ಸಿ.ಎಂ ಮತ್ತು ಡಿ.ಸಿ.ಎಂ ಆಗಮನದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆ.

ಕೂಡ್ಲಿಗಿ ಏಪ್ರಿಲ್.28

ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಮ್ ಅವರ ಪರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯರವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು, ಶಾಸಕರು ಆಗಮಿಸಲಿದ್ದು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಡಾ ಎನ್ ಟಿ ಶ್ರೀನಿವಾಸ್ ಹೇಳಿದರು. ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿಕೊಂಡು ಯಾರೇ ಬಂದರೂ ಯಾವಾಗಲೂ ನಾವು ಸ್ವಾಗತಿಸುತ್ತೇವೆ. ಕ್ಷೇತ್ರದಲ್ಲಿ ನನಗೆ ಜಾತಿ ಪಕ್ಷ ಭೇಧ ಯಾವುದು ಇಲ್ಲ ಈ ಕ್ಷೇತ್ರದಲ್ಲಿ ಎಲ್ಲರೂ ನನ್ನವರೇ ಯಾರು ನನ್ನವರೇ ನನ್ನವರೇ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್ ಇನ್ನೂ ಸಾಕಷ್ಟು ಮಂತ್ರಿಗಳು ನಮ್ಮ ಕ್ಷೇತ್ರಕ್ಕೆ ಬರುವುದರಿಂದ ನನಗೆ ತುಂಬಾ ಸಂತೋಷವಾಗುತ್ತದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನ್ನನ್ನು ವಿಶ್ವಾಸ ಬಿಟ್ಟು ಹೆಚ್ಚಿನ ಮತಗಳ ಅಂತರದಿಂದ ಹೇಗೆ ಈ ಕ್ಷೇತ್ರದಲ್ಲಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಲೋಕಸಭಾ ಚುನಾವಣೆಯಲ್ಲಿ ಕೂಡ ನಮ್ಮ ಕ್ಷೇತ್ರದ ಮತದಾರರು ಹೆಚ್ಚಿನ ಅಂತರ ಕೊಡುತ್ತಾರೆ ಅನ್ನುವ ವಿಶ್ವಾಸವು ಕೂಡ ನನಗಿದೆ ಎಂದರು.ಈ ಸಂದರ್ಭದಲ್ಲಿ ವಿಜಯನಗರ ಕ್ಷೇತ್ರದ ಶಾಸಕರಾದ ಗವಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿ ನಮ್ಮ ದೇಶದಲ್ಲಿ ಬಿಜೆಪಿಯವರ ಮಾತಿಗೆ ಮರುಳಾಗಬೇಡಿ. ಕಾಂಗ್ರೆಸ್ ಪಕ್ಷ ಕೊಟ್ಟಂತ ಯೋಜನೆಗಳು ಅದು ಜನ ಪರವಾದಂತಹ ಯೋಜನೆಗಳು. ಅದಕ್ಕೆ ಈ ಬಾರಿ ಬಿಜೆಪಿ ಪಕ್ಷಕ್ಕೆ ನಾವು ತಕ್ಕ ಪಾಠ ಕಲಿಸಬೇಕು. ನಮ್ಮ ಬಳ್ಳಾರಿ ವಿಜಯನಗರ ಅಭ್ಯರ್ಥಿಯಾದ ಈ. ತುಕಾರಾಮ್ ಅವರನ್ನು ಹೆಚ್ಚಿನ ಮತ ಅಂತರದಿಂದ ಗೆಲ್ಲಿಸುವುದಕ್ಕೆ ನಾವೆಲ್ಲರೂ ಸೈನಿಕರಂತೆ ಹೋರಾಟ ಮಾಡಬೇಕು ಪ್ರತಿ ಗ್ರಾಮಗಳಲ್ಲಿಯೂ ಕೂಡ ತಮ್ಮ ತಮ್ಮ ಜವಾಬ್ದಾರಿಗಳು ಕಾರ್ಯಕರ್ತರು ಅಚ್ಚುಕಟ್ಟಾಗಿ ನಿಭಾಯಿಸ ಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಭೀಮ ನಾಯ್ಕ್ ಮಾಜಿ ಶಾಸಕ, ಕೆಎಂಎಫ್ ಅಧ್ಯಕ್ಷರು ಮಾತನಾಡಿ ಸರ್ವಧರ್ಮ, ಸಮಾನತೆ, ನಮ್ಮ ದೇಶದ ಸಂವಿಧಾನ ಉಳಿವಿಗಾಗಿ ಇಂದು ನಾವೆಲ್ಲರೂ ಹೋರಾಟ ಮಾಡಬೇಕು. ಸಾರ್ವಭೌಮತ್ವ ಸಂವಿಧಾನದ ಹೆಸರಿನಲ್ಲಿ ಗೆದ್ದು ಬಂದ ಮೋದಿ ಸರ್ಕಾರ ದಶ ವರ್ಷಕ್ಕೆ ಕಾಲಿಟ್ಟಿದೆ. 2014 ರಲ್ಲಿ ಎಲ್ಲರಿಗೂ ಆರ್ಥಿಕ ನೆರವು ಕಪ್ಪು ಹಣ ಹೊರೆ ದೇಶದಿಂದ ತಂದು ಇಲ್ಲಿಯ ಪ್ರಜೆಗಳ ಖಾತೆಗೆ ಹಂಚುವುದು, ನಿರುದ್ಯೋಗಿಗಳಿಗೆ 2 ಕೋಟಿ ಉದ್ಯೋಗ, ಸಮಾನ ಶಿಕ್ಷಣ ಹಾಗೂ ಸರ್ವರಿಗೂ ಸಮಾನತೆ ನೀಡುವ ಭರವಸೆಯಿಂದ ಗೆದ್ದು ಬಂದ ಸರ್ಕಾರ ಮಾಡಿದ್ದಾದರೂ ಏನು? ನರೇಂದ್ರ ಮೋದಿಯು ಗೆದ್ದಾಗ ರೈತರ ಸಾಲ, ರೈತರನ್ನು ಉದ್ದಾರ ಮಾಡುತ್ತೇನೆ ಹಾಗೂ ಅವರ ಬೆಂಬಲವಾಗಿರುತ್ತೇವೆಂದು ಹೇಳಿದರು. ಆದರೆ ಏನು ಆಗಲಿಲ್ಲ. ಹೊರ ದೇಶದಲ್ಲಿ ಕಪ್ಪು ಹಣವನ್ನು ತರುತ್ತೇನೆಂದು ಹೇಳಿದರು. ಈವರೆಗೂ ನಯಾ ಪೈಸೆ ತಂದಿಲ್ಲ. ನಮ್ಮ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈ ತುಕಾರಾಮ್ ರವರ ಗೆಲುವಿಗಾಗಿ ಇಂದು ನಾವೆಲ್ಲರೂ ಹೋರಾಟ ಮಾಡಬೇಕು ಎಂದರು.

