ಕೊಟ್ಟೂರು ತಾಲೂಕಾ ಕಾರ್ಯನಿರತ ಪತ್ರಕರ್ತರ ಸದಸ್ಯತ್ವಕ್ಕೆ 12 ಜನ ರಾಜೀನಾಮೆ.
ಕೊಟ್ಟೂರು ಏಪ್ರಿಲ್.25

ದುರುದ್ದೇಶ ಪೂರ್ವಕವಾಗಿ ನಡೆಯುತ್ತಿರುವ ಕೊಟ್ಟೂರು ತಾಲೂಕಾ ಘಟಕದ ಅಧ್ಯಕ್ಷರ ಆಯ್ಕೆ ವಿರೋಧಿಸಿ ಪತ್ರಿಕಾ ಸಂಘದ ಪ್ರಾಥಮಿಕ ಕಾರ್ಯನಿರತ ಪತ್ರಕರ್ತರ ಸದಸ್ಯತ್ವಕ್ಕೆ 12 ಜನ ರಾಜೀನಾಮೆ ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವವನ್ನು ಹೊಂದಿದ್ದು, ಸಕ್ರಿಯವಾಗಿ ಪತ್ರಿಕಾ ವರದಿ ಕಾರ್ಯ ಚಟುವಟಿಕೆಯಲ್ಲಿ ತೊಡಿಗಿಸಿ ಕೊಂಡಿರುತ್ತೇವೆ. ಇತ್ತೀಚೆಗೆ ಸುಳ್ಳು, ಸುದ್ದಿಗಳಿಗೆ ಮತ್ತು ಹಿರಿಯ ಪ್ರಭಾವಿ ಪತ್ರಿಕಾ ವರದಿಗಾರರ ಪ್ರಭಾವಕ್ಕೆ ಒಳಗಾಗಿ ಏಕ ಪಕ್ಷಿಯವಾಗಿ ಮತ್ತು ದುರುದ್ದೇಶ ಪೂರ್ವಕವಾಗಿ ಈ ಹಿಂದೆ ಇದ್ದ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಅವರ ಸದಸ್ಯತ್ವವನ್ನು ತಡೆ ಹಿಡಿಯಲಾಗಿರುತ್ತದೆ. ಆದರೆ ಈ ವಿಷಯವನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಚರ್ಚಿಸ ಬೇಕಾಗಿದ್ದು, ಸಭೆಯ ನಡವಳಿಯ ನಿಯಮಗಳಾಗಿರುತ್ತದೆ.

