ಜಗತ್ತು ಕಂಡ ಅಪ್ರತಿಮ ದಾರ್ಶನಿಕ ಶ್ರೀ ಬಸವೇಶ್ವರರು – ರಾಜು ಪಿರಂಗಿ.
ಕೂಡ್ಲಿಗಿ ಮೇ.11

ಈ ಜಗತ್ತು ಕಂಡಂತಹ ಅಪ್ರತಿಮ ದಾರ್ಶನಿಕರು ಶ್ರೀ ಬಸವೇಶ್ವರರು ಎಂದು ತಹಶೀಲ್ದಾರ್ ರಾಜು ಪಿರಂಗಿ ನುಡಿದರು. ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಬಸವೇಶ್ವರರ ಜಯಂತಿ ಹಾಗೂ ಮಹಾಸಾದ್ವೀ ಸತಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಸರಳ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸುಮಾರು 850 ವರ್ಷಗಳ ಹಿಂದೆ ಅವರು ಕೈಗೊಂಡ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ರಾಂತಿಯು ಇಂದಿಗೂ ಸಹ ಇಡೀ ಜಗತ್ತಿಗೆ ಆದರ್ಶ ಪ್ರಾಯವಾಗುವುದರ ಮೂಲಕ “ಸಾಂಸ್ಕೃತಿಕ ರಾಯಭಾರಿ” ಎನಿಸಿದ್ದಾರೆ. ಬಹುಶಃ ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪ್ರಥಮ ಬೀಜವನ್ನು ಕನ್ನಡದ ನೆಲದಲ್ಲಿ, ಶ್ರೀ ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಮೊಟ್ಟ ಮೊದಲ ಸಂಸತ್ತಿನ ಮಾದರಿಯಾದ “ಅನುಭವ ಮಂಟಪ” ಅಸ್ತಿತ್ವಕ್ಕೆ ತಂದವರು ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಆಗಿದ್ದಾರೆ ಎಂದರು. ಶ್ರೀಶೈಲ ಮಲ್ಲಿಕಾರ್ಜುನನ ನೆನೆದು ಅನೇಕ ಪವಾಡಗಳನ್ನು ತೋರುವ ಮೂಲಕ ಜಗತ್ತಿಗೆ ಸತಿ ಎಂಬುದರ ಮಹತ್ವವನ್ನು ಸಾರಿದ ಸಾದ್ವೀ ಸತಿ ಶಿರೋಮಣಿ “ಹೇಮರೆಡ್ಡಿ ಮಲ್ಲಮ್ಮ” ಇಂದಿಗೂ ಪ್ರಸ್ತುತ ಎನಿಸಿದ್ದಾರೆ ಎಂದರು. ತಾಲೂಕು ಘಟಕದ ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ಎ.ಎಂ. ವೀರಯ್ಯ ಮಾತನಾಡಿ, ಮಾನವನ ಸ್ವಾರ್ಥ ಕೇಂದ್ರೀಕೃತ ಚಿಂತನೆಗಳು ಇಂದು ಯುದ್ದದ ಭೀತಿಯನ್ನು ತಂದೊಡ್ಡವ ವಾತವರಣ ನಿರ್ಮಾಣವಾದ ಈ ಕಾಲಘಟ್ಟದಲ್ಲಿ, ಅನೇಕ ದೇಶಗಳಲ್ಲಿ ಮನುಷ್ಯರಿಗೆ ಕನಿಷ್ಠ ಸೌಕರ್ಯಗಳೂ ಇಲ್ಲವಾಗಿವೆ. ಇಂತಹ ಅಶಾಂತಿ ತುಂಬಿದ ಜಗತ್ತಿಗೆ ಶಾಂತಿ, ಸಮಾಧಾನ, ಸಾಂತ್ವನದ ಅವಶ್ಯಕತೆ ಇದೆ. ಇವನಾರವ, ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಎಂದೆನಿಸಿ, ಎಲ್ಲರೂ ಒಂದೇ ಕುಟುಂಬದ ಸದಸ್ಯರಮತೆ ಬಾಳಿದರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವುದರಲ್ಲಿ ಸಂಶಯವಿಲ್ಲ. ಹೀಗಾಗಿ, ಬಸವೇಶ್ವರರ ವಚನಗಳು ಇಂದು ಪ್ರಸ್ತುತವಾಗಿವೆ ಎಂದರು. ಇಂತಹ ವಿಶ್ವ ಸಂದೇಶವನ್ನು ನೀಡಿದ ಅಣ್ಣನವರ ಪ್ರತಿಮೆಯನ್ನು ಲಂಡನ್ ಬ್ರಿಟಿಷ್ ಪಾರ್ಲಿಮೆಂಟಿನ ಎದುರು ಥೇಮ್ಸ್ ನದಿಯ ದಡದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವುದರ ಮೂಲಕ ವಿಶ್ವನಾಯಕನಾಗಿ ಬಸವಣ್ಣ ಕಂಗೊಳಿಸಿದ್ದಾನೆ ಎಂದರು. ರಾಜ್ಯ ನೌಕರರ ಸಂಘ, ತಾಲೂಕು ಘಟಕದ ಪಾಲ್ತೂರ್ ಶಿವರಾಜ್ ಮಾತನಾಡಿದರು. ಉಪತಹಶೀಲ್ದಾರ್ ಮಹಮ್ಮದ್‌ಗೌಸ್, ವೀರಶೈವ ಮುಖಂಡರಾದ ಕೋಗಳಿ ಮಂಜುನಾಥ, ಟಿ.ಜಿ.ಮಲ್ಲಿಕಾರ್ಜುನಗೌಡ, ಕೂಡ್ಲಿಗಿ ಶಾಸಕರ ಆಪ್ತ ಸಹಾಯಕ ಎಂ. ಮರುಳಸಿದ್ಧಪ್ಪ, ಹಿರೇಹೆಗ್ಡಾಳ್ ಬಣಕಾರ್ ಮೂಗಪ್ಪ, ಎ.ಇ.ಇ. ಮಲ್ಲಿಕಾರ್ಜುನ, ಬಿಇಒ ಪದ್ಮನಾಭ ಕರ್ಣಂ, ಕಸಾಪ ತಾ.ಘ. ಅಧ್ಯಕ್ಷ ವೀರೇಶ್ ಅಂಗಡಿ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಹಿ.ಮ. ಪಟ್ಟಣ ಪಂಚಾಯಿತಿ ದಸ್ಯ ಸಚಿನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್, ಚುನಾವಣೆ ಸಿಬ್ಬಂದಿ ಶಿವಕುಮಾರ್, ವಾಸುದೇವ್ ಸೇರಿದಂತೆ ಇನ್ನೂ ಹಲವಾರು ಮುಖಂಡರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್ ಕಾನಾ ಹೊಸಹಳ್ಳಿ.