ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ.
ಕಲಕೇರಿ ಮೇ.08

ತಾಳಿಕೋಟಿ ತಾಲೂಕಿನ ಕಲಕೇರಿ ಸಮೀಪದ ಬೆಕಿನಾಳ, ಆಸ್ಕಿ, ಬೂದಿಹಾಳ ಪಿ.ಟಿ. ಹುಣಶ್ಯಾಳ ಗ್ರಾಮದ ಕೆರೆ ನೀರು ತುಂಬಿಸಬೇಕು, ಹಾಗೂ ಒತ್ತುವರೆಯಾದ ಕೆರೆಯನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಅಕ್ರಮವಾಗಿ ಉಳಿಮೆ ಮಾಡುತ್ತಿರುವ ರೈತರನ್ನು ಖಾಲಿ ಮಾಡಿಸಿ ಕೆರೆ ನೀರು ತುಂಬುವ ಯೋಜನೆಯಡಿ ಕೆರೆ ತುಂಬಿಸಬೇಕು ಎಂದು ಆಗ್ರಹಿಸಿ ತಾಳಿಕೋಟೆ ತಾಲೂಕಾ ತಹಶಿಲ್ದಾರರಿಗೆ ಮನವಿ ಸಲ್ಲಿಸಿ , ಕೂಡಲೇ ನೀರು ತುಂಬುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಂಗಮೇಶ್ ಸಗರ ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಾಳಿಕೋಟೆ ತಾಲೂಕಿನ ಅಧ್ಯಕ್ಷರು ಶ್ರೀಶೈಲ ವಾಲಿಕಾರ್. ಕಲಕೇರಿ ಹೋಬಳಿ ಅಧ್ಯಕ್ಷರು ಮೈಬೂಬಬಾಷ ಮನಗೂಳಿ. ಬೆಕಿನಾಳ ಅಧ್ಯಕ್ಷರು ದೇವಿಂದ್ರಪ್ಪ ಗೌಡ ಪಾಟೀಲ್. ತಾಳಿಕೋಟೆ ತಾಲೂಕಿನ ತಹಶಲ್ದಾರರಿಗೆ ಮನವಿಯನ್ನು ಸಲ್ಲಿಸಿ ಕೂಡಲೇ ಕೆರೆಗಳನ್ನು ತುಂಬಿಸಬೇಕು ಇಲ್ಲದಿದ್ದರೆ ಮುಂದಿನ ದಿನ ಮಾನದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.