ಇದ್ಯಾವುದನ್ನು ಮಾಡದೇ ಸಂಘದ ಕೇಲವು ವರದಿಗಾರರು ತಾವೇ ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಂಡು ಈ ದಿನ ದಿನಾಂಕ: 25.04.2024 ರಂದು ನೂತನ ಅಧ್ಯಕ್ಷರ ಆಯ್ಕೆಯ ಸಭೆ ಕರೆದಿರುವುದು ಅಸಂಭದ್ದವಾಗಿರುತ್ತದೆ. ಏಕೆಂದರೆ ಈಗಾಗಲೇ ಹಿಂದಿನ ಅಧ್ಯಕ್ಷರ ಮೇಲಿದ್ದ ಸುಳ್ಳ ಆರೋಪದ ಪ್ರಕರಣಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಧಾರವಾಡ ಇವರಿಂದ ತಡೆಯಾಜ್ಞೆ ಜಾರಿಯಾಗಿರುತ್ತದೆ. ಕೆಲವು ಕ್ರಿಮಿನಲ್ ಹಿನ್ನೆಲೆ ಹೊಂದಿದ ಮತ್ತು ಕೊಟ್ಟೂರು ಹಾಗೂ ವಿಜಯನಗರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾತಿ ಹೊಂದಿರುವ ಹಿರಿಯ ಮತ್ತು ಕಿರಿಯ ಪತ್ರಕರ್ತರು ಇವರ ಪ್ರಕರಣಗಳನ್ನು ಪರಿಗಣೀಸದೇ, ಕೊಟ್ಟೂರು ತಾಲೂಕು ಅಧ್ಯಕ್ಷರ ಬಗ್ಗೆ ದುರುದ್ದೇಶ ದಿಂದ ರಾಜ್ಯಧ್ಯಕ್ಷರಿಗೆ ಸುಳ್ಳು ಆರೋಪ ಮಾಡಿರುವ ಲಿಖಿತ ಹೇಳಿಕೆಯನ್ನು ಪರಿಗಣಿಸದೇ ಸಂಬಂಧಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಥವಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸಂಘದ ಸಭೆ ಕರೆದು ಚರ್ಚಿಸ ನಿರ್ಣಯಿಸಿಸ ಬೇಕಾಗಿರುವುದನ್ನು ಬಿಟ್ಟು ಏಕ-ಏಕಿಯಾಗಿ ಈ ದಿನ ಸಭೆ ಕರೆದು ಅಧ್ಯಕ್ಷರ ಆಯ್ಕೆ ಮಾಡಲು ಹೊರಟಿರುವುದು ಮತ್ತು ದಲಿತ ಪತ್ರಕರ್ತರು ಅಧ್ಯಕ್ಷರ ಸ್ಥಾನದಲ್ಲಿ ಮುಂದುವರೆಯುವುದನ್ನು ಸಹಿಸದೇ ಕೇಲವು ಜಾತಿವಾದಿಗಳ ನಡವಳಿಕೆಯು ನಮ್ಮೆಲ್ಲರಿಗೂ ಅಸಮಾಧಾನವಾಗಿದ್ದು,

ಇದಕ್ಕೆ ನಮ್ಮಗಳ ಒಪ್ಪಿಗೆ ಇರುವುದಿಲ್ಲ.ಕಾರಣ ಈ ಹಿಂದೆ ಇದ್ದ, ಅಧ್ಯಕ್ಷರ ಮೇಲಿನ ಸುಳ್ಳು ಆರೋಪ ಅಥವಾ ಸುಳ್ಳು ಹೇಳಿಕೆಗಳನ್ನು ತಳ್ಳಿ ಹಾಕಿದ್ದೇವೆ, ಹಾಲಿ ಅವರೇ ಮುಂದುವರೆಯ ಬೇಕೆಂದು ಇಚ್ಚೆ ಮನೋಭಾವ ದಿಂದ ನಾವುಗಳು ಈ ದಿನ ಸ್ವ-ಇಚ್ಛೆಯಿಂದ ಸದರಿ ಸಭೆಯನ್ನು ಬಹಿಷ್ಕರಿಸಿ ಸಂಘದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆಯನ್ನು ನೀಡಿದ್ದಾವೆ. ಎಂದು.ಕೆ.ಕೊಟ್ರೇಶ ಅಧ್ಯಕ್ಷರು ,ಡಿ.ಸಿದ್ದಪ್ಪ ಉಪಾಧ್ಯಕ್ಷರು,ಎಸ್.ಪ್ರಕಾಶ ಖಜಾಂಚಿ, ಶಿರಿಬಿ ಕೊಟ್ರೇಶ,ಕೆ ಎಂ. ಚಂದ್ರಶೇಖರ, ಎಚ್. ವಿಜಯ್ ಕುಮಾರ್ ,ಸುವೇಭ್ ವಲಿ ಕೆ., ವೈ.ಹರ್ಷವರ್ಧನ,ತಗ್ಗಿನಕೇರಿ ಕೊಟ್ರೇಶ,ಎಸ್. ಪರಶುರಾಮ,ಬಿ.ಕೊಟ್ರೇಶ,ಹೆಚ್.ದಾದಪೀರ, ಪತ್ರಿಕೆಗೆ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು