದ್ದರೆ, ಸದಾಶಿವ ಆಯೋಗದ ವರದಿಯಂತೆ ಈ ವಿಚಾರ ನ್ಯಾಯಾಲಯದಲ್ಲಿದ್ದು ಚುನಾವಣೆ ಬಳಿಕ ಸಮುದಾಯದ ಪರ ತೀರ್ಪು ಬರುವ ವಿಶ್ವಾಸವಿದೆ ಸಮುದಾಯದ ಬೆಳವಣಿಗೆಗೆ ನಾನಾ ರೀತಿಯಿಂದ ಬೆಂಬಲವಾಗಿ ನಿಂತಿರುವ ಬಿ.ಜೆ.ಪಿ ಗೆ ಮತ ನೀಡಿ ಎಂದು ಮನವಿ ಮಾಡಿದರು.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.