ಕಾಂಗ್ರೇಸ್ ಕಾರ್ಯಕರ್ತರ ಬೃಹತ್ ಸಮಾವೇಶ.
ಹೂವಿನ ಹಿಪ್ಪರಗಿ ಮೇ.03

ದೇವರ ಹಿಪ್ಪರಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೂವಿನ ಹಿಪ್ಪರಗಿ ಗ್ರಾಮದಲ್ಲಿ ವಿಜಯಪುರ ಲೋಕಸಭಾ ಚುನಾವಣೆಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ಅವರು ಚುನಾವಣೆ ಪ್ರಚಾರ ನಿಮಿತ್ತವಾಗಿ ಬಾರಿ ಜನ ಬೆಂಬಲ ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬೃಹತ್ ಸಮಾವೇಶ ನಡೆಯಿತು, ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಗೃಹ ಬಳಕೆಯ ಅಡಿಗೆ ಅನಿಲ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ರೈತರು ಬಳಸುವ ವಸ್ತುಗಳ ಹಾಗೂ ಮಕ್ಕಳು ಬಳಸುವ ಪೆನ್ನ್ ನೋಟ್ ಬುಕ್ ಸಹಿತ ಹಲವಾರು ವಸ್ತುಗಳ ಮೇಲೆ ಜಿಎಸ್ ಟಿ ಹೊರೆ ಬಿದ್ದಿದೆ. ಮೋದಿಯವರು ಅಚ್ಚೇದಿನ ಎನ್ನುತ್ತಾರೆ ಬಡವರ ಸಂಕಷ್ಟದ ದಿನಗಳನ್ನು ತಂದಿದ್ದಾರೆ ರೈತರಿಗೆ ೧೫ ಲಕ್ಷ ಹಣ ನೀಡುತ್ತೇನೆ ಬೇಟಿ ಬಚಾವ್ ಭೇಟಿ ಪಡಾವ್ ಎಂದು ಸುಳ್ಳು ಹೇಳುವ ಮೂಲಕ ೧೦ ವರ್ಷಗಳ ಕಾಲ ಕಳೆದಿದ್ದಾರೆ.

ನಮ್ಮ ಜಿಲ್ಲೆಯಿಂದ ಮೂರು ಬಾರಿ ಸಂಸದರಾಗಿ ತೆರಳಿದರು ನಮ್ಮ ಜಿಲ್ಲೆಯ ಯಾವುದೇ ಅಭಿವೃದ್ಧಿ ಕೆಲಸ ಹಾಗೂ ಅವರಿಂದ ಏನೂ ಉಪಯೋಗವಾಗಿಲ್ಲ ಈ ಬಾರಿ ಅವರನ್ನು ಬದಲಿಸಿ ನಮ್ಮ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿ ಕೊಂಡರು, ಇದೆ ವೇಳೆ ಕಾಂಗ್ರೆಸ್ ಪಕ್ಷದ ಜನಪರ ಕಾಳಜಿ ತತ್ವ ಸಿದ್ದಾಂತ ಆರ್ದಶಗಳಿಗೆ ಮನಸೋತು ಆನೇಕರು ಬಿಜೆಪಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದರಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಆನೆ ಬಲ ಬಂದಿದೆ, ಎಂದು ಬೃಹತ್ ಕೈಗಾರಿಕೆ ಸಚಿವರಾದ ಎಂ ಬಿ ಪಾಟೀಲ ಅವರು ಮಾತನಾಡಿದರು, ಈ ಸಂದರ್ಭದಲ್ಲಿ ಎಐಸಿಸಿ ಉಸ್ತವಾರಿಗಳಾದ ಸೈಯದ್, ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆನಂದಗೌಡ ದೊಡ್ಡಮನಿ,ಪ್ರಭುಗೌಡ ಲಿಂಗದಳ್ಳಿ, ಸುಭಾಷ್ ಛಯಾಗೋಳ,ಇನ್ನೂ ಆನೇಕರು ಮಾತನಾಡಿದರು ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿ ಹಾಗೂ ಕಾಂಗ್ರೆಸ್ ಮುಖಂಡರಾದ ಬಿ ಎಸ್ ಪಾಟೀಲ ಯಾಳಗಿ ಬಾಳನಗೌಡ ಪಾಟೀಲ ರಮೀಜಾ ನಧಾಪ್ ಬಶಿರ್ಶೇಟ ಬೇಪಾರಿ ಸಂತೋಷ ದೊಡ್ಡ ಮನಿ ಸಂಗಮೇಶ ಛಯಾಗೋಳ ರಮೇಶ ಗುಬ್ಬೇವಾಡ ಪ್ರಕಾಶ ಗುಡಿಮನಿ ಪರಸುರಾಮ ದಿಂಡವಾರ ಸುನಿಲ್ ಕನಮಡಿ ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ. ದೇವರ ಹಿಪ್ಪರಗಿ.