ಕೆರುಟಗಿ ಗ್ರಾಮದಲ್ಲಿ ಜೀವ ತಗೊಳ್ಳಿ, ನೀರು ಕೊಡಿಗಾಗಿ, ಆಗ್ರಹಿಸಿ – ಧರಣಿ ಸತ್ಯಾಗ್ರಹ.
ಕೆರುಟಗಿ ಏಪ್ರಿಲ್.30

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ದೇವರ ಹಿಪ್ಪರಗಿ ಹಾಗೂ ವಲಯ ಶಾಖೆ ಕಲಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕೆರುಟಗಿ ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದ್ದು, ಸ್ಥಳೀಯ ಆಡಳಿತ ಹಾಗೂ ತಾಲೂಕಾ ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು,ಕರ್ನಾಟಕ ಸರ್ಕಾರ ಬೇಸಿಗೆಯ ಕಾಲದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯೋಜನೆಗಳನ್ನು ರೂಪಿಸಿದ್ದು ಹಾಗೂ ವಿಶೇಷ ಅನುದಾನ ಮಂಜೂರಾತಿ ಇದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿದರೂ ಕೂಡ ಕೆರುಟಗಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸಲು ಆಗುತ್ತಿಲ್ಲ, ಇಂದಿನ ಸರ್ಕಾರಕ್ಕೆ ನಾಚಿಕೆಯಾಗುವ ಸಂಗತಿಯಾಗಿದೆ.ಆಡಳಿತ ವ್ಯವಸ್ಥೆಯನ್ನು ಖಂಡಿಸಿ ಖಾಲಿ ಕೊಡಗಳನ್ನು ಇಟ್ಟುಕೊಂಡು ಮಹಿಳಿಯರು ಹಾಗೂ ಗ್ರಾಮಸ್ಥರು ಕೂಡಿ ಸುಮಾರು ಮೂರು ಗಂಟೆಗಳ ಕಾಲ ಸಿಂದಗಿ – ಕಲಕೇರಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಗ್ರಾಮದ ಸಾರ್ವಜನಿಕರು ಸುಡು ಬಿಸಿಲನ್ನು ಲೆಕ್ಕಿಸದೆ ರಸ್ತೆ ರೋಖೋ ಚಳುವಳಿ ಹಾಗೂ ಬೃಹತ್ ಪ್ರತಿಭಟನಾ ಹಮ್ಮಿಕೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಎಂ ಟಿ ಅಂಗಡಿ ಮೇಡಂ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದಲಿತ ಮುಖಂಡರು ಆದ ಶ್ರೀ ಲಕ್ಕಪ್ಪ ಬಡಿಗೇರ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಬಸವರಾಜ ಚಿಕ್ಕಸಂಸಿ ಸರ್ಕಾರಿ ಜಿವೋಲಿಸ್ಟ, ಕಲಕೇರಿ ಪೊಲೀಸ್ ಠಾಣೆ ಪಿಎಸ್ಐ ರೋಹಿಣಿ ಪಾಟೀಲ್ ಮೇಡಂ , ಪರಸುರಾಮ ಬಡಿಗೇರ, ಶಿವಾನಂದ ವಾಲಿಕಾರ, ಅಶೋಕ್ ಗುಡಿಸಲಮನಿ, ರಾಮನಗೌಡ ಚಟ್ಟರಕಿ, ಸಿದ್ರಾಮಪ್ಪ ಮಾದರ, ಪರಸುರಾಮ ದೊಡಮನಿ, ಬಾಬು ಮೇಲಿನಮನಿ, ಬಾಬು ರಾಠೋಡ, ಚಂದ್ರು ಬಡಿಗೇರ, ಮುತ್ತು ಅಂಬಳನೂರ, ಪ್ರಕಾಶ್ ಪಡಶೆಟ್ಟಿ, ಇನ್ನೂ ಗ್ರಾಮದ ಹಿರಿಯರು, ಯುವಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.