ಚುನಾವಣಾ ನಿಮಿತ್ತ ಪಥ ಸಂಚಲನ ಜರುಗಿತು.
ಕೊಟ್ಟೂರು ಮೇ.01

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ದಿನಾಂಕ 30 ಏಪ್ರಿಲ್ 2024 ರ ಮಂಗಳವಾರ ದಂದು ನಾಗರಕಟ್ಟೆ ಹನುಮನಹಳ್ಳಿ ತೂಲಹಳ್ಳಿ ಚಿಹ್ನೆನಹಳ್ಳಿ ಕಾಳಾಪುರ ಮತ್ತು ಉಜ್ಜಿನಿ ಗ್ರಾಮಗಳಲ್ಲಿ ದಿನಾಂಕ 7 ಮೇ 2024 ರಂದು ನಡೆಯಲಿರುವ ಚುನಾವಣಾ ನಿಮಿತ್ತ ಪಥ ಸಂಚಲವನ್ನು ಕೈಗೊಳ್ಳಲಾಗಿರುತ್ತದೆ. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭಿತವಾಗಿ ಮತ ಚಲಾಯಿಸಬೇಕು ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುವ ಒಂದು ಮತ ತುಂಬಾ ಪ್ರಾಮುಖ್ಯವಾಗಿದೆ ಹೀಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವುದು ತಮ್ಮ ಹಕ್ಕು ಎಂದು ಕೊಟ್ಟೂರು ವೃತ್ತ ನಿರೀಕ್ಷಕರಾದ ವೆಂಕಟಸ್ವಾಮಿ ರವರು ನೇತೃತ್ವ ವಹಿಸಿರುತ್ತಾರೆ ನೂರ್ ಆಹಮದ್ ಹೆಡ್ ಕಾನ್ಸ್ಟೇಬಲ್ ಮತ್ತು ಎಚ್ ಬಿ ಹಳ್ಳಿ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಅನ್ವರ್ ಕೇರಳದ ಸ್ಪೆಷಲ್ ಆರ್ಮ್ಸ್ ಪೊಲೀಸ್ ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು.