ಗ್ಯಾರಂಟಿ ಯೋಜನೆಗಳು, ಜನರನ್ನು ಯಾಮಾರಿಸುವ ಕಾಂಗ್ರೆಸ್ಸಿನ ತಂತ್ರಗಾರಿಕೆ.
ಇಂಡಿ ಮೇ.03

ಕಾಂಗ್ರೇಸ ಸರ್ಕಾರ ರಾಜ್ಯದ ಜನತೆಗೆ ಪಂಚಗ್ಯಾರಂಟಿ ಯೋಜನೆಯ ಮೂಲಕ ಜನರಿಗೆ ಯಾಮಾರಿಸಿ, ಪ್ರತಿಯೊಂದು ದರಗಳನ್ನು ದುಪ್ಪಟ್ಟು ಮಾಡಿ ರಾಜ್ಯದ ಜನತೆ ದುಬಾರಿ ಜೀವನ ಸಾಗಿಸುವಂತೆ ಮಾಡಿದೆ. ಇವರುಗಳು ಹಾಲಿನಿಂದ ಹಿಡಿದು ಮದ್ಯ ಹಾಗೂ ಸ್ಟಾಂಪ್ ಪೇಪರನ್ನು ಐದು ಪಟ್ಟು ಏರಿಸಿ ಗ್ಯಾರಂಟಿ ಕಾರ್ಡ್ ಗಳನ್ನು ಹಂಚುವುದು ಜನರಿಗೆ ಯಾಮಾರಿಸುವ ಕಾಂಗ್ರೆಸ್ಸಿನ ತಂತ್ರಗಾರಿಕೆಯಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಜೆಡಿಎಸ್ ಮನವಿ ಮಾಡಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಆಲಮಟ್ಟಿ ಅಣೆಕಟ್ಟೆಯ ಯೋಜನೆ ಜಾರಿಗೆ ತಂದು ಬರದ ನಾಡಿಗೆ ಭಗೀರಥರಾಗಿದ್ದಾರೆ, ಇದೆ ರೀತಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ಮುಕ್ತ ಆಡಳಿ ಹಾಗೂ ಸುರಕ್ಷತ ಭಾರತದ ಗ್ಯಾರಂಟಿಯನ್ನು ನಂಬಿ ವಿಜಯಪುರ ಲೋಕಸಭೆಯ ಎನ್ ಡಿ ಎ ಅಭ್ಯರ್ಥಿಗಳಾದ ರಮೇಶ ಜಿಗಜಿಣಗಿವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ವಿನಂತಿ, ಸೋಮಶೇಖರ್ ಅವಜಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆಗಳು ಹಾಗೂ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆಗಳು ತುಲನೆ ಮಾಡಿದಾಗ ಸಂಸದ ರಮೇಶ ಜಿಗಜಿಣಗಿಯವರು ಈ ಜಿಲ್ಲೆಗೆ ಮಾಡಿದ ಕೇಲಸವನ್ನು ಕಣ್ಣಾರೆ ಕಂಡು ಮತಚಲಾಯಿಸಿ ಎಂದು ಜೆಡಿಎಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ.