ನುಡಿದಂತೆ ನಡೆದ ಕಾಂಗ್ರೇಸ್ ಸರ್ಕಾರ ಎಂದ – ಪ್ರಭುಗೌಡ ಲಿಂಗದಳ್ಳಿ.
ಸಾತಿಹಾಳ ಏಪ್ರಿಲ್.28





ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಾತಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳೀಗಳಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು, ಕರ್ನಾಟಕ ಸರ್ಕಾರ ಘೋಷಣೆ ಮಾಡಿ ಗ್ಯಾರಂಟಿಗಳನ್ನು ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷ, ಇನ್ನೂ ಮುಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಘೋಷಣೆ ಮಾಡಿದ ಗ್ಯಾರಂಟಿಗಳಾದ ಪ್ರತಿ ವರ್ಷ ಬಡ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ.

ರೈತರ ಸಾಲಮನ್ನಾ ,ಯುವ ಬೆಳಕು ಪ್ರತಿ ವರ್ಷ ಒಂದು ಲಕ್ಷ ವೇತನ, ವಿದ್ಯಾವಂತ, ನಿರುದ್ಯೋಗ ಯುವಕರಿಗೆ, ಯುವತಿಯರಿಗೆ ಮೊದಲ ಉದ್ಯೋಗ, ಶ್ರಮಿಕ ನ್ಯಾಯ, ಜಾತಿ ಗಣತಿ, ಇವು ಎಲ್ಲಾ ಗ್ಯಾರಂಟಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಡುಗಡೆ ಮಾಡುತ್ತವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಡಾಕ್ಟರ ಪ್ರಭುಗೌಡ ಲಿಂಗದಳ್ಳಿ ಯವರು ಹೇಳಿದರು.

ಹಾಗೂ ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪರಶುರಾಮ ದಿಂಡವಾರ ಹಾಗೂ ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಳಾನಗೌಡ ಪಾಟೀಲ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೀಜಾ ನಧಾಪ್ ಹಾಗೂ ಕೋರವಾರ ಜಿಲ್ಲಾಪಂಚಾಯತ್ ಗ್ಯಾರಂಟಿ ವಿತರಣೆಯ ಉಸ್ತುವಾರಿ ಶ್ರೀಕಾಂತ ಛಯಾಗೋಳ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಸದಸ್ಯರು ಮಾಂತೇಶ ಚಲವಾದಿ ಹಾಗೂ ಬೀರುಹಳ್ಳಿ ಉಪಸ್ಥಿತಿಯಲ್ಲಿ ಹಾಗೂ ಕುಮಾರ್ ರಾಠೋಡ್ ಸದಾಶಿವ ಕಡ್ಲೇವಾಡ್ ಅವರ ಜೊತೆಗೆ ಗ್ರಾಮದಲ್ಲಿ ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.