ವಿಜೃಂಭಣೆಯಿಂದ ಜರುಗಿದ ನಿಡಸನೂರ ಶ್ರೀ ಗಂಗಾಧರೇಶ್ವರ ರಥೋತ್ಸವ.
ಹುನಗುಂದ ಏಪ್ರಿಲ್.27

ಹುನಗುಂದ ಸಮೀಪ ನಿಡಸನೂರ ಗ್ರಾಮದ ಆರಾಧ್ಯ ದೈವ ಶ್ರೀ ಗಂಗಾಧರೇಶ್ವರ ಜಾತ್ರ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಶರಣ ಸಂತ ಮಠಾಧೀಶರು ಹಾಗೂ ಸಾವಿರಾರು ಭಕ್ತರು ಸಮ್ಮುಖದಲ್ಲಿ ರಥೋತ್ಸವ ಜರಗಿತು ಬೆಳಗ್ಗೆ 11:30 ಕ್ಕೆ ಶ್ರೀ ಗಂಗಾಧರೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಒತ್ತು ಸಕಲ ವಾದ್ಯವಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೂಜ್ಯ ಸಲ್ಲಿಸಿದ ನಂತರ ಮಧ್ಯಾಹ್ನ 1:00ಗೆ ದೇವಸ್ಥಾನಕ್ಕೆ ಮಹಿಳೆಯರು ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನದ ಹೆಜ್ಜೆ ಹಾಕಿದರು ನಂತರ ದೇವಸ್ಥಾನದ ಪ್ರದಕ್ಷಣೆ ಹಾಕಿ ಶ್ರೀ ಗಂಗಾಧರೇಶ್ವರ ದೇವಸ್ಥಾನ ತಮ್ಮ ಭಕ್ತರು ಸೇವೆಯನ್ನು ಸಮರ್ಪಿಸಿದರು ರಥೋತ್ಸವಕ್ಕೆ ಕಳಸ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ವಿವಿಧ ವಾದ್ಯ ಮೇಳಗೊಳೊಂದಿಗೆ ಸಂಭ್ರಮ ಸಡಗರದಿಂದ ಜರುಗುತ್ತಿರುವ ದಾರಿ ಉದ್ದಕ್ಕೂ ಮೆರವಣಿಗೆ ಮೂಲಕ ಸಾವಿರಾರು ಭಕ್ತರು ಮಹಿಳೆಯರು ಮತ್ತು ಮಕ್ಕಳು ಶ್ರೀ ಗಂಗಾಧರೇಶ್ವರ ರಥೋತ್ಸವಕ್ಕೆ ಹೂವು ಹಣ್ಣು ನೈವಿದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿದರು ರಥದ ಸುತ್ತಲೂ ಅನೇಕ ಸೇವಾರ್ಥಿಗಳು ಶಂಭು ಶಿವನೇ ಬಸವ ಶಿವನೇ ಬಸವ ಎಂಬ ಜಯ ಘೋಷಣೆಗಳನ್ನು ಹೇಳುತ್ತಾ ರಥವನ್ನ ಎಳುತಿದ್ದು ದೃಶ್ಯ ಸಮನವಾಗಿತ್ತು ರಥಸಾಗಿ ಬರುವ ದಾರಿ ಉದ್ದಕ್ಕೂ ಎಲ್ಲಾ ಅಂಗಡಿಕಾರರು ತಮ್ಮ ಅಂಗಡಿಗಳ ಮುಂದೆ ರಂಗೋಲಿ ದೀಪ ಅಲಂಕಾರ ಮಾಡಿ ಭಕ್ತರಿಗೆ ಪ್ರಸಾದ ಸೇವಿಸಿದರು ಶಿವ ಬಾಳೆ ಕಂಬ ತೆಂಗಿನಗಿರಿ ಮತ್ತು ಬಣ್ಣ ಬಣ್ಣದ ಹೂವಿನ ಹಾರ ಸೇರಿದಂತೆ ವಿವಿಧ ವಸ್ತುಗಳನ್ನು ಅಲಂಕಾರಗಳಾಗಿ ಆಗಿಸಲು ರಥೋತ್ಸವಕ್ಕೆ ಉತ್ತತ್ತಿ ನಿಂಬೆಹಣ್ಣು ಹಾಗೂ ಬಾಳೆಹಣ್ಣು ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು ಬೆಳಗ್ಗೆಯಿಂದ ಶ್ರೀ ಗಂಗಾಧರೇಶ್ವರ ದರ್ಶನಕ್ಕೆ ನೂರಾರು ಭಕ್ತರು ಸರ್ತಿ ಸಾಲಿನಲ್ಲಿ ನಿಂತು ದರ್ಶನ್ ಪಡೆದರು ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಸೇರಿದಂತೆ ವಿವಿಧ ಪಟ್ಟಣ ಮತ್ತು ನಗರ ಪ್ರದೇಶಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು ಸಂಭ್ರಮ ನಿಡಸನೂರಗ್ರಾಮದ ಸಂಜೆ 5:00 ಗಂಟೆಯ ನಂದವಾಡಿಗಿ ಶ್ರೀ ಚನ್ನಬಸವ ದೇವರು ಸಂದರ್ಭದಲ್ಲಿ ಬೂದಿಹಾಳ ಗ್ರಾಮ ಪಂಚಾಯತಿ ಸದಸ್ಯ ಶಿವಪ್ಪ ಹುನುಗುಂದ ಮಲ್ಲನಗೌಡ ಗೌಡರ್ ಮಹಾಂತೇಶ್ ಬಂಡರಗಲ್ ಮಾಂತಪ್ಪ ಗದ್ದಿ ಈಜಪ್ಪ ಕೊಳ್ಳಿ ರಮೇಶ್ ತುರಡಗಿ ಗಂಗಾಧರ್ ಬಲಕುಂದಿ ಚೆನ್ನಯ್ಯ ವಸ್ತ್ರದ ಕಳಕಪ್ಪ ಅಂಗಡಿ ಗಂಗಾಧರ ಹನುಮಸಾಗರ ಗಂಗಾಧರ ಗೌಡರ ನಿಂಗಪ್ಪ ಬಲಕುಂದಿ ಸಂಗಪ್ಪ ಗೌಡರ ಶ್ರೀ ಗಂಗಾಧರೇಶ್ವರ ಭಕ್ತರು ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ.