ಸರ್ಕಾರಿ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ – ಕ್ರೀಡಾಕೂಟ ಜರುಗಿತು.
ಬಗಲೂರ ಸ.10

ಆಲಮೇಲ ತಾಲೂಕಿನ ಮೋರಟಗಿ ವಲಯ ಮಟ್ಟದ ಕ್ರೀಡಾಕೂಟಗಳನ್ನು ಬಗಲೂರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾ ಕೂಟಗಳಲ್ಲಿ ಸರಕಾರಿ ಪ್ರೌಢ ಶಾಲೆ ಸೋಮಜಾಳ ವಿದ್ಯಾರ್ಥಿ/ನಿಯರುಗಳು ಥ್ರೋ ಬಾಲನಲ್ಲಿ ಪ್ರಥಮ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲ್ಲೂಕ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಸ್.ಡಿ.ಎಮ್.ಸಿ ಸದಸ್ಯರು ಮುಖ್ಯಪಾಧ್ಯಾಯರು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಭೀಮರಾಯ ಅರಳಗುಂಡಗಿ, ಎನ್.ಎಸ್ ಬಿರಾದಾರ, ಸಂತೋಷ ಅಮರಗೊಂಡ, ಸೂರ್ಯಕಾಂತ್ ಸಾಲೋಟಗಿ, ರಾಕೇಶ್ ಬಿರಾದಾರ. ಉಪಸ್ಥಿತರಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