ಈ ವೇಳೆ ಹರಪ್ಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ ಕಾಂಗ್ರೆಸ್ ಪಕ್ಷ ಜನ ಪರವಾದ ಯೋಜನೆಗಳನ್ನ ಕೊಟ್ಟಿದೆ. ಆದರೆ, ಬಿಜೆಪಿ ಬರೀ ಅದಾನಿ, ಅಂಬಾನಿಯವರ ಬಗ್ಗೆ ವಿಚಾರ ಮಾಡುತ್ತದೆ. ಯಾವ ಪಕ್ಷಕ್ಕೆ ಮತ ಹಾಕಿದರೆ ಒಳ್ಳೆಯದು ಎಂದು ಯೋಚಿಸಿ ಹೇಳಿದರು. ಅಖಂಡ ಬಳ್ಳಾರಿ ವಿಜಯನಗರ ಅಭ್ಯರ್ಥಿಯಾದ ಈ.ತುಕಾರಾಮ್ ಅವರು ಸರಳ ಸಜ್ಜನಿಕೆ ವ್ಯಕ್ತಿ ಇಂತಹ ವ್ಯಕ್ತಿ ಹುಡುಕಿದರೂ ನಮಗೆ ಸಿಗುವುದಿಲ್ಲ. ಇಂಥ ಒಳ್ಳೆಯ ವ್ಯಕ್ತಿಯನ್ನು ಹೆಚ್ಚಿನ ಮತ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟಿಗೆ ಕಳಿಸಬೇಕು. ನಮ್ಮ ಕರ್ನಾಟಕದ ಬಗ್ಗೆ ಧ್ವನಿಯೆತ್ತುವುದಕ್ಕೆ ನಮ್ಮ ಕರ್ನಾಟಕದಿಂದಲೇ ಹೆಚ್ಚು ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶಿರಾಜ್ ಶೇಖ್ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಾವುಗಳು ಹೇಗೆ ಕೆಲಸ ಮಾಡಿದ್ದೀರಿ ಅದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲಾರು ಸೇರಿ ಕೆಲಸ ಮಾಡಬೇಕು. ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಬಾರಿ ನಾವು ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಈ. ತುಕಾರಾಮ್ ಅವರನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳಿಸುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕೆಂದರು.ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ. ತುಕಾರಾಮ್, ಶಾಸಕರಾದ ಗವಿಯಪ್ಪ. ಡಾ. ಎನ್ ಟಿ ಶ್ರೀನಿವಾಸ್. ಶಾಸಕಿಯಾದ ಲತಾ ಮಲ್ಲಿಕಾರ್ಜುನ್. ಮಾಜಿ ಶಾಸಕರಾದ ಭೀಮ ನಾಯ್ಕ್. ಜಿಲ್ಲಾಧ್ಯಕ್ಷರಾದ ಶಿರಾಜ್ ಶೇಖ್, ಆಂಜನೇಯಲು, ಶಿವಯೋಗಿ, ಬಳ್ಳಾರಿ ನಗರ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್, ಮಾಜಿ ವಿಧಾನ ಪರಿಷತ್ ಸದಸ್ಯರು ಸ್ವಾಮಿ, ದೊಡ್ಡರಾಮಣ್ಣ, ಎಸ್ ವೆಂಕಟೇಶ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಎನ್ ಟಿ ತಮ್ಮಣ್ಣ, ನಾಗಮಣಿ ಜಿಂಕಲ್ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ , ಉಮೇಶ್, ಕಾವಲಿ ಶಿವಪ್ಪ ನಾಯಕ, ರಫಿಕ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